ಜರ್ಮನಿಯಲ್ಲಿ ರಾಹುಲ್: ಮಿಲಿಂದ್ ರಮ್ಯಾ ಫೋಟೋ ಕೂಲ್!

Published : Aug 23, 2018, 07:15 PM ISTUpdated : Sep 09, 2018, 09:07 PM IST
ಜರ್ಮನಿಯಲ್ಲಿ ರಾಹುಲ್: ಮಿಲಿಂದ್ ರಮ್ಯಾ ಫೋಟೋ ಕೂಲ್!

ಸಾರಾಂಶ

ಇಲ್ಲಿ ಕೊಡಗಿನ ಜನರು ಕಣ್ಣಿರಲ್ಲಿ ಕೈ ತೊಳೆಯುತ್ತಿದ್ದಾರೆ. ಒಂದು ಕಾಲದ ಮಂಡ್ಯ ಸಂಸದೆ ಜರ್ಮನಿಯಲ್ಲಿದ್ದಾರೆ. ಕೊಡಗಿಗೂ-ಮಂಡ್ಯಕ್ಕೂ ಸಂಬಂಧ ಇಲ್ಲ ಎಂದು ನೀವು ವಾದಿಸಬಹುದು. ಆದರೆ ಹಿಂದೆ ಮಂಗಳೂರಿನಲ್ಲಿ ಗಲಭೆಗಳಾದಾಗ, ಕೊಡಗಿನಲ್ಲಿ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತವಾಗಿದ್ದಾಗ ಅಂದಿನ ಸರಕಾರವನ್ನು ಸಮರ್ಥಿಸಕೊಂಡಿದ್ದ ರಮ್ಯಾ ಇದೀಗ ಯಾವ ಮಾತನ್ನು ಆಡಿಲ್ಲ.  ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ವೊಂದನ್ನು ರಿ ಟ್ವೀಟ್ ಮಾಡಿದ್ದು ಬಿಟ್ಟರೆ ಕೊಡಗಿನ ಬಗ್ಗೆ ಯಾವ ಮಾತನ್ನು ಆಡಿಲ್ಲ.... ಈ ಎಲ್ಲ ಆರೋಪಗಳು ಸೋಶಿಯಲ್ ಮೀಡಿಯಾದಲ್ಲಿ ಎದ್ದಿದೆ.. ಅದಕ್ಕೆ ಕಾರಣ ರಮ್ಯಾ ಹಾಕಿರುವ ಫೋಟೋಗಳು..

ಬೆಂಗಳೂರು[ಆ.23]  ಕಳೆದ ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿಯೂ ಅಷ್ಟೊಂದು ಆ್ಯಕ್ಟೀವ್ ಆಗಿರದ ರಮ್ಯಾ ಇದೀಗ ಒಂದೆ ಬಾರಿ ತಮ್ಮ ಜರ್ಮನಿಯ ಪ್ರಯಾಣದ ಭಾವಚಿತ್ರಗಳನ್ನು ಪ್ರಕಟಿಸಿದ್ದಾರೆ. ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಖಾರವಾದ ಪ್ರತಿಕ್ರಿಯೆಯನ್ನು ಎದುರಿಸಿದ್ದಾರೆ.

ಲೋಕಸಭಾ ಸದಸ್ಯ, ಉದ್ಯಮಿ ಮಿಲಿಂದ್ ದೇವೋರಾ ಜತೆ ಇರುವ ಫೋಟೋವೊಂದನ್ನು ಅಪ್ ಲೋಡ್ ಮಾಡಿದ್ದಾರೆ. ಜತೆಗೆ ಜರ್ಮನಿಯಲ್ಲಿ ರಾಹುಲ್ ಗಾಂಧಿ ಪಾಲ್ಗೊಂಡ ಕಾರ್ಯಕ್ರಮಗಳ ವಿವರವನ್ನು ನೀಡಿದ್ದಾರೆ. ರಮ್ಯಾ ಅವರೆ ಕೊಡಗು ಜನರಿಗೆ ಸಹಾಯ ಮಾಡಿ ಎಂದು ಕೇಳಿಕೊಂಡವರು ಇದ್ದಾರೆ.

ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಸೆಲ್ ನಲ್ಲಿ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದ ವೇಳೆ ರಮ್ಯಾ ನಿರಂತರವಾಗಿ ಟ್ವೀಟ್ ಮಾಡಿದ್ದರು. ಪ್ರಕರಣ ಸುಳ್ಳು ಎಂದು ಸಮರ್ಥಿಸಿಕೊಂಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪೌರೋಹಿತ್ಯ ಮಾಡಿಕೊಂಡು ಹೆಂಡ್ತಿ ಕನಸಿಗೆ ಜೀವ ತುಂಬಿದ ಗಂಡನಿಗೆ ಡಿವೋರ್ಸ್ ಭಾಗ್ಯ ನೀಡಿದ ಸಬ್‌ ಇನ್ಸ್‌ಪೆಕ್ಟರ್‌
ಪುನೀತ್ ಕೆರೆಹಳ್ಳಿ ತಂಡದಿಂದ ಅಕ್ರಮ ವಲಸಿಗರ ಬೇಟೆ: ಪೊಲೀಸರು ಮಾಡಬೇಕಾದ ಕೆಲಸವನ್ನು ಸಂಘಟನೆಗಳು ಮಾಡಬೇಕೇ?