
ದಾವಣಗೆರೆ(ಅ.25): ನಗರದ ಪಿ ಬಿ ರಸ್ತೆಯಲ್ಲಿ ರುವ ಶ್ರೀ ಲಾಡ್ಜ್ ನಲ್ಲಿ ಇಸ್ಪೀಟ್ ಆಡುತ್ತಿದ್ದ 11 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಬಂಧಿತರನ್ನು ನೋಡಿ ಪೊಲೀಸರು ಶಾಕ್ ಆಗಿದ್ದಾರೆ. ಏಕೆಂದರೆ 11 ಜನರಲ್ಲಿ ಆರು ಜನ ಪೊಲೀಸ್ ಪೇದೆಗಳಾಗಿದ್ದಾರೆ . ಬಂಧಿತರಲ್ಲಿ ನಾಲ್ವರು ಸಿವಿಲ್ ಪೊಲೀಸರು, ಇಬ್ಬರು ಡಿಆರ್ ಪೊಲೀಸರು. ನ್ಯಾಮತಿ ಠಾಣೆ ಪೇದೆ ದೊಡ್ಡ ಬಸಪ್ಪ , ದಾವಣಗೆರೆ ಬೆಸ್ಕಾಂ ಪೊಲೀಸ್ ಸುಭಾಷ್, ಹಲವಾಗಲು ಪೊಲೀಸ್ ಠಾಣೆ ಪೇದೆ ರವಿ, ಬಳಚೋಡು ಪೊಲೀಸ್ ಠಾಣೆ ಪೇದೆ ಮಂಜಪ್ಪ , ಡಿಆರ್ ಪೊಲೀಸ್ ಪೇದೆ ಗಳಾದ ಅಣ್ಣೇಶ್, ನಿಂಗಪ್ಪ ರನ್ನು ಬಂಧಿಸಲಾಗಿದೆ. ದಾಳಿ ವೇಳೆಯಲ್ಲಿ ಸ್ಥಳದಲ್ಲಿ 2 ಲಕ್ಷ 73 ಸಾವಿರ ಹಣ ಸಿಕ್ಕಿದೆ.
Click Here :ಪ್ರೇಮಿಗಳೆ ನಂದಿ ಬೆಟ್ಟದಲ್ಲಿ ರೊಮ್ಯಾನ್ಸ್ ಮಾಡುವಾಗ ಎಚ್ಚರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.