ಸಿಎಂ ಸಿದ್ದರಾಮಯ್ಯಗೆ ಪಕ್ಕಾ ಆಯ್ತಾ ಬಾದಾಮಿ ಟಿಕೆಟ್..?

By Suvarna Web DeskFirst Published Mar 26, 2018, 1:46 PM IST
Highlights

ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ನಡೆಸುತ್ತಿದ್ದು, ಬಾದಾಮಿ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಕುರಿತು ಬಾರಿ ಚರ್ಚೆ ನಡೆಯುತ್ತಿದೆ. ಅಲ್ಲಿ ಚಿಮ್ಮನಕಟ್ಟಿ ಅವರಿಗೆ ಟಿಕೆಟ್ ನೀಡದಿರಲು  ಸಭೆಯಲ್ಲಿ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು :  ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ನಡೆಸುತ್ತಿದ್ದು, ಬಾದಾಮಿ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಕುರಿತು  ಚರ್ಚೆ ನಡೆಯುತ್ತಿದೆ. ಅಲ್ಲಿ ಚಿಮ್ಮನಕಟ್ಟಿ ಅವರಿಗೆ ಟಿಕೆಟ್ ನೀಡದಿರಲು  ಸಭೆಯಲ್ಲಿ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಾದಾಮಿಗೆ ನೀವು ಬಂದು ನಿಲ್ಲಿ ಎಂದು ಜನರು ಹೇಳುತ್ತಿದ್ದಾರೆ ಎಂದು ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದು, ನೀವೇ ನಿಲ್ಲುವುದಾದರೆ ನಿಮ್ಮ ಒಂದೇ ಹೆಸರನ್ನು ಲಿಸ್ಟ್ ಮಾಡುವುದಾಗಿ ಪರಮೇಶ್ವರ್ ಹೇಳಿದ್ದು, ನೀವು ಅಲ್ಲಿ ನಿಂತರೆ ಗೆದ್ದೇ ಗೆಲ್ಲುತ್ತೀರಾ ಎಂದು ಜಿ. ಪರಮೇಶ್ವರ್ ಹೇಳಿದ್ದಾರೆ.

ಇನ್ನು ಈಗಲೇ ಈ ಬಗ್ಗೆ ಫೈನಲ್ ಮಾಡುವುದು ಬೇಡ. ದೇವರಾಜ್ ಪಾಟೀಲ್ ಕೂಡ ಅಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅವರೂ ಗೆಲ್ಲುವ ಅಭ್ಯರ್ಥಿಯಾಗಿದ್ದು, ಅವರನ್ನೂ ಕಣಕ್ಕಿಳಿಸುವ ಬಗ್ಗೆ ಯೋಚನೆ ಮಾಡುತ್ತೇವೆ ಎಂದು ಸಿಎಂ ಹೇಳಿದ್ದಾರೆ.

ಮೈಸೂರಿನಲ್ಲಿಯೂ ಕೂಡ ನಾನು 2 ಕ್ಷೇತ್ರ  ನೋಡಿಕೊಳ್ಳಬೇಕು ಎಂದು ಸಿಎಂ ಹೇಳಿದರು.ಇನ್ನು ಹಾನಗಲ್’ನಲ್ಲಿಯೂ ಕೂಡ ಮನೋಹರ್ ತಹಶೀಲ್ದಾರ್  ಬದಲು ಅಭ್ಯರ್ಥಿ ಬಗ್ಗೆ ಚರ್ಚೆ ನಡೆದಿದ್ದು, ಗುಲ್ಬರ್ಗಾ ಕ್ಷೇತ್ರದ ಜಿ. ರಾಮಕೃಷ್ಣ ಅವರ ಬದಲು ಬೇರೆ ಅಭ್ಯರ್ಥಿಯ ಬಗ್ಗೆ ಸಮಿತಿಯಲ್ಲಿ ಚರ್ಚೆ ನಡೆಸಲಾಗಿದೆ. ಇನ್ನು ಅಂಬರೀಶ್ ಹಾಗೂ ಯಾದಗಿರಿ ಅಭ್ಯರ್ಥಿ ಬಗ್ಗೆಯೂ ಕೂಡ ಚರ್ಚೆ ನಡೆಸಲಾಗಿದೆ.

click me!