ದಂಡುಪಾಳ್ಯದ ನಾಲ್ವರು ಹಂತಕರಿಗೆ ಗಲ್ಲು ರದ್ದು

Published : Aug 08, 2017, 10:37 AM ISTUpdated : Apr 11, 2018, 12:36 PM IST
ದಂಡುಪಾಳ್ಯದ ನಾಲ್ವರು ಹಂತಕರಿಗೆ ಗಲ್ಲು ರದ್ದು

ಸಾರಾಂಶ

ನಗರದ ಸುಂಕದಕಟ್ಟೆ ನಿವಾಸಿ ದೊಡ್ಡ ಮುನಿಯಮ್ಮ ಕೊಲೆ ಮತ್ತು ದರೋಡೆ ಪ್ರಕರಣದಲ್ಲಿ ದಂಡುಪಾಳ್ಯ ತಂಡದ ನಾಲ್ವರು ಸದಸ್ಯರಿಗೆ ಅಧೀನ ನ್ಯಾಯಾಲಯವು ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಹೈಕೋರ್ಟ್ ರದ್ದುಪಡಿಸಿದೆ.

ಬೆಂಗಳೂರು(ಆ.08): ನಗರದ ಸುಂಕದಕಟ್ಟೆ ನಿವಾಸಿ ದೊಡ್ಡ ಮುನಿಯಮ್ಮ ಕೊಲೆ ಮತ್ತು ದರೋಡೆ ಪ್ರಕರಣದಲ್ಲಿ ದಂಡುಪಾಳ್ಯ ತಂಡದ ನಾಲ್ವರು ಸದಸ್ಯರಿಗೆ ಅಧೀನ ನ್ಯಾಯಾಲಯವು ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಹೈಕೋರ್ಟ್ ರದ್ದುಪಡಿಸಿದೆ.

ಪ್ರಕರಣದಲ್ಲಿ ದಂಡುಪಾಳ್ಯ ತಂಡದ ಸದಸ್ಯರಾದ ವೆಂಕಟೇಶ, ಮುನಿಕೃಷ್ಣ, ನಲ್ಲತಿಮ್ಮ ಮತ್ತು ಲಕ್ಷ್ಮಮ್ಮ ಅವರಿಗೆ ಅಧೀನ ನ್ಯಾಯಾಲಯದ ವಿಧಿಸಿದ್ದ ಮರಣ ದಂಡನೆಯನ್ನು ಕಾಯಂಗೊಳಿಸುವಂತೆ ಕೋರಿ ರಿಜಿಸ್ಟ್ರಾರ್ ಜನರಲ್ ಸಲ್ಲಿಸಿದ್ದ ಕ್ರಿಮಿನಲ್ ರೆರ್ಡ್ ಕೇಸ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಮಳೀಮಠ ಮತ್ತು ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರಿದ್ದ ವಿಭಾಗೀಯ ಪೀಠವು, ಈ ನಾಲ್ವರಿಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆ ರದ್ದುಪಡಿಸಿತು.

ಪ್ರಕರಣದಲ್ಲಿ ದೊಡ್ಡ ಮುನಿಯಮ್ಮ ಅವರನ್ನು ಕೊಲೆ ಮಾಡಿರುವುದಕ್ಕೆ ಈ ನಾಲ್ವರ ವಿರುದ್ಧ ಯಾವುದೇ ಬಲವಾದ ಸಾಕ್ಷ್ಯಇಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ ಈ ಆದೇಶ ನೀಡಿತು. ನಗರದ ಸುಂಕದಕಟ್ಟೆಯ ನಿವಾಸಿ ದೊಡ್ಡ ಮುನಿಯಮ್ಮ ಅವರನ್ನು 1999ರ ಅ.15ರಂದು ಕೊಲೆ ಮಾಡಲಾಗಿತ್ತು.

ಹಲವು ಕೇಸಲ್ಲಿ ಖುಲಾಸೆ:

ಆದರೂ ಬಿಡುಗಡೆ ಇಲ್ಲ ಒಟ್ಟು 13 ಪ್ರಕರಣಗಳ ಪೈಕಿ ಮೂರು ಪ್ರಕರಣಗಳಲ್ಲಿ ದಂಡುಪಾಳ್ಯದ ಆರು ಮಂದಿ ಸದಸ್ಯರಿಗೆ ಅಧೀನ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಹೈಕೋರ್ಟ್ 2014ರ ಮಾರ್ಚ್‌ನಲ್ಲಿ ರದ್ದುಪಡಿಸಿತ್ತು. 2017ರ ಜುಲೈ 5ರಂದು ಹುಬ್ಬಳ್ಳಿಯ ನಿವಾಸಿ ಢೇಕಣಿ ಎಂಬುವರ ಕೊಲೆ ಪ್ರಕರಣದಲ್ಲಿ ಮೂವರಿಗೆಗೆ ಅಧೀನ ನ್ಯಾಯಾಲಯ ವಿಧಿಸಿದ್ದ ಗಲ್ಲುಶಿಕ್ಷೆ ರದ್ದುಪಡಿಸಿತ್ತು.

ಹುಬ್ಬಳ್ಳಿಯ ಡಾ.ಪ್ರಭಾಕರ ಮತ್ತವರ ಪುತ್ರ ನೀಲಕಂಠ ಜೋಷಿ ಎಂಬುವರ ಕೊಲೆ ಪ್ರಕರಣದಲ್ಲಿ ವೆಂಕಟೇಶ್, ಮುನಿಕೃಷ್ಣ ಮತ್ತು ನಲ್ಲತಿಮ್ಮ ಮತ್ತು ಲಕ್ಷ್ಮಮ್ಮಗೆ ವಿಧಿಸಿದ್ದ ಗಲ್ಲು ಶಿಕ್ಷೆ 2017ರ ಜುಲೈ 20ರಂದು ರದ್ದುಪಡಿಸಿತ್ತು. ಇನ್ನೂ ಕೆಲ ಪ್ರಕರಣ ಇತ್ಯರ್ಥಕ್ಕೆ ಬಾಕಿಯಿರುವುದರಿಂದ ದಂಡಪಾಳ್ಯದ ಸದಸ್ಯರಿಗೆ ಬಿಡುಗಡೆ ಭಾಗ್ಯವಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಖ್ಯಮಂತ್ರಿ ಅಧಿಕಾರ ಹಸ್ತಾಂತರದ ಬಗ್ಗೆ ನಮಗೆ ಏನೂ ಗೊತ್ತಿಲ್ಲ: ಸಚಿವ ರಾಮಲಿಂಗಾರೆಡ್ಡಿ
ಡಿಕೆ ಶಿವಕುಮಾರ್‌ಗೆ ಕೇಂದ್ರ ನಾಯಕತ್ವ ಸ್ಥಾನ : ಕಾಂಗ್ರೆಸ್‌ನಲ್ಲಿ ಕೂಗು