ತನ್ನ ತಾಯಿಗೇ ಸವತಿಯಾದ ಮಗಳು!

By Suvarna Web DeskFirst Published Apr 18, 2017, 9:59 AM IST
Highlights

ಮಗಳು ಹಾಗೂ ತಾಯಿ ಇವರಿಬ್ಬರ ಪತಿಯೂ ಒಬ್ಬನೇ ಆದರೆ? ಬಹುಶಃ ಇಂತಹ ಕಲ್ಪನೆ ಕನಸಲ್ಲೂ ಬರಲು ಸಾಧ್ಯವಿಲ್ಲ ಆದರೆ ಇದು ನಿಜಕ್ಕೂ ನಡೆದಿದೆ. ಬಾಂಗ್ಲಾದೇಶದ ಮಂಡಿ ಎಂಬ ಜನಾಂಗದಲ್ಲಿ ಇಂತಹ ವಿಲಕ್ಷಣ ಪದ್ಧತಿ ಹಲವಾರು ವರ್ಷಗಳಿಂದ ಸಾಗಿ ಬಂದಿದೆ.

ನವದೆಹಲಿ(ಎ.18): ಮಗಳು ಹಾಗೂ ತಾಯಿ ಇವರಿಬ್ಬರ ಪತಿಯೂ ಒಬ್ಬನೇ ಆದರೆ? ಬಹುಶಃ ಇಂತಹ ಕಲ್ಪನೆ ಕನಸಲ್ಲೂ ಬರಲು ಸಾಧ್ಯವಿಲ್ಲ ಆದರೆ ಇದು ನಿಜಕ್ಕೂ ನಡೆದಿದೆ. ಬಾಂಗ್ಲಾದೇಶದ ಮಂಡಿ ಎಂಬ ಜನಾಂಗದಲ್ಲಿ ಇಂತಹ ವಿಲಕ್ಷಣ ಪದ್ಧತಿ ಹಲವಾರು ವರ್ಷಗಳಿಂದ ಸಾಗಿ ಬಂದಿದೆ.

ಇಲ್ಲಿ ವಾಸವಿರುವ 30 ವರ್ಷದ ಓರಾಲಾ ಎಂಬಾಕೆಯ ತಂದೆ ಆಕೆ ತುಂಬಾ ಚಿಕ್ಕವಳಾಗಿದ್ದಾಗಲೇ ಕೊನೆಯುಸಿರೆಳೆದಿದ್ದರು. ಮಗಳು ತುಂಬಾ ಚಿಕ್ಕವಳು ಎಂಬ ಕಾರಣದಿಂದ ಆಕೆಯ ತಾಯಿ 'ನಾಟೆನ್' ಎಂಬಾತನೊಂದಿಗೆ ಎರಡನೇ ಮದುವೆಯಾಗಿದ್ದರು. ಮಗಳು ಓರಾಲಾಳಿಗೂ ತಂದೆ ನಾಟೆನ್ ಅಂದರೆ ತುಂಬಾ ಇಷ್ಟವಂತೆ ಹೀಗಾಗಿಯೇ ತನ್ನ ತಾಯಿ ಅಂತಹ ಗಂಡನನ್ನು ಪಡೆಯಲು ಬಹಳ ಪುಣ್ಯ ಮಾಡಿದ್ದಳು ಅಂತ ಅಂದುಕೊಂಡಿದ್ದಳಂತೆ. ಆದರೆ ಕಿಶೋರಾವಸ್ಥೆಗೆ ತಲುಪಿದಾಗಲೇ ತನ್ನ ತಾಯಿಯ ಎರಡನೇ ಗಂಟನೇ ತನ್ನ ಪತಿ ಎಂಬ ವಿಚಾರ ಆಕೆಗೆ ತಿಳಿದದ್ದು.

ಈ ವಿಚಾರ ತಿಳಿದಾಗ ಓರಾಲಾ ದಂಗು ಬಡಿದಂತಾಗಿತ್ತಂತೆ. ಈವರೆಗೂ ಯಾರನ್ನು ತನ್ನ ತಂದೆ ಎಂದು ಗೌರವದಿಂದ ಕಾಣುತ್ತಿದ್ದಳೋ ಆ ವ್ಯಕ್ತಿಯೊಂದಿಗೆ ಓರಾಲಾ 3 ವರ್ಷದವಳಿದ್ದಾಗಲೇ ಮದುವೆಯಾಗಿತ್ತಂತೆ. ಇದಕ್ಕೆಲ್ಲಾ ಕಾರಣವಾಗಿದ್ದು ಅಲ್ಲಿನ ಜನರು ಪಾಲಿಸಿಕೊಂಡು ಬಂದ ಪದ್ಧತಿ. ಅಲ್ಲಿನ ಸಂಪ್ರದಾಯದ ಪ್ರಕಾರ ಮಹಿಳೆಯೊಬ್ಬಳ ಪತಿ ಅಸು ನೀಗಿದರೆ ಆಕೆ ತನ್ನ ವಯಸ್ಸಿಗಿಂತ ಕಿರಿಯ ವ್ಯಕ್ತಿಯನ್ನು ಮದುವೆಯಾಗಬೇಕು. ಈ ವೇಳೆ ತನ್ನ ತಾಯಿಯೊಂದಿಗೆ ಮಗಳು ಕೂಡಾ ಮದುವೆ ಮಂಟಪದಲ್ಲಿ ಕುಳಿತುಕೊಳ್ಳುತ್ತಾಳೆ. ಈ ವೇಳೆ ಇಬ್ಬರನ್ನೂ ಮದುಮಗನಿಗೆ ಮದುವೆ ಮಾಡಿಕೊಡಲಾಗುತ್ತದೆ.

ಮದುಮಗಳ ವಯಸ್ಸಿಗಿಂತ ಕಿರಿಯ ವ್ಯಕ್ತಿಯನ್ನು ಮದುವೆಯಾದರೆ ಆತ ಹೊಸ ಪತ್ನಿ ಹಾಗೂ ಮಗಳು ಇಬ್ಬರಿಗೂ ಗಂಡನಾಗುವುದರಿಂದ ಇಬ್ಬರ ಪತಿಯಾಗಿ, ರಕ್ಷಣೆ ನೀಡುತ್ತಾನೆ ಎಂಬ ದೃಷ್ಟಿಯಿಂದ ಇಂತಹುದ್ದೊಂದು ಪದ್ಧತಿ ಈಗಲೂ ಜೀವಂತವಾಗಿದೆ.

ಈಗಾಗಲೇ ಓರಾಲಾಳಿಗೆ ನಾಟೆಜ್'ನಿಂದ ಮೂರು ಮಕ್ಕಳಾಗಿದ್ದು, ಈಕೆಯ ತಾಯಿಗೂ ನಾಟೆಲ್'ನಿಂದ ಎರಡು ಮಕ್ಕಳಾಗಿವೆ ಎಂದು ತಿಳಿದು ಬಂದಿದೆ. ಇವರಿಬ್ಬರೂ ಒಂದೇ ಸೂರಿನಡಿ ತಮ್ಮ ಪತಿಯೊಂದಿಗೆ ವಾಸಿಸುತ್ತಿದ್ದಾರಾದರೂ ಇಬ್ಬರ ಸಂಬಂಧ ಹಳಸಿದೆ. ಪತಿ ಎಲ್ಲಾದರೂ ಮನೆಯಲ್ಲಿ ಮಿಸ್ ಆದರೆ ಇವರಿಬ್ಬರು ಕಚ್ಚಾಡುವುದರಲ್ಲಿ ಯಾವುದೇ ಸಂಶಯವಿಲ್ಲವಂತೆ.  

ಕಪೆ: ಲೈವ್ ಇಂಡಿಯಾ

click me!