
ಬೆಂಗಳೂರು (ಜ.2): ಸಿಲಿಕಾನ್ ಸಿಟಿಯ ಮಂದಿ ಎಚ್ಚರವಾಗಿರಿ. ನೀವೂ ತಿನ್ನೋ ತರಕಾರಿ ವಿಷಕಾರಿ ಆಗಿದೆ. ಪ್ರತಿಷ್ಠಿತ ಆಸ್ಪತ್ರೆ ನಿಮ್ಹಾನ್ಸ್ ವೈದ್ಯರ ವರದಿ ಈ ಬಗ್ಗೆ ಮಾಹಿತಿಯನ್ನು ನೀಡಿದೆ. ವೃಷಭಾವತಿಯ ಕೊಳಚೆ ನೀರಿನಲ್ಲಿ ಬೆಳೆದ ತರಕಾರಿ ಸೇವಿಸಿದವರ ಮಕ್ಕಳಲ್ಲಿ ಶೇ 8ರಷ್ಟು ಮಂದಿ ಬುದ್ಧಿಮಾಂಧ್ಯತೆಗೆ ತುತ್ತಾಗುತ್ತಿರುವ ಆಘಾತಕಾರಿ ಸಂಗತಿಯು ಸಂಶೋಧನೆಯಿಂದ ಬಯಲಾಗಿದೆ.
ಕೊಳಚೆ ನೀರು, ರಾಸಾಯನಿಕಯುಕ್ತ ನೀರು ಬಳಸಿ ನಗರದ ಹೊರವಲಯದಲ್ಲಿ ಬೆಳೆಯುತ್ತಿರುವ ಸೊಪ್ಪು , ತರಕಾರಿ ಹಾಗೂ ಹಣ್ಣು ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕ ಎಂಬ ಮಾತುಗಳು ಮೊದಲಿನಿಂದಲೂ ಕೇಳಿ ಬರುತ್ತಿದ್ದವು. ನಾಯಂಡಹಳ್ಳಿ ಸುತ್ತಮುತ್ತಲಿನ ಕಾರ್ಖಾನೆಗಳ ಸತು, ಪಾದರಸ, ಕ್ಯಾಡ್ಮಿಯಂ, ಕ್ರೋಮಿಯಂ ಸೇರಿದಂತೆ ಇತರೆ ವಿಷಕಾರಿ ರಾಸಾಯನಿಕಗಳನ್ನು ನೇರವಾಗಿ ವೃಷಭಾವತಿ ಕಾಲುವೆಗೆ ಹರಿಬಿಡಲಾಗುತ್ತಿದೆ . ಇದೇ ನೀರು ಬಳಸಿಕೊಂಡು ರೈತರು ತರಕಾರಿ ಬೆಳೆಯುತ್ತಿದ್ದಾರೆ. ಇದರಿಂದ ವಿಷಕಾರಿ ಅಂಶ ಪತ್ತೆಯಾಗಿದೆ ಎಂದು ನಿಮ್ಹಾನ್ಸ್ ತಜ್ಞರು ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ. ಇನ್ನು ಬಿಬಿಎಂಪಿ , ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ವರದಿ ಕೇಳಿದ್ದು, ಸಂಬಂಧ ಪಟ್ಟ ಕೈಗಾರಿಕೆಗಳ ವಿರುದ್ಧ ಕ್ರಮಕ್ಕೆ ಸೂಚಿಸಿದೆ.
ಇನ್ನೂ ಗರ್ಭಿಣಿಯರು ಸತು,ಪಾದರಸ ಮತ್ತು ಇನ್ನಿತರೆ ವಿಷಕಾರಿ ರಾಸಾಯನಿಕ ಅಂಶವುಳ್ಳ ತರಕಾರಿ ಸೇವನೆ ಮಾಡುವುದರಿಂದ ಹುಟ್ಟುವ ಮಕ್ಕಳು ಬುದ್ಧಿಮಾಂದ್ಯರಾಗುತ್ತಿದ್ದಾರೆ. ಅಲ್ಲದೆ ಬೆಂಗಳೂರಿನಿ ನಿವಾಸಿಗರಲ್ಲಿ ಕಿಡ್ನಿ ಸಮಸ್ಯೆ ಹೆಚ್ಚಾಗಿ ಕಂಡುಬರ್ತಿದೆ. ಹೀಗಾಗಿ ಸಿಲಿಕಾನ್ ಸಿಟಿ ಮಂದಿ ಆಹಾರ ಸೇವಿಸುವಾಗ ಎಚ್ಚರ ವಹಿಸೋದು ಒಳಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.