ಮಾರ್ಕೇಟ್'ನಲ್ಲಿ ನಕಲಿ ತುಪ್ಪ: ತಿಂದ್ರೆ ಪ್ರಾಣ ಹೋಯ್ತದಪ್ಪ

Published : Jun 23, 2017, 09:40 PM ISTUpdated : Apr 11, 2018, 01:09 PM IST
ಮಾರ್ಕೇಟ್'ನಲ್ಲಿ ನಕಲಿ ತುಪ್ಪ: ತಿಂದ್ರೆ ಪ್ರಾಣ ಹೋಯ್ತದಪ್ಪ

ಸಾರಾಂಶ

ಈ ಕಟು ಸತ್ಯವನ್ನ ಕಂಡು ಹಿಡಿದಿದೆ ಸುವರ್ಣ ನ್ಯೂಸ್​ನ ಕವರ್​ಸ್ಟೋರಿ ತಂಡ. ನಮ್ಮದು ದೇಸಿ ತುಪ್ಪ , ಅತ್ಯಂತ ಪರಿಶುದ್ಧ ಅಂತ ಹೇಳಿ ಜನರಿಗೆ ಮೋಸ ಮಾಡಿ ನಕಲಿ ವಿಷಕಾರಿ ತುಪ್ಪವನ್ನ ಜನರಿಗೆ ಮಾರುತ್ತಿರೋ ದೊಡ್ಡ ಮಾಫಿಯಾ ನಮ್ಮ ರಾಜಧಾನಿ ಬೆಂಗಳೂರಿನಲ್ಲೇ ಆಕ್ಟೀವ್​ ಆಗಿದೆ.

ವಿಷ ಆಹಾರ ಮಾಫಿಯಾ ನಮ್ಮ ಜೀವದ ಜೊತೆ  ನಿತ್ಯ ಹೇಗೆಲ್ಲಾ ಚಲ್ಲಾಟ ಆಡ್ತಿದೆ ಅನ್ನೋದಕ್ಕೆ ನಮ್ಮ ಕವರ್​ಸ್ಟೋರಿ ತಂಡ ಈ ಬಾರಿ ನಡೆಸಿದ ರಹಸ್ಯ ಕಾರ್ಯಾಚರಣೆಯೇ ಸಾಕ್ಷಿ.

ಆರೋಗ್ಯಕ್ಕೆ ಅಮೃತ ಅಂತ ತಿಳಿದಿದ್ದ ದೇಸಿ ತುಪ್ಪವನ್ನೂ ಕಲಬೆರಕೆ ಮಾಫಿಯಾ ನಕಲಿ ಮಾಡಿದೆ. ಆ ಮೂಲಕ ಜನರಿಗೆ ವಿಷವುಣಿಸಸ್ತಿದೆ. ದೇಸಿ ತುಪ್ಪ ಅಮೃತ.  ಅದು ದೇಹದ ಆರೋಗ್ಯಕ್ಕೆ ಪೂರಕ. ಮಕ್ಕಳ ಬೆಳವಣಿಗೆಗೆ ಅತ್ಯವಶ್ಯ. ಆದರೆ ಇದೇ ಅಮೃತಕ್ಕೆ ವಿಷ ಹಾಕ್ತಿದೆ ಕಲಬೆರಕೆ ಮಾಫಿಯಾ. ಈ ಕಟು ಸತ್ಯವನ್ನ ಕಂಡು ಹಿಡಿದಿದೆ ಸುವರ್ಣ ನ್ಯೂಸ್​ನ ಕವರ್​ಸ್ಟೋರಿ ತಂಡ.

ನಮ್ಮದು ದೇಸಿ ತುಪ್ಪ , ಅತ್ಯಂತ ಪರಿಶುದ್ಧ ಅಂತ ಹೇಳಿ ಜನರಿಗೆ ಮೋಸ ಮಾಡಿ ನಕಲಿ ವಿಷಕಾರಿ ತುಪ್ಪವನ್ನ ಜನರಿಗೆ ಮಾರುತ್ತಿರೋ ದೊಡ್ಡ ಮಾಫಿಯಾ ನಮ್ಮ ರಾಜಧಾನಿ ಬೆಂಗಳೂರಿನಲ್ಲೇ ಆಕ್ಟೀವ್​ ಆಗಿದೆ.ಈ ನಕಲಿ ತುಪ್ಪ ಮಾರಾಟಗಾರರ ನಾನಾ ಗೋಡೌನ್​​ಗಳಲ್ಲಿ ರಹಸ್ಯ ಕಾರ್ಯಾಚರಣೆ ಮಾಡಿತು ಕವರ್​ಸ್ಟೋರಿ ತಂಡ.

ಅಲ್ಲಿ ತಯಾರಾಗೋ ತುಪ್ಪದ ಸ್ಯಾಂಪಲನ್ನೂ ಆಹಾರ ಸುರಕ್ಷತಾ ಇಲಾಖೆಯ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿತು. ಫಲಿತಾಂಶ ಮಾತ್ರ ಆತಂಕಕಾರಿಯಾಗಿತ್ತು. ಈ ತುಪ್ಪಗಳು ಸೇವನೆಗೆ ಯೋಗ್ಯವೇ ಅಲ್ಲ. ಇದರೊಳಗೆ ಬೇರೆ ಪ್ರಾಣಕ್ಕೆ ಎರವಾಗುವ ಕೊಬ್ಬು ಸೇರಿಸಿದ್ದಾರೆ ಅನ್ನೋ ವರದಿ ಬಂತು. ಜನರಿಗೆ ಮೋಸ ಮಾಡೋ ಈ ನಕಲಿ ತುಪ್ಪ ಮಾರಾಟಗಾರರ ವಿರುದ್ಧ ನಾವು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ದೂರು ಕೊಟ್ಟೆವು. ಅವರು ತಕ್ಷಣ ಈ ಅಂಗಡಿಗಳಿಗೆ ದಾಳಿ ಮಾಡಿದರು.

ಈ ನಕಲಿ ತುಪ್ಪ ಮಾರಾಟಗಾರರ ಬಳಿ ಆಹಾರ ಸುರಕ್ಷತಾ ಇಲಾಖೆಯ ಪರವಾನಗಿಯೇ ಇಲ್ಲ. ಅಲ್ಲದೆ ಇವರು ಎಫ್​ಎಸ್​ಎಸ್​ಎಐಯ ಎಲ್ಲಾ ನಿಯಮಗಳನ್ನ ಗಾಳಿಗೆ ತೂರಿ ದಂಧೆ ಮಾಡುತ್ತಿರೋದು ಗಮನಕ್ಕೆ ಬಂತು. ಇವರಿಗೆ ನೋಟೀಸ್ ನೀಡಿದ ಅಧಿಕಾರಿಗಳು, ಸ್ಯಾಂಪಲ್​ ಪಡೆದು, ತಪ್ಪಿತಸ್ಥರ ವಿರುದ್ಧ  ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ವರದಿ: ವಿಜಯಲಕ್ಷ್ಮಿ ಶಿಬರೂರು, ಸುವರ್ಣ ನ್ಯೂಸ್​

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಿತ್ತೂರು ಕರ್ನಾಟಕಕ್ಕೆ 5 ಸಾವಿರ ಕೋಟಿ ನೀಡಿ, ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ: ಶಾಸಕ ರಾಜು ಕಾಗೆ
ಪುರುಷರಿಗೆ ಮಾತ್ರವಲ್ಲ ಮೊಬೈಲ್‌ ಸೇಫ್ಟಿಗೆ ಬಂದಿದೆ ಕಾಂಡೋಮ್‌, ಏನಿದು USB ಕಾಂಡೋಮ್‌?