
ಲೈಂಗಿಕ ಜೀವನ ‘ಸಂತೋಷ’ದಾಯಕವಾಗಿದ್ದರೆ ನಿಮ್ಮ ಸಂಗಾತಿ ನಿಮಗೆ ಮೋಸ ಮಾಡಲ್ಲ ಎಂದು ನೀವು ಭಾವಿಸಿದ್ದೀರಾ? ಹಾಗಾದರೆ ನಿಮ್ಮ ಅನಿಸಿಕೆ ತಪ್ಪಾಗಿರಲೂಬಹುದು.
ಏಕೆಂದರೆ ಫ್ಲೋರಿಡಾ ಸ್ಟೇಟ್ ಯೂನಿವರ್ಸಿಟಿಯ ಹೊಸ ಸಂಶೋಧನೆಯೊಂದರ ಪ್ರಕಾರ ಬೇರೆಯೇ ವಿಷಯ ಬಹಿರಂಗಪಡಿಸಿದೆ.
ದಂಪತಿ ಮಧ್ಯೆ ಲೈಂಗಿಕ ಸಂಬಂಧ ತೃಪ್ತಿಕರವಾಗಿಲ್ಲದಿದ್ದರೆ, ಸಂಗಾತಿಯು ದಾರಿತಪ್ಪುವ ಸಾಧ್ಯತೆಗಳಿರುತ್ತವೆ ಎಂದು ಸಾಮಾನ್ಯವಾಗಿ ಭಾವಿಸಲಾಗುತ್ತದೆ. ಆದರೆ ಹೊಸ ಸಂಶೋಧನೆ ಪ್ರಕಾರ ಯಾರ ಮಧ್ಯೆ ಲೈಂಗಿಕ ಸಂಬಂಧ ತೃಪ್ತಿಕರವಾಗಿರುತ್ತದೋ ಅಂಥವರೇ ತನ್ನ ಸಂಗಾತಿಗೆ ಮೋಸ ಮಾಡುವ ಸಾಧ್ಯತೆಗಳಿರುತ್ತವೆ ಎಂದು ಹೇಳಲಾಗಿದೆ.
ಸಂಶೋಧನಕಾರರು 233 ನವದಂಪತಿಗಳ ಲೈಂಗಿಕ ಚಟುವಟಿಕೆ, ಸಂತೃಪ್ತಿ ಮಟ್ಟ, ಬದ್ಧತೆ ಹಾಗೂ ವಿಶ್ವಾಸಾರ್ಹತೆ ಮುಂತಾದ ಅಂಶಗಳನ್ನು ಸುಮಾರು ಮೂರುವರೆ ವರ್ಷಗಳ ಕಾಲ ಅಧ್ಯಯನ ಮಾಡಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಜೊತೆಗೆ ಆ ದಂಪತಿಗಳಿಗೆ, ಇನ್ನೋರ್ವ ಆಕರ್ಷಕ ಪುರುಷ/ಮಹಿಳೆಯ ಫೋಟೋ ತೋರಿಸಲಾಗಿತ್ತು. ಯಾರು ಆ ಪೋಟೋವನ್ನು ಕಡಿಮೆ ಕಾಲ ದಿಟ್ಟಿಸಿದರೋ, ಅಂಥವರು ತಮ್ಮ ಸಂಗಾತಿಯನ್ನು ವಂಚಿಸುವ ಸಾಧ್ಯತೆ ಕಡಿಮೆಯಿದೆ ಎಂದು ಅಧ್ಯಯನವು ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.