ರಾಜಕಾರಣಕ್ಕೂ ನನಗೂ ಆಗಿ ಬರಲ್ಲ: ದರ್ಶನ್

Published : Sep 12, 2017, 04:26 PM ISTUpdated : Apr 11, 2018, 01:10 PM IST
ರಾಜಕಾರಣಕ್ಕೂ ನನಗೂ ಆಗಿ ಬರಲ್ಲ: ದರ್ಶನ್

ಸಾರಾಂಶ

ಕಂಡ ಕಂಡವರಿಗೆ ಸಲಾಮು ಹೊಡೆಯುವ ಜಾಯಮಾನದವನಲ್ಲ ನಾನು. ಹೀಗಾಗಿ ಸಲಾಮು ಸಂಸ್ಕೃತಿಯನ್ನು ಒಳಗೊಂಡಿರುವ ರಾಜಕಾರಣಕ್ಕೂ ನನಗೂ ಆಗಿಬರಲ್ಲ. ರಾಜಕೀಯ ಸೇರುವ ಆಸಕ್ತಿಯೂ ನನಗಿಲ್ಲ.- ಹೀಗೆ ನೇರವಾಗಿ ಪ್ರತಿಕ್ರಿಯಿಸಿದ್ದು ನಟ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್.

ಕಂಡ ಕಂಡವರಿಗೆ ಸಲಾಮು ಹೊಡೆಯುವ ಜಾಯಮಾನದವನಲ್ಲ ನಾನು. ಹೀಗಾಗಿ ಸಲಾಮು ಸಂಸ್ಕೃತಿಯನ್ನು ಒಳಗೊಂಡಿರುವ ರಾಜಕಾರಣಕ್ಕೂ ನನಗೂ ಆಗಿಬರಲ್ಲ. ರಾಜಕೀಯ ಸೇರುವ ಆಸಕ್ತಿಯೂ ನನಗಿಲ್ಲ.- ಹೀಗೆ ನೇರವಾಗಿ ಪ್ರತಿಕ್ರಿಯಿಸಿದ್ದು ನಟ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್.

ಅವರು ರಾಜಕಾರಣಕ್ಕೆ ಬರುತ್ತಾರೆ, ಅವರನ್ನು ಕಾಂಗ್ರೆಸ್‌ನ ಮುಖಂಡರು ಸಂಪರ್ಕಿಸಿದ್ದಾರೆ ಎನ್ನುವ ಸುದ್ದಿ ಆಗಿತ್ತು. ಈ ಬಗ್ಗೆ ದರ್ಶನ್ ಎಲ್ಲೂ ಅಧಿಕೃತವಾಗಿ ಮಾತನಾಡಿಲ್ಲ. ಆದರೆ, ಹೈದರಾಬಾದ್’ನಲ್ಲಿ ನಡೆಯುತ್ತಿರುವ ‘ಮುನಿರತ್ನ ಕುರುಕ್ಷೇತ್ರ’ ಚಿತ್ರೀಕರಣದ ವೀಕ್ಷಣೆಗೆ ತೆರಳಿದ್ದ ‘ಕನ್ನಡಪ್ರಭ’ ಜತೆ ತಮ್ಮ ರಾಜಕೀಯ ನಿಲುಗಳ ಬಗ್ಗೆ ಸ್ಪಷ್ಟವಾಗಿ ದರ್ಶನ್ ಮಾತನಾಡಿದ್ದಾರೆ.

‘ನಾನು ರಾಜಕೀಯಕ್ಕೆ ಬರುವುದಾಗಿ ಹಬ್ಬಿರುವ ಸುದ್ದಿಗಳು ಸುಳ್ಳು. ನನಗೆ ಈಗ ಸಿನಿಮಾ ಬಿಟ್ಟರೆ ಬೇರೆ ಗೊತ್ತಿಲ್ಲ. ನಾನು ಸಿನಿಮಾ ನಟ. ನನಗೆ ರಾಜಕೀಯ ಗೊತ್ತಿಲ್ಲ. ಹಾಗೊಂದು ವೇಳೆ ನಾನು ರಾಜಕೀಯಕ್ಕೆ ಹೋಗುವುದೇ ಆದರೆ ಮೊದಲೇ ಎಲ್ಲರಿಗೂ ಬಹಿರಂಗವಾಗಿ ಹೇಳಿಯೇ ಹೋಗುತ್ತೇನೆ. ಯಾಕೆಂದರೆ ಗುಟ್ಟಾಗಿ ರಾಜಕೀಯಕ್ಕೆ ಹೋಗುವಂತಹ ಅಗತ್ಯ ಮತ್ತು ಅನಿವಾರ್ಯತೆ ನನಗಿಲ್ಲ. ಅಲ್ಲದೆ ರಹಸ್ಯವಾಗಿ ರಾಜಕೀಯ ಮಾಡಕ್ಕೂ ಆಗಲ್ಲ ಎಂಬುದು ನನ್ನ ಅಭಿಪ್ರಾಯ. ಹೀಗಾಗಿ ಸದ್ಯಕ್ಕೆ ನನ್ನ ಹೆಸರಿನ ಸುತ್ತ ಏನೇ ರಾಜಕೀಯದ ಮಾತು- ಸುದ್ದಿಗಳು ಕೇಳಿಬರುತ್ತಿದ್ದರೂ ಅವೆಲ್ಲವೂ ಸತ್ಯಕ್ಕೆ ದೂರವಾಗಿರುತ್ತವೆ’ ಎಂದರು ದರ್ಶನ್.

ಸಾಮಾನ್ಯವಾಗಿ ರಾಜಕಾರಣದಲ್ಲಿರುವವರು ಕಂಡ ಕಂಡವರಿಗೆ ಕೈ ಮುಗಿಯಬೇಕು. ಖಾದಿ ತೊಟ್ಟವನು ಹೆಜ್ಜೆ ಹೆಜ್ಜೆಗೂ ಸಲಾಮು ಹೊಡೆಯಬೇಕು. ಸಲಾಮು ಹೊಡೆಯದಿದ್ದರೆ ಈ ರಾಜಕೀಯ ಪಡಸಾಲೆಯಲ್ಲಿ ನಾವು ಬಾಳಿಕೆ ಬರಲ್ಲ ಅಂತ ನನಗೆ ಗೊತ್ತು. ಆದರೆ, ನನಗೆ ಯಾರ ಮುಂದೆಯೂ ಸಲಾಮು ಮಾಡುವ ಅಭ್ಯಾಸ ಇಲ್ಲ. ಅಂಥ ವಾತಾವರಣದಲ್ಲಿ ನಾನು ಬೆಳೆದಿಲ್ಲ. ಅಲ್ಲದೆ ಓಟು ಹಾಕಿದ ಜನ ಕೂಡ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಇದೆಲ್ಲ ನಮಗೆ ಯಾಕೆ ಬೇಕು ಹೇಳಿ. ರಾಜಕಾರಣ ಅಂದ ಮೇಲೆ ಅದೆಲ್ಲವೂ ಇರುತ್ತದೆ ನಿಜ. ಆದರೂ ಅಂಥ ವಾತಾರವಣ ನನಗೆ ಆಗಿಬರಲ್ಲ. ಹೀಗಾಗಿ ಸಿನಿಮಾ ಬಿಟ್ಟು ನಾನು ರಾಜಕೀಯ ಸೇರುತ್ತೇನೆಂಬುದು ಸುಳ್ಳು. ಸದ್ಯಕ್ಕೆ ಸಿನಿಮಾ ಮಾಡಿಕೊಂಡು ಇರಕ್ಕೆ ಬಿಡಿ ಸಾಕು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಸ ಗುಡಿಸುವಾಗ 'ರಸ್ತೆಯಲ್ಲಿ ಸಿಕ್ಕ ಬಂಗಾರದ ಗಂಟ'ನ್ನು ಮಾಲೀಕನಿಗೆ ವಾಪಸ್ ಕೊಟ್ಟ ಪೌರ ಕಾರ್ಮಿಕ ಮಹಿಳೆ!
ಬೆಂಗಳೂರಲ್ಲಿ ಅಕ್ರಮ ವಲಸಿಗರ ತೆರವು ಕಾರ್ಯದ ವೇಳೆ 'ಜೈ ಬಾಂಗ್ಲಾ' ಎಂದು ಕೂಗಿದ ಮಹಿಳೆ; ಶರ್ಬಾನು ಅರೆಸ್ಟ್!