
ಭೋಪಾಲ್: ಜೂ.6ರಂದು ಮಧ್ಯಪ್ರದೇಶದ ಪಿಪ್ಲಿಯಾಮಂಡಿನಲ್ಲಿ ನಡೆಯಲಿರುವ ರಾಹುಲ್ ಗಾಂಧಿ ರ್ಯಾಲಿಗೆ ಹೆಚ್ಚಿನ ಜನರನ್ನು ಕರೆತಂದವರಿಗೆ 2019ರ ಲೋಕಸಭಾ ಟಿಕೆಟ್ ನೀಡುವುದಾಗಿ ಕಾಂಗ್ರೆಸ್ ನಾಯಕರು ಘೋಷಿಸಿದ್ದಾರೆ.
ಜೂ.6ರ ರ್ಯಾಲಿಗೆ ಸ್ಥಳೀಯ ನಾಯಕರು ಹೆಚ್ಚಿನ ಜನಸಂಖ್ಯೆಯಲ್ಲಿ ಕಾರ್ಯಕರ್ತರ ಕರೆತರಬೇಕು. ಯಾರು ಹೆಚ್ಚು ಜನಸಂಖ್ಯೆ ಮತ್ತು ಬೆಂಬಲಿಗರನ್ನು ಕರೆತರುತ್ತಾರೆಯೋ ಅವರಿಗೆ ಕಾಂಗ್ರೆಸ್ ಟಿಕೆಟ್ ಹಾದಿ ಸುಗಮವಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಸಂಜಯ್ ಕಪೂರ್ ಅವರು ಹೇಳಿದ್ದಾರೆ.
ರಾಹುಲ್ ರಾರಯಲಿ ವೇಳೆ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿಯೂ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದ್ದು, ಅವರು ಯಾವ ನಾಯಕ ಎಷ್ಟುಜನಸಂಖ್ಯೆಯನ್ನು ಸೇರಿಸಿದ್ದರು ಎಂಬ ಬಗ್ಗೆ ಗಮನಿಸುತ್ತಾರೆ. ಇನ್ನು ಕಳೆದ ವರ್ಷ ಭಾರೀ ಪ್ರತಿಭಟನೆಗೆ ಸಾಕ್ಷಿಯಾಗಿದ್ದ ಮಂಡಸೌರ್ ಅನ್ನು ಕಾಂಗ್ರೆಸ್ ಚುನಾವಣಾ ಪ್ರಚಾರದ ಮುಖ್ಯ ಕೇಂದ್ರವನ್ನಾಗಿ ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಅವರ ರಾರಯಲಿಗೆ ಹೆಚ್ಚು ಜನಸಂಖ್ಯೆಯನ್ನು ಸೇರಿಸುವ ಮೂಲಕ ಬಿಜೆಪಿಗೆ ಒಂದು ಸ್ಪಷ್ಟಸಂದೇಶ ರವಾನಿಸಬೇಕು ಎಂದು ಕಾಂಗ್ರೆಸ್ ಶಾಸಕ ಜೀತು ಪಟ್ವಾರಿ ಪಕ್ಷದ ಮುಖಂಡರಲ್ಲಿ ಕೇಳಿಕೊಂಡರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.