ಸಿಪಿಎಂ ಪೋಸ್ಟರ್’ಗಳಲ್ಲಿ ಕಿಮ್ ಜಾಂಗ್ ಉನ್ ಭಾವಚಿತ್ರ

Published : Dec 18, 2017, 02:15 PM ISTUpdated : Apr 11, 2018, 12:57 PM IST
ಸಿಪಿಎಂ ಪೋಸ್ಟರ್’ಗಳಲ್ಲಿ ಕಿಮ್  ಜಾಂಗ್ ಉನ್ ಭಾವಚಿತ್ರ

ಸಾರಾಂಶ

ಇಡುಕ್ಕಿ ಜಿಲ್ಲೆಯ ನೆಡುಂಕದಂ ಎಂಬಲ್ಲಿ ಡಿ.16-17ರಂದು ಯೋಜನೆಗೊಂಡಿದ್ದ ಸಿಪಿಎಂ ಕಾರ್ಯಕ್ರಮವೊಂದಕ್ಕೆ ಕಾರ್ಯಕರ್ತರನ್ನು ಆಹ್ವಾನಿಸುವ ಸಂಬಂಧ ಹಾಕಲಾಗಿದ್ದ ಪೋಸ್ಟರ್’ನಲ್ಲಿ  ಕಿಮ್ ಫೋಟೋ ಹಾಕಲಾಗಿತ್ತು.

ತಿರುವನಂತಪುರ (ಡಿ.18):  ಕೇರಳದ ಆಡಳಿತಾರೂಢ ಸಿಪಿಎಂ ಪೋಸ್ಟರ್’ಗಳಲ್ಲಿ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಭಾವಚಿತ್ರ ಹಾಕಿದ ಘಟನೆಯೊಂದು ಸಂಭವಿಸಿದೆ.

ಇಡುಕ್ಕಿ ಜಿಲ್ಲೆಯ ನೆಡುಂಕದಂ ಎಂಬಲ್ಲಿ ಡಿ.16-17ರಂದು ಯೋಜನೆಗೊಂಡಿದ್ದ ಸಿಪಿಎಂ ಕಾರ್ಯಕ್ರಮವೊಂದಕ್ಕೆ ಕಾರ್ಯಕರ್ತರನ್ನು ಆಹ್ವಾನಿಸುವ ಸಂಬಂಧ ಹಾಕಲಾಗಿದ್ದ ಪೋಸ್ಟರ್’ನಲ್ಲಿ  ಕಿಮ್ ಫೋಟೋ ಹಾಕಲಾಗಿದೆ. ಇದನ್ನು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಬಹಿರಂಗಪಡಿಸಿದ್ದಾರೆ.

`ಜಗತ್ತಿಗೆ ಕಂಟಕರಾಗಿರುವ ಇಂಥ ಸರ್ವಾಧಿಕಾರಿಗಳ  ಫೋಟೊವನ್ನು ಸಿಪಿಎಂ ತನ್ನ ಪೋಸ್ಟರ್’ಗಳಲ್ಲಿ ಹಾಕಿದೆ ಎಂದರೆ ಕೇರಳವನ್ನು ಹಿಂದು ಕಾರ್ಯಕರ್ತರ ಹತ್ಯಾಭೂಮಿಯಾಗಿ ಅದು ಪರಿವರ್ತಿಸಿದ್ದರಲ್ಲಿ ಯಾವ ಅಚ್ಚರಿಯೂ ಇಲ್ಲ' ಎಂದು ಕುಟುಕಿದ್ದಾರೆ.

ಅಲ್ಲದೆ, `ಕೇರಳದಲ್ಲಿನ ಆರೆಸ್ಸೆಸ್-ಬಿಜೆಪಿ ಕಚೇರಿಗಳ ಮೇಲೆ ಎಡರಂಗವು ಕ್ಷಿಪಣಿಗಳನ್ನು ಹಾರಿಸುವುದಿಲ್ಲ ಎಂಬ ಭರವಸೆ ಇದೆ' ಎಂದೂ ಕಿಚಾಯಿಸಿದ್ದಾರೆ. ಆದರೆ ಈ ಪೋಸ್ಟರ್’ನ  ಹಿಂದೆ ಕಿಡಿಗೇಡಿಗಳ ಕುತಂತ್ರವಿದೆ ಎಂದು ಎಡರಂಗ ಪ್ರತಿಕ್ರಿಯಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೊಸ ವರ್ಷದ ಆರಂಭದಲ್ಲೇ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ರೆಡ್ಮಿ ಮಾಸ್ಟರ್‌ ಪಿಕ್ಸೆಲ್‌ ಫೋನ್‌, ಬೆಲೆ ಎಷ್ಟು ಕಡಿಮೆ ಗೊತ್ತಾ?
ರೈಲ್ವೆ ಪ್ರಯಾಣ, ಟಿಕೆಟ್​ ಬುಕಿಂಗ್​ ಎಲ್ಲವೂ ಬಲು ಸುಲಭ : ಸಂಪೂರ್ಣ ಮಾಹಿತಿ ಈ ಒಂದೇ ಒಂದು ಆ್ಯಪ್​ನಲ್ಲಿ!