ಕರ್ನಾಟಕ ಬಿಜೆಪಿಗೆ ಬಿಗ್ ಶಾಕ್..?

By Web DeskFirst Published Dec 9, 2018, 7:53 AM IST
Highlights

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 35 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದ ಬಿಜೆಪಿಗೆ ಕಾಂಗ್ರೆಸ್ ಮುಖಂಡರು ತಿರುಗೇಟು ನೀಡಿದ್ದಾರೆ. ಬಿಜೆಪಿ ಅವಧಿಯಲ್ಲಿ 66 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಹೇಳಿದ್ದಾರೆ. 

ಬೆಂಗಳೂರು : ‘ಬಿಜೆಪಿಯವರು ಸಿಎಜಿ ವರದಿ ಬಗ್ಗೆ ಕನಿಷ್ಠ ಜ್ಞಾನ ಇಲ್ಲದೇ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 35 ಸಾವಿರ ಕೋಟಿ ರು. ಹಗರಣ ನಡೆದಿದೆ ಎಂಬ ಸುಳ್ಳು ಆರೋಪ ಮಾಡಿದ್ದಾರೆ.

ಇದೇ ಆಧಾರದ ಮೇಲೆ ಸಿಎಜಿ ವರದಿ ಪರಿಶೀಲಿಸಿದರೆ ಬಿಜೆಪಿಯ 2008-2013ರ ಅವಧಿಯಲ್ಲಿ 66,576 ಕೋಟಿ ರು.ಗಳಷ್ಟು ಬೃಹತ್ ಹಗರಣ ನಡೆದಿದೆ’ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಹಾಗೂ ಸಂವಹನ ವಿಭಾಗದ ಮುಖ್ಯಸ್ಥ ರಿಜ್ವಾ ಅರ್ಷ ಆರೋಪ ಮಾಡಿದ್ದಾರೆ.

ಶನಿವಾರ ಕೆಪಿಸಿಸಿ ಉಪಾಧ್ಯಕ್ಷ ವಿ.ಆ. ಸುದರ್ಶ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಸಿಎಜಿ ವರದಿಗಳ ವಿಶ್ಲೇಷಣಾ ವರದಿಯನ್ನು ಬೆಳಗಾವಿ ಅವೇಶನದಲ್ಲಿ ಪ್ರಸ್ತಾಪಿಸಲಿ ಎಂದೂ ಸವಾಲು ಹಾಕಿದರು.

ಸಿದ್ದರಾಮಯ್ಯ ಅವರಿಗೆ ಇರುವ ಒಳ್ಳೆಯ ಹೆಸರು ಕೆಡಿಸಲು ಸುಳ್ಳು ಆರೋಪ ಮಾಡಿದ್ದಾರೆ. ಮೊದಲು ಅವರು ಬಜೆಟ್ ಹಾಗೂ ಸಿಎಜಿ ವರದಿಯನ್ನು ಅಧ್ಯಯನ ಮಾಡುವ ಬಗ್ಗೆ ತರಬೇತಿ ಪಡೆಯಲಿ. ‘ಖರ್ಚಾಗಿದ್ದು’, ‘ಖರ್ಚಾಗದೇ ಇರುವ’ ಎಂಬ ಬಗ್ಗೆ ಮೊದಲು  ತಿಳಿದುಕೊಳ್ಳಬೇಕು. 

ಬಿ. ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸದಾನಂದಗೌಡರ  ಅವಧಿಯಲ್ಲಿ 66,576 ಕೋಟಿ ರು. ಹಗರಣ ನಡೆದಿದೆ. ಬಿಜೆಪಿ ವಿರುದ್ಧ 600 ಪ್ರಕರಣಗಳ ಮಾಹಿತಿ ಇದೆ. ಬಿಜೆಪಿಯವರು ಎಷ್ಟು ಭ್ರಷ್ಟರು ಎಂಬುದನ್ನು ಬೆಳಗಾವಿ ಅಧಿವೇಶನದಲ್ಲಿ ಬಹಿರಂಗಪಡಿಸುತ್ತೇನೆ, ಅವರು ಚರ್ಚೆಗೆ ಬರಲಿ ಎಂದು ಹೇಳಿದರು.

click me!