ಟೀಂ ಇಂಡಿಯಾ ಕ್ರಿಕೆಟಿಗ, ಕನ್ನಡಿಗ ಮನೀಶ್ ಪಾಂಡೆ ಬಹುಕಾಲ ಗೆಳತಿಯನ್ನು ವರಿಸಿದ್ದಾರೆ. ಆದರೆ ಪಾಂಡೆ ಮುಷ್ತಾಕ್ ಆಲಿ ಟ್ರೋಫಿಯಿಂದ ಕೆಲವೇ ಗಂಟೆಗಳ ಮೊದಲು ಮದುವೆ ಮಂಟಪಕ್ಕೆ ತಲುಪಿದ್ದಾರೆ. ನಿತ್ಯಾನಂದನ ಲೀಲೆಗೆ ಡೆಲ್ಲಿ ಪಬ್ಲಿಕ್ ಸ್ಕೂಲ್ ಮಾನ್ಯತೆ ರದ್ದಾಗಿದೆ. ಹೈದರಾಬಾದ್ ದಿಶಾ ರೆಡ್ಡಿ ರೇಪ್ ಪ್ರಕರಣದ ಬಳಿಕ ಪೋರ್ನ್ ಸೈಟ್‌ನಲ್ಲಿ ರೇಪ್ ವಿಡಿಯೋ ಹುಡುಕಿದವರ ಸಂಖ್ಯೆ ಹೆಚ್ಚಿದೆ. ಚಿನ್ನದ ಬೆಲೆ ಮಾತ್ರವಲ್ಲ ಈರುಳ್ಳಿ ಬೆಲೆಯೂ ಇಳಿಕೆಯಾಗಿದೆ. ಹೀಗೆ ಡಿಸೆಂಬರ್ 2 ರಂದು ಸಂಚಲನ ಮೂಡಿಸಿದ ಟಾಪ್ 10 ಸುದ್ದಿ ಇಲ್ಲಿವೆ.
1) ಮನುಷ್ಯ ರೂಪದ ರಾಕ್ಷಸರಿದ್ದಾರೆ: ಪೋರ್ನ್ ಸೈಟ್‌ನಲ್ಲಿ ಪ್ರಿಯಾಂಕಾ ರೇಪ್ ವಿಡಿಯೋ ಹುಡುತ್ತಿದ್ದಾರೆ!
ಕುಪ್ರಸಿದ್ಧ ಪೋರ್ನ್ ಸೈಟ್‌ನಲ್ಲಿ ಪ್ರಿಯಾಂಕಾ ಅತ್ಯಾಚಾರದ ವಿಡಿಯೋ ಎನ್ನಲಾದ ನಕಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಕೆಲವರು ಈ ವಿಡಿಯೋ ನೋಡಲು ಪೋರ್ನ್ ಸೈಟ್‌ಗೆ ಭೇಟಿ ನೀಡುತ್ತಿದ್ದಾರೆ.
2) 6 ವರ್ಷ ಬಾಲಕಿಯ ರೇಪ್: ಸ್ಕೂಲ್ ಬೆಲ್ಟ್‌ನಿಂದ ಕತ್ತು ಹಿಸುಕಿ ಕೊಲೆ, ಆರೋಪಿ ಅರೆಸ್ಟ್!
ರಾಜಸ್ಥಾನ ಟೋಂಕ್ ಜಿಲ್ಲೆಯಲ್ಲಿ ಶನಿವಾರದಂದು ನಾಪತ್ತೆಯಾಗಿದ್ದ 6 ವರ್ಷದ ಬಾಲಕಿಯ ಶವ ಭಾನುವಾರದಂದು ಪತ್ತೆಯಾಗಿದೆ. ಬಾಲಕಿಯನ್ನು ರೇಪ್ ಮಾಡಲಾಗಿದ್ದು, ಬಳಿಕ ಶಾಲಾ ಸಮವಸ್ತ್ರದ ಬೆಲ್ಟ್ ನಿಂದ ಕತ್ತು ಹಿಡುಕಿ ಸಾಯಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
3) ತಿರುಪತಿ ವೆಬ್‌ಸೈಟ್‌ನಲ್ಲಿ ಕ್ರಿಶ್ಚಿಯನ್ ಪದ: ಸ್ಪಷ್ಟನೆ ಕೊಟ್ಟ ಟಿಟಿಡಿ!
ರುಪತಿ, ತಿರುಮಲ ದೇವಸ್ಥಾನದ ವೆಬ್‌ಸೈಟ್‌ನಲ್ಲಿ ‘ಯೆಶಾಯ್’ ಎಂಬ ಕ್ರಿಶ್ಚಿಯನ್ ಪದ ಬಳಕೆಯ ಆರೋಪಕ್ಕೆ ಟಿಟಿಡಿ ಅಧ್ಯಕ್ಷ ವೖ.ವಿ ಸುಬ್ಬಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಟಿಟಿಡಿ ಹಾಗೂ ರಾಜ್ಯ ಸರ್ಕಾರದ ಜನಪ್ರಿಯತೆಗೆ ಧಕ್ಕೆ ತರುವ ಉದ್ದೇಶದಿಂದ ಇಂತಹ ಆರೋಪ ಮಾಡಲಾಗುತ್ತಿದೆ ಎಂದು ಹರಿಹಾಯ್ದಿದ್ದಾರೆ.
4) ಇಳಿಯಿತು ಈರುಳ್ಳಿ ಬೆಲೆ : ಈಗೆಷ್ಟು ?.
ಕಳೆದ ವಾರ ಭಾನುವಾರದ ಸಂತೆಯಲ್ಲಿ 80 ರಿಂದ 85 ರು. ಇದ್ದ ಈರುಳ್ಳಿ ಈ ವಾರ 60ರಿಂದ 70 ರು.ಗೆ ಇಳಿಕೆ ಕಂಡಿದೆ. ನಾಸಿಕ್, ಪುಣೆಯಿಂದ ಪೂರೈಕೆ ಆಗುತ್ತಿರುವುದರ ಕಾರಣ ದರದಲ್ಲಿ ಸ್ವಲ್ಪ ಇಳಿಕೆ ಕಂಡಿದೆ.
5) ನಿತ್ಯಾನಂದ ಲೀಲೆ: ಡೆಲ್ಲಿ ಪಬ್ಲಿಕ್ ಸ್ಕೂಲ್ CBSE ಮಾನ್ಯತೆ ರದ್ದು!
ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು ಬಾನುವಾರದಂದು ಪ್ರಖ್ಯಾತ ಶಿಕ್ಷಣ ಸಂಸ್ಥೆ ಡೆಲ್ಲಿ ಪಬ್ಲಿಕ್ ಸ್ಕೂಲ್ ಗೆ ನೀಡಲಾಗಿದ್ದ ಮಾನ್ಯತೆಯನ್ನು ರದ್ದುಗೊಳಿಸಿದೆ. ಡೆಲ್ಲಿ ಪಬ್ಲಿಕ್ ಸ್ಕೂಲ್ ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ಆಶ್ರಮಕ್ಕೆ ಭೂಮಿಯನ್ನು ಭೋಗ್ಯಕ್ಕೆ ನೀಡಿದ ಆರೋಪದಡಿ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ.
6) ಮುಂಬೈನಲ್ಲಿ ಮನೀಶ್ ಪಾಂಡೆ ವಿವಾಹ; ಮಂಗಳೂರು ನಟಿ ಕೈಹಿಡಿದ ಕ್ರಿಕೆಟಿಗ!
ನಿನ್ನೆ(ಡಿ.01) ರಾತ್ರಿ ಸೂರತ್‌ನಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಿ ರಾಜ್ಯಕ್ಕೆ ಸಯ್ಯದ್ ಮುಷ್ತಾಕ್ ಆಲಿ ಟೂರ್ನಿ ಗೆಲ್ಲಿಸಿಕೊಟ್ಟ ನಾಯಕ ಮನೀಶ್ ಪಾಂಡೆ ಇಂದು(ಡಿ.02) ಹೊಸ ಬದುಕಿಗೆ ಕಾಲಿಟ್ಟಿದ್ದಾರೆ. ಮುಂಬೈನಲ್ಲಿ ನಡೆದ ಅದ್ದೂರಿ ವಿವಾಹ ಮಹೋತ್ಸವದಲ್ಲಿ ಪಾಂಡೆ, ಬಹುಕಾಲದ ಗೆಳತಿ ಕೈಹಿಡಿದಿದ್ದಾರೆ.
7) ಕಂಗನಾ ಬ್ಯಾಗ್ ಹಣದಲ್ಲಿ ಒಂದು ಮನೆಯನ್ನೇ ಕಟ್ಟಿಸಿಕೊಡ್ಬೋದಪ್ಪಾ!
ಬಾಲಿವುಡ್ ಕ್ವೀನ್, ತಲೈವಿ ಖ್ಯಾತಿಯ ಕಂಗನಾ ರಾಣಾವತ್ ಒಂದು ಹ್ಯಾಂಡ್ ಬ್ಯಾಗ್‌ಗಾಗಿ ಇಷ್ಟೆಲ್ಲಾ ಖರ್ಚು ಮಾಡ್ತಾರೆ ಗೊತ್ತಾ? ಈ ದುಡ್ಡಲ್ಲಿ ಮನೆಯಿಲ್ಲದವರಿಗೆ ಒಂದು ಮನೆಯನ್ನೇ ಕಟ್ಟಿಸಿಕೊಡಬಹುದಪ್ಪಾ!
8) ಕಾಡಿಗೆ ಬೆಂಕಿ ಬಿದ್ದ ಕ್ಷಣದಲ್ಲೇ ಉಪಗ್ರಹದಿಂದ ಸಂದೇಶ!.
ಉಪಗ್ರಹದ ನೆರವಿನೊಂದಿಗೆ ಅಭಯಾರಣ್ಯಗಳಲ್ಲಿ ಕಾಣಿಸಿಕೊಂಡ ಬೆಂಕಿಯ ಬಗ್ಗೆ ಸಂಬಂಧಪಟ್ಟವರಿಗೆ ಎಚ್ಚರಿಕೆ ನೀಡಿ ಬೆಂಕಿ ನಂದಿಸಲು ಕ್ರಮ ಕೈಗೊಳ್ಳುವುದಕ್ಕೆ ಅನುಕೂಲವಾಗುವಂತೆ ಅರಣ್ಯ ಇಲಾಖೆಯು ರಾಜ್ಯ ದೂರ ಸಂವೇದಿ ಆನ್ವಯಿಕ ಕೇಂದ್ರದಲ್ಲಿ (ಕೆಎಸ್‌ಆರ್‌ಎಸ್‌ಎಸಿ) ಪ್ರತ್ಯೇಕ ಘಟಕ ಪ್ರಾರಂಭಿಸಿದೆ.
9) ಡಿಸೆಂಬರ್ ಶುಭಾರಂಭ: ಚಿನ್ನದ ಬೆಲೆಯಲ್ಲಿ ಗಮನಾರ್ಹ ಇಳಿಕೆ!
ನವೆಂಬರ್ ತಿಂಗಳಲ್ಲಿ ಹೆಚ್ಚು ಕಡಿಮೆ ಹಾವು-ಏಣಿ ಆಟವಾಡಿದ್ದ ಆಭರಣ ದರ, ಡಿಸೆಂಬರ್ ಆರಂಭದಲ್ಲಿ ಗಮನಾರ್ಹ ಇಳಿಕೆ ಕಾಣುವ ಮೂಲಕ ಆಭರಣ ಪ್ರಿಯರಲ್ಲಿ ಸಂತಸ ಮೂಡಿಸಿದೆ.
10) ಬಾಲಕನಿಗೆ ಗೇರ್ ಬದಲಾಯಿಸಲು ಅವಕಾಶ; ಚಾಲಕನ ಲೈಸೆನ್ಸ್ ಕ್ಯಾನ್ಸಲ್!
ಬಲ್ ಚಾಲಕರ ಲೈಸೆನ್ಸ್ ರದ್ದಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ನಿಯಮ ಉಲ್ಲಂಗಿಸಿ ಪೇಚಿಗೆ ಸಿಲುಕುತ್ತಿರುವ ಚಾಲಕರ ಸಾಲಿಗೆ ಮತ್ತೊಬ್ಬ ಸೇರಿಕೊಂಡಿದ್ದಾನೆ. ಈತ ಬಾಲಕನಿಗೆ ಗೇರ್ ಬದಲಾಯಿಸಲು ಅವಕಾಶ ಮಾಡಿಕೊಟ್ಟು ಇದೀಗ ಪೊಲೀಸರ ಮುಂದೆ ಕೈಕಟ್ಟಿ ನಿಂತಿದ್ದಾನೆ.