ನವದೆಹಲಿ(ಡಿ.02): ಮಗಳನ್ನು ಕಳೆದುಕೊಂಡು ದು:ಖದಲ್ಲಿರುವ ಪೋಷಕರು ಒಂದು ಕಡೆ, ಹೀನ ಅತ್ಯಾಚಾರದಿಂದ ಆಕ್ರೋಶಗೊಂಡಿರುವ ದೇಶದ ಜನತೆ ಮತ್ತೊಂದು ಕಡೆ. ಈ ಮಧ್ಯೆಪಾರ್ನ್‌ ಸೈಟ್‌ನಲ್ಲಿ ಪಶುವೈದ್ಯೆ ಡಾ. ಪ್ರಿಯಾಂಕಾ ರೆಡ್ಡಿ ಅತ್ಯಾಚಾರದ ವಿಡಿಯೋ ಹುಡುಕುತ್ತಿರುವ ಮನಷ್ಯ ಸ್ವರೂಪಿ ರಾಕ್ಷಸರು ನಮ್ಮ ನಿಮ್ಮ ನಡುವೆಯೇ ಇದ್ದಾರೆ.

ಬಿಡಿ ಒಳಗೆ: ಅತ್ಯಾಚಾರ ಆರೋಪಿಗಳಿರುವ ಜೈಲಿನ ಮುಂಭಾಗದಲ್ಲಿ ಜನಾಕ್ರೋಶ!

ಕುಪ್ರಸಿದ್ಧ ಪೋರ್ನ್‌ ಸೈಟ್‌ನಲ್ಲಿ ಪ್ರಿಯಾಂಕಾ ಅತ್ಯಾಚಾರದ ವಿಡಿಯೋ ಎನ್ನಲಾದ ನಕಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಕೆಲವರು ಈ ವಿಡಿಯೋ ನೋಡಲು ಪಾರ್ನ್‌ ಸೈಟ್‌ಗೆ ಭೇಟಿ ನೀಡುತ್ತಿದ್ದಾರೆ.

'ನನ್ನ ಮಗ ಮಾಡಿದ್ದು ಕ್ಷಮಿಸಲಾರದ ತಪ್ಪು: ವೈದ್ಯೆಯನ್ನು ಕೊಂದಂತೆ ಆತನನ್ನೂ ಸುಟ್ಟಾಕಿ'

ನಕಲಿ ವಿಡಿಯೋವೊಂದಕ್ಕೆ ಪ್ರಿಯಾಂಕಾ ರೆಡ್ಡಿ ರೇಪ್ ವಿಡಿಯೋ ಎಂದು ಹೆಸರಿಸಲಾಗಿದ್ದು, ಈ ವಿಡಿಯೋ ನೋಡಲು ಕೆಲವರು ಪೋರ್ನ್‌ ಸೈಟ್‌ಗೆ ಭೇಟಿ ನೀಡುತ್ತಿದ್ದಾರೆ.

ವೈದ್ಯೆ ಕಿರುಚದಂತೆ ವಿಸ್ಕಿ ಸುರಿದಿದ್ದ ರೇಪಿಸ್ಟ್‌ಗಳು: ಪ್ರಜ್ಞೆ ತಪ್ಪಿದಾಗ ಅತ್ಯಾಚಾರ!

ಪೋರ್ನ್‌ ಸೈಟ್‌ನಲ್ಲಿ ಪ್ರಿಯಾಂಕಾ ರೆಡ್ಡಿ ಹೆಸರು ಟ್ರೆಂಡ್ ಆಗಿದ್ದು, ಸಭ್ಯ ಸಮಾಜವನ್ನು ಬೆಚ್ಚಿ ಬೀಳಿಸಿದೆ. ನಕಲಿ ವಿಡಿಯೋಗೆ ಪ್ರಿಯಾಂಕಾ ರೆಡ್ಡಿ ಹೆಸರು ನಮೂದಿಸಿರುವುದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ರೇಪ್ ಸಂತ್ರಸ್ತೆಗೆ ನ್ಯಾಯ ಕೊಡಿ: 20 ನಿಮಿಷ ಬಾಲಾಜಿ ದೇಗುಲ ಬಾಗಿಲು ಮುಚ್ಚಿ ಪ್ರತಿಭಟನೆ!

ಡಿಸೆಂಬರ್ 2ರ ಟಾಪ್ 10  ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: