ಚುನಾವಣಾ ಪ್ರಣಾಳಿಕೆಯಿಂದ ಮದ್ಯ ನಿಷೇಧ ಕೈ ಬಿಟ್ಟ ಸಿಎಂ

By Suvarna Web DeskFirst Published Apr 3, 2018, 9:12 PM IST
Highlights

ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ ಮಾಡಲು ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ.  ನಾವು  ಅಧಿಕಾರಕ್ಕೆ ಬಂದರೆ  ಮದ್ಯ ನಿಷೇಧ ಮಾಡಲು ನಾವು ಮುಂದಾಗಲ್ಲ ಎನ್ನುವ ಮೂಲಕ  ಮದ್ಯ ನಿಷೇಧ ಮಾಡುವಂತೆ ಬಂದಿರುವ  ಪ್ರಸ್ತಾಪವನ್ನು  ಕಾಂಗ್ರೆಸ್  ತಳ್ಳಿ ಹಾಕಿದೆ. 

ಬೆಂಗಳೂರು (ಏ. 03): ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ ಮಾಡಲು ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ.  ನಾವು  ಅಧಿಕಾರಕ್ಕೆ ಬಂದರೆ  ಮದ್ಯ ನಿಷೇಧ ಮಾಡಲು ನಾವು ಮುಂದಾಗಲ್ಲ ಎನ್ನುವ ಮೂಲಕ  ಮದ್ಯ ನಿಷೇಧ ಮಾಡುವಂತೆ ಬಂದಿರುವ  ಪ್ರಸ್ತಾಪವನ್ನು  ಕಾಂಗ್ರೆಸ್  ತಳ್ಳಿ ಹಾಕಿದೆ. 

ಬಿಹಾರ ಮಾದರಿಯಲ್ಲಿ ರಾಜ್ಯದಲ್ಲಿ ಮದ್ಯ ನಿಷೇಧ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ ರಾಜ್ಯ ಬಿಜೆಪಿ ನಾಯಕರು.  ವೀರಪ್ಪ ಮೊಯ್ಲಿ ನೇತೃತ್ವದ ಪ್ರಣಾಳಿಕಾ ಸಮಿತಿ ಮುಂದೆ ಮಾಡಲಾಗಿರುವ  ಮಧ್ಯ ನಿಷೇಧ  ಪ್ರಸ್ತಾಪವನ್ನು ತಳ್ಳಿ ಹಾಕಿದ್ದಾರೆ. 
ಪ್ರಸ್ತಾಪ ಒಪ್ಪಿಕೊಂಡರೆ 18 ಸಾವಿರ ಕೋಟಿ ರೂಪಾಯಿ ಪ್ರತಿ ವರ್ಷ ನಷ್ಟವಾಗುತ್ತದೆ ಎಂದು   ಪ್ರಣಾಳಿಕೆ ಸಮಿತಿ ಮುಂದೆ  ಸಿಎಂ ಸಿದ್ದರಾಮಯ್ಯ ತಮ್ಮ ವಾದ ಮಂಡಿಸಿದ್ದಾರೆ. ಸಿಎಂ ವಿವರಣೆಗೆ ಕಾಂಗ್ರೆಸ್ ಚುನಾವಣಾ ಪ್ರಣಾಳಿಕಾ ಸಮಿತಿ ಒಪ್ಪಿಗೆ ನೀಡಿದೆ. 

ಇಷ್ಟೆಲ್ಲಾ ನಷ್ಟ ಮಾಡಿಕೊಂಡು ಮದ್ಯ ನಿಷೇಧ ಮಾಡಲು ಸಾಧ್ಯವಾಗುವುದಿಲ್ಲ.  ಮದ್ಯ ನಿಷೇಧ ಪ್ರಸ್ತಾಪವನ್ನು  ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸೋದು ಬೇಡ ಎಂದು ಸಿಎಂ ಹೇಳಿದ್ದಾರೆ. 
 

click me!