ಮುಂದಿನ ವಾರ ಸಾಲು ಸಾಲು ರಜೆಗಳು; ಈ ವಾರವೇ ಮುಗಿಸಿಕೊಳ್ಳಿ ಬ್ಯಾಂಕ್ ವ್ಯವಹಾರ

Published : Sep 21, 2017, 10:24 PM ISTUpdated : Apr 11, 2018, 12:58 PM IST
ಮುಂದಿನ ವಾರ ಸಾಲು ಸಾಲು ರಜೆಗಳು; ಈ ವಾರವೇ ಮುಗಿಸಿಕೊಳ್ಳಿ ಬ್ಯಾಂಕ್ ವ್ಯವಹಾರ

ಸಾರಾಂಶ

ನೀವು ಬ್ಯಾಂಕ್ ನಲ್ಲಿ ಕ್ಯಾಶ್ ಡ್ರಾ ಮಾಡ್ಬೇಕಾ? ಅಥವಾ ಡಿಪಾಸಿಟ್ ಮಾಡ್ಬೇಕಾ? ಹಾಗಾದ್ರೆ ಈ ವಾರವೇ ಬ್ಯಾಂಕ್ ವ್ಯವಹಾರ ಪೂರ್ಣ ಮಾಡಿಕೊಳ್ಳಿ. ಮುಂದಿನ ವಾರದಿಂದ ಐದು ದಿನಗಳ ಕಾಲ ಬ್ಯಾಂಕ್ ಓಪನ್ ಇರುವುದಿಲ್ಲ.

ಬೆಂಗಳೂರು (ಸೆ.21): ನೀವು ಬ್ಯಾಂಕ್ ನಲ್ಲಿ ಕ್ಯಾಶ್ ಡ್ರಾ ಮಾಡ್ಬೇಕಾ? ಅಥವಾ ಡಿಪಾಸಿಟ್ ಮಾಡ್ಬೇಕಾ? ಹಾಗಾದ್ರೆ ಈ ವಾರವೇ ಬ್ಯಾಂಕ್ ವ್ಯವಹಾರ ಪೂರ್ಣ ಮಾಡಿಕೊಳ್ಳಿ. ಮುಂದಿನ ವಾರದಿಂದ ಐದು ದಿನಗಳ ಕಾಲ ಬ್ಯಾಂಕ್ ಓಪನ್ ಇರುವುದಿಲ್ಲ.

ಈ ಭಾರೀ ಗಾಂಧಿ ಜಯಂತಿ, ದಸರಾ ಹಬ್ಬ ಒಂದೇ ಸಾರಿ ಬಂದಿರುವುದರಿಂದ ಮುಂದಿನ ವಾರ ಸಾಲು ಸಾಲು ರಜೆಗಳು ಬಂದಿವೆ. ಬ್ಯಾಂಕ್ ಗಳು 5 ದಿನಗಳ ಕಾಲ ಸ್ಥಗಿತಗೊಳ್ಳಲಿದ್ದು ಕ್ಯಾಶ್ ಬಿಡಿಸಿಕೊಳ್ಳವರಿಗೆ, ಕ್ಯಾಶ್ ಕಟ್ಟೋರಿಗೆ ತೊಂದರೆ ಆಗುವ ಸಾಧ್ಯತೆ ಇದೆ. ಸೆಪ್ಟಂಬರ್ 28 ರಂದು ನಿರ್ಬಂಧಿತ ರಜೆ ಇದ್ದು,  29 ರಂದು ಆಯುಧ ಪೂಜೆ, 30 ರಂದು ವಿಜಯದಶಮಿ, ಅಕ್ಟೋಬರ್ 1 ರಂದು ಭಾನುವಾರ ಹಾಗೂ ಅಕ್ಟೋಬರ್ 2 ರಂದು ಗಾಂಧಿ ಜಯಂತಿ. ಹೀಗೆ ಸಾಲು ರಜೆ ಬಂದಿರುವುದರಿಂದ ಗ್ರಾಹಕರು ಹಣಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ.  ಗ್ರಾಹಕರು ಸೆಪ್ಟಂಬರ್ 28ಕ್ಕಿಂತ ಮುಂಚೆ ಹಣ ಡ್ರಾ ಅಥವಾ ಡಿಪಾಸಿಟ್ ಮಾಡಿಕೊಳ್ಳುವುದು ಒಳ್ಳೆದು.

ಬಸ್ ದರ ದುಪ್ಪಟ್ಟು ಆಗಲಿದೆ

5 ದಿನಗಳ ಕಾಲ ಸಾಲ ಸಾಲು ರಜೆ ಬಂದಿರುವುದರಿಂದ ಬೆಂಗಳೂರುನಲ್ಲಿ ನೆಲೆಸಿರುವ ವಲಸಿಗರು ತಮ್ಮ ತಮ್ಮ ಊರುಗಳತ್ತ ಹೊರಟಿದ್ದಾರೆ. ಇನ್ನು ಇದೇ ಸಮಯಕ್ಕಾಗಿ ಕಾಯುತ್ತಿರುವ ಖಾಸಗಿ ಬಸ್ ಗಳು ದುಪ್ಪಟ್ಟು ಹಣ ವಸೂಲಿಗೆ ಇಳಿದಿವೆ. ಇನ್ನು  ಬ್ಯಾಂಕ್ ಗಳು ರಜೆ ಇರುವುದರಿಂದ ಎಟಿಎಂ ಗಳು ಕೂಡ ಸ್ಥಗಿತಗೊಳ್ಳುವ ಸಾದ್ಯತೆ ಇದೆ. ಹೀಗಾಗಿ ಗ್ರಾಹಕರು  ಮುಂಜಾಗೃತವಾಗಿ ಹಣ ಬಿಡಿಸಿಕೊಳ್ಳುವುದು ಉತ್ತಮ.

 

 

 

 

 

 

 

 

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌