ಅಬ್ಬರಿಸಲು ಸಜ್ಜಾಗಿದೆ ಮತ್ತೊಂದು ಚಂಡಮಾರುತ

First Published May 23, 2018, 2:03 PM IST
Highlights

ಸಾಗರ್ ಚಂಡಮಾರುತದ ಅಬ್ಬರ ತಗ್ಗುತ್ತಿದ್ದಂತೆ ಇದೀಗ ಮತ್ತೊಂದು ಚಂಡಮಾರುತ ಮಿಕುನು ಅಬ್ಬರ ತೋರಲು  ಸಜ್ಜಾಗಿದೆ. ಅರಬ್ಬಿ ಸಮುದ್ರದ ಮೂಲಕ ಚಂಡಮಾರುತವು ಹಾದು ಹೋಗಲಿದ್ದು, ಇದರಿಂದ ಭಾರತದ ವಿವಿಧ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ. 

ನವದೆಹಲಿ : ಸಾಗರ್ ಚಂಡಮಾರುತದ ಅಬ್ಬರ ತಗ್ಗುತ್ತಿದ್ದಂತೆ ಇದೀಗ ಮತ್ತೊಂದು ಚಂಡಮಾರುತ ಮಿಕುನು ಅಬ್ಬರಿಸಲು ಸಜ್ಜಾಗಿದೆ.  ಅರಬ್ಬಿ ಸಮುದ್ರದ ಮೂಲಕ ಚಂಡಮಾರುತವು ಹಾದು ಹೋಗಲಿದ್ದು, ಇದರಿಂದ ಭಾರತದ ವಿವಿಧ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ. 
 
ಲಕ್ಷದ್ವೀಪ, ಭಾರತೀಯ ಕರಾವಳಿ ಪ್ರದೇಶ ಸೇರಿದಂತೆ ವಿವಿಧ ಪ್ರದೇಶಗಳು ಈ ಚಂಡ ಮಾರುತದ ಅಬ್ಬರಕ್ಕೆ ಸಿಲುಕಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಇದರಿಂದ ಶನಿವಾರದವರೆಗೂ ಕೂಡ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಚಂಡ ಮಾರುತವು ಕೇರಳದಲ್ಲಿ ಕೂಡ ತನ್ನ ಅಬ್ಬರ ತೋರಲಿದ್ದು,  ಬೆಂಗಳೂರಿನಲ್ಲಿಯೂ ಕೂಡ ಚಂಡಮಾರುತದ ಪರಿಣಾಮ ಕಂಡು ಬರಲಿದೆ. 

ಮೇ 23 ರಿಂದ ಮೇ 26ರವರೆಗೆ ಚಂಡಮಾರುತದ ಅಬ್ಬರ ಇರಲಿದ್ದು, ಅತ್ಯಂತ ವೇಗವಾಗಿ ಗಾಳಿ ಬೀಸಲಿದೆ.  ಇದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಭಾರತೀಯ ಹವಾಮಾನ ಇಲಾಖೆಯೂ ಮುನ್ಸೂಚನೆಯನ್ನು  ನೀಡಿದೆ. 

click me!