
ನಮಕ್ಕಲ್[ಆ.26]: ನಾಸ್ತಿಕ (ದೇವರನ್ನು ನಂಬದೇ ಇರುವವರು)ರಾಗಿ ಖ್ಯಾತಿ ಹೊಂದಿದ್ದ ಡಿಎಂಕೆ ಅಧಿನಾಯಕ ದಿವಂಗತ ಎಂ.ಕರುಣಾನಿಧಿ ಅವರ ಗೌರವಾರ್ಥವಾಗಿ ದೇವಸ್ಥಾನವೊಂದನ್ನು ನಿರ್ಮಿಸಲು ತಮಿಳುನಾಡಿನ ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಇಲ್ಲಿನ ಕುಚ್ಚಿಕಾಡು ಗ್ರಾಮದಲ್ಲಿ 30 ಲಕ್ಷ ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣಕ್ಕೆಂದು ಭೂಮಿ ಪೂಜೆಯನ್ನು ಭಾನುವಾರ ನೆರವೇರಿಸಲಾಯಿತು. 2009 ರಲ್ಲಿ ಕರುಣಾನಿಧಿ ಆಡಳಿತದಲ್ಲಿ ಪರಿಶಿಷ್ಟ ಜಾತಿಯಲ್ಲಿ ಬರುವ ಅರುಂತಥಿಯಾರ್ ವರ್ಗಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.3 ರಷ್ಟುಮೀಸಲಾತಿ ಕಲ್ಪಿಸಿದ್ದರು.
ಇದಕ್ಕೆ ಗೌರವ ಸೂಚಕವಾಗಿ ಆ ವರ್ಗದವರು ಕರುಣಾನಿಧಿ ದೇವಸ್ಥಾನ ನಿರ್ಮಾಣ ಮಾಡುತ್ತಿದ್ದಾರೆ. ಕೊಚ್ಚಿಕೋಡು ಗ್ರಾಮಸ್ಥರು ಭೂಮಿ ದೇಣಿಗೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.