‘ಗುಜರಾತಿನ ಗಬ್ಬು’ ಅಭಿಯಾನಕ್ಕೆ ಬಚ್ಚನ್'ಗೆ ಆಹ್ವಾನ

Published : Sep 11, 2016, 04:41 PM ISTUpdated : Apr 11, 2018, 12:43 PM IST
‘ಗುಜರಾತಿನ ಗಬ್ಬು’ ಅಭಿಯಾನಕ್ಕೆ ಬಚ್ಚನ್'ಗೆ ಆಹ್ವಾನ

ಸಾರಾಂಶ

ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ನೇತೃತ್ವದಲ್ಲಿ ನಡೆಯುತ್ತಿರುವ ‘ಗುಜರಾತಿನ ಪರಿಮಳ (ಖುಷ್ಬೂ ಗುಜರಾತ್‌ ಕೀ)’ ಅಭಿಯಾನಕ್ಕೆ ವಿರುದ್ಧವಾಗಿ ‘ಗುಜರಾತಿನ ಗಬ್ಬು’ ಅಭಿಯಾನ ನಡೆಸಲು ದಲಿತರು ಮುಂದಾಗಿದ್ದಾರೆ.

ಉನಾ ದಲಿತರ ದೌರ್ಜನ್ಯ ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ದಲಿತರು ‘ಗುಜರಾತಿನ ಗಬ್ಬು’ ಅಭಿಯಾನ ನಡೆಸಲುದ್ದೇಶಿಸಿದ್ದಾರೆ.

ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ನೇತೃತ್ವದಲ್ಲಿ ನಡೆಯುತ್ತಿರುವ ‘ಗುಜರಾತಿನ ಪರಿಮಳ (ಖುಷ್ಬೂ ಗುಜರಾತ್‌ ಕೀ)’ ಅಭಿಯಾನಕ್ಕೆ ವಿರುದ್ಧವಾಗಿ ‘ಗುಜರಾತಿನ ಗಬ್ಬು’ ಅಭಿಯಾನ ನಡೆಸಲು ದಲಿತರು ಮುಂದಾಗಿದ್ದಾರೆ. ಅಭಿಯಾನದ ಅಂಗವಾಗಿ ಬಚ್ಚನ್‌ರ ಮುಂಬೈ ನಿವಾಸ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನಿವಾಸಕ್ಕೆ ಪತ್ರ ಬರೆದು ರವಾನಿಸಲು ನಿರ್ಧರಿಸಲಾಗಿದೆ.

ಅಹಮದಾಬಾದ್‌ ಸಮೀಪದ ಕಲೋಲ್‌ನಲ್ಲಿ ಮಂಗಳವಾರ ಈ ಅಭಿಯಾನಕ್ಕೆ ಚಾಲನೆ ದೊರೆಯಲಿದ್ದು, ಬಚ್ಚನ್‌ ಹಾಗೂ ಪ್ರಧಾನಿಯವರಿಗೆ ಪತ್ರ ಬರೆದು ಗುಜರಾತ್‌ಗೆ ಆಹ್ವಾನ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ದಲಿತ್‌ ಅತ್ಯಾಚಾರ್‌ ಲಡಾತ್‌ ಸಮಿತಿ ಸಂಚಾಲಕ ಜಿಗ್ನೇಶ್‌ ಮೆವಾನಿ ನೇತೃತ್ವದಲ್ಲಿ ಈ ಅಭಿಯಾನ ನಡೆಯಲಿದೆ. ಉನಾ ದಲಿತ ದೌರ್ಜನ್ಯ ಘಟನೆಯ ಬಳಿಕ ಸತ್ತ ದನಗಳ ವಿಲೇವಾರಿ ಮಾಡಲು ದಲಿತರು ನಿರಾಕರಿಸಿರುವುದರಿಂದ ರಾಜ್ಯದಲ್ಲಿ ಉಂಟಾಗಿರುವ ಗಬ್ಬು ವಾಸನೆಯನ್ನು ಸವಿಯಲು ಇವರಿಗೆ ಆಹ್ವಾನ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಾಲ್‌ನಲ್ಲಿ ಹುಡುಗಿಗೆ ಪ್ರಪೋಸ್ ಮಾಡಿ ಅಲ್ಲೇ ತಾಳಿ ಕಟ್ಟಿದ ಯುವಕ: ವೀಡಿಯೋ ಭಾರಿ ವೈರಲ್
Hate Speech Bill: ಸರ್ವಜನಾಂಗ ಶಾಂತಿಯ ತೋಟ ಆಗಲು ಈ ಮಸೂದೆ ಬೇಕೇಬೇಕು