ಈ ಬಾರಿಯ ಲೋಕ ಕಲಾಪ ಉತ್ಪಾದಕತೆ 20 ವರ್ಷಗಳ ಗರಿಷ್ಠ

By Web DeskFirst Published Jul 19, 2019, 9:41 AM IST
Highlights

ಈ ಬಾರಿಯ ಲೋಕ ಕಲಾಪ ಉತ್ಪಾದಕತೆ 20 ವರ್ಷಗಳ ಗರಿಷ್ಠ|  ಪಿಆರ್‌ಎಸ್‌ ಶಾಸಕಾಂಗ ಸಂಶೋಧನಾ ಸಂಸ್ಥೆಯ ತಜ್ಞರ ಅಭಿಪ್ರಾಯ

ನವದೆಹಲಿ[ಜು.19]: ಈ ಬಾರಿಯ ಲೋಕಸಭಾ ಕಲಾಪವು ಕಳೆದ 20 ವರ್ಷಗಳಲ್ಲೇ ಅತಿಹೆಚ್ಚು ಪ್ರಮಾಣದ ಉತ್ಪಾದಕತೆಯ ಕಲಾಪವಾಗಿದೆ ಎಂದು ಪಿಆರ್‌ಎಸ್‌ ಶಾಸಕಾಂಗ ಸಂಶೋಧನಾ ಸಂಸ್ಥೆಯ ತಜ್ಞರು ಹೇಳಿದ್ದಾರೆ. 17ನೇ ಲೋಕಸಭೆಯ ಮುಂಗಾರು ಅಧಿವೇಶನ ಮಂಗಳವಾರದವರೆಗೂ ಶೇ.128ರಷ್ಟುಪ್ರಮಾಣ ಉತ್ಪಾದಕತೆಯಾಗಿದೆ ಎಂದು ಸಂಶೋಧನಾ ಸಂಸ್ಥೆ ತಿಳಿಸಿದೆ.

ಹಾಗೆಯೇ, ರಾಜ್ಯಸಭೆಯ ಕಲಾಪದ ಉತ್ಪಾದಕತೆಯು ಶೇ.98ರಷ್ಟಿದೆ. ಶಾಸಕಾಂಗದ ಜವಾಬ್ದಾರಿಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಎರಡು ಸಂದರ್ಭಗಳಲ್ಲಿ ಲೋಕಸಭಾ ಸಭಾಪತಿ ಓಂ ಬಿರ್ಲಾ ಅವರು ಮಧ್ಯರಾತ್ರಿವರೆಗೂ ಕಲಾಪ ನಡೆಸಿದ್ದಾರೆ. ಅಲ್ಲದೆ, ಕೆಲವು ವೇಳೆ ಕಾಲಮಿತಿ ಮೀರಿ ಕಲಾಪ ನಡೆಸಿಕೊಟ್ಟಿದ್ದಾರೆ ಎಂದು ಕೊಂಡಾಡಿದೆ.

ಈ ಹಿಂದೆಂಗಿಂತಲೂ ಈ ಬಾರಿಯ ಲೋಕಸಭಾ ಕಲಾಪವು ನಿಗದಿಗಿಂತ ಹೆಚ್ಚು ಹೊತ್ತಿನವರೆಗೂ ಕಾರ್ಯ ನಿರ್ವಹಿಸಿದೆ. 2019ರ ಜು.19ರವರೆಗೂ ಕಲಾಪದ ಉತ್ಪಾದಕತೆ ಶೇ.128ರಷ್ಟಿದೆ. ಇದು ಕಳೆದ 20 ವರ್ಷಗಳಿಂದಲೂ ಸಾಧಿಸಲು ಸಾಧ್ಯವಾಗದ ಪ್ರಮಾಣವಾಗಿದೆ ಎಂದು ಸ್ವತಂತ್ರವಾದ ಪಿಆರ್‌ಎಸ್‌ ಶಾಸಕಾಂಗ ಸಂಶೋಧನಾ ಸಂಸ್ಥೆ ತಿಳಿಸಿದೆ.

click me!