ಗಲ್ಲುಶಿಕ್ಷೆ ನೀಡುವಾಗ ಕತ್ತಿಗೆ ನೇಣು ಹಾಕುವ ಬದಲು ಬೇರೆ ಮಾರ್ಗದ ಬಗ್ಗೆ ಸುಪ್ರೀಂ ಚಿಂತನೆ

Published : Oct 06, 2017, 05:24 PM ISTUpdated : Apr 11, 2018, 01:07 PM IST
ಗಲ್ಲುಶಿಕ್ಷೆ ನೀಡುವಾಗ ಕತ್ತಿಗೆ ನೇಣು ಹಾಕುವ ಬದಲು ಬೇರೆ ಮಾರ್ಗದ ಬಗ್ಗೆ ಸುಪ್ರೀಂ ಚಿಂತನೆ

ಸಾರಾಂಶ

ಜೀವನದ ಅಂತ್ಯವನ್ನು ಮಾನವೀಯತೆ ಹಾಗೂ ಘನತೆಪೂರ್ಣವಾಗಿ ಮಾಡಬೇಕು ಎನ್ನುವ 10 ವರ್ಷಗಳಿಂದ ಕೇಳಿ ಬರುತ್ತಿರುವ ವಾದವನ್ನು ಸುಪ್ರೀಂಕೋರ್ಟ್ ಮತ್ತೆ ಮುನ್ನಲೆಗೆ ತಂದಿದೆ. ಗಲ್ಲುಶಿಕ್ಷೆಗೊಳಗಾದವರಿಗೆ ನೇಣಿಗೆ ಕುಣಿಕೆ ಹಾಕುವುದನ್ನು ನಿಷೇಧಿಸಿ ಬೇರೆ ರೀತಿಯಲ್ಲಿ ಯಾಕೆ ಮರಣ ದಂಡನೆ ನೀಡಬಾರದೆಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. 3 ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.

ನವದೆಹಲಿ (ಅ.06): ಜೀವನದ ಅಂತ್ಯವನ್ನು ಮಾನವೀಯತೆ ಹಾಗೂ ಘನತೆಪೂರ್ಣವಾಗಿ ಮಾಡಬೇಕು ಎನ್ನುವ 10 ವರ್ಷಗಳಿಂದ ಕೇಳಿ ಬರುತ್ತಿರುವ ವಾದವನ್ನು ಸುಪ್ರೀಂಕೋರ್ಟ್ ಮತ್ತೆ ಮುನ್ನಲೆಗೆ ತಂದಿದೆ. ಗಲ್ಲುಶಿಕ್ಷೆಗೊಳಗಾದವರಿಗೆ ನೇಣಿಗೆ ಕುಣಿಕೆ ಹಾಕುವುದನ್ನು ನಿಷೇಧಿಸಿ ಬೇರೆ ರೀತಿಯಲ್ಲಿ ಯಾಕೆ ಮರಣ ದಂಡನೆ ನೀಡಬಾರದೆಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. 3 ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.

ಗಲ್ಲುಶಿಕ್ಷೆಯನ್ನು ಇನ್ನಷ್ಟು ಘನತೆಪೂರ್ಣವಾಗಿ ಮಾಡಬೇಕು. ಕತ್ತಿಗೆ ಕುಣಿಕೆ ಹಾಕುವುದು ಸರಿಯಲ್ಲ ಎಂದು ಪಿಐಎಲ್ ಸಲ್ಲಿಸಲಾಗಿತ್ತು. ಮುಖ್ಯ ನ್ಯಾ. ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ಇಂದು ಅರ್ಜಿಯ ವಿಚಾರಣೆ ನಡೆಸಿತು. ಗಲ್ಲುಶಿಕ್ಷೆಗೆ ಒಳಗಾದವರನ್ನು ಬೇರೆ ಯಾವುದಾದರೂ ಮಾರ್ಗದಲ್ಲಿ ಮರಣದಂಡನೆ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು. ಅಪರಾಧಿಗಳನ್ನು ನೋವಿನಿಂದ ಸಾಯಿಸುವ ಬದಲು ಶಾಂತಿಯುತವಾಗಿ ಸಾಯುವಂತೆ ಮಾಡಬೇಕು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ಮರಣದಂಡನೆಗೆ ಒಳಗಾದವರಿಗೆ ಸಾಮಾನ್ಯವಾಗಿ  ಕತ್ತಿಗೆ ನೇಣು ಹಾಕಿ ಸಾಯಿಸುವ ಪದ್ಧತಿ 60 ದೇಶಗಳಲ್ಲಿ ಇದೆ. ಇನ್ನು ಕೆಲವೆಡೆ ಇಂಜೆಕ್ಷನ್, ಗುಂಡು ಹಾರಿಸುವುದು, ವಿದ್ಯುತ್ ನೀಡಿ ಹಾಗೂ ಬೇರೆ ವಿಧಾನಗಳಲ್ಲೂ ಸಾಯಿಸಲಾಗುತ್ತದೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಾಗಲಕೋಟೆ: ಬುದ್ಧಿಮಾಂದ್ಯನ ಮೇಲೆ ಅಮಾನವೀಯ ಹಲ್ಲೆ
ವೀರವೈಶ ಲಿಂಗಾಯತ ಸಮಾಜ ಒಡೆದಾಳಲು ಯತ್ನ: ವಿಜಯೇಂದ್ರ