ರಾಜ್ಯದತ್ತ ಮೋದಿ ನಿರ್ಲಕ್ಷ್ಯ: ಸ್ವಾಭಿಮಾನಿ ಕನ್ನಡಿಗರು ಸಹಿಸೋಲ್ಲವೆಂದ ಮಾಜಿ ಸಿಎಂ

By Web DeskFirst Published Aug 17, 2019, 12:50 PM IST
Highlights

ರಾಜ್ಯದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇದರಿಂದ ಜನರು ತತ್ತರಿಸುತ್ತಿದ್ದು ಇಷ್ಟಾದರೂ ಕೇಂದ್ರ ಸರ್ಕಾರ ರಾಜ್ಯದತ್ತ ನಿರ್ಲಕ್ಷ್ಯ ದೋರಣೆ ನಿಲ್ಲುತ್ತಿಲ್ಲ. ರಾಜ್ಯದತ್ತ ತಿರುಗಿಯೂ ನೋಡುತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರ [ಆ.17]: ರಾಜ್ಯದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು,  ಕೊಟ್ಯಂತರ ಜನರು ನೆರೆ ಸಂತ್ರಸ್ತರಾಗಿದ್ದಾರೆ. ಮನೆ, ಆಸ್ತಿ ಪಾಸ್ತಿ ಕಳೆದುಕೊಂಡು ನೆಲೆ ಇಲ್ಲದೇ ಪರದಾಡುತ್ತಿದ್ದಾರೆ. 

ರಾಜ್ಯದ  ಜನರು ಪ್ರವಾಹ ಪರಿಸ್ಥಿತಿಯಿಂದ ತತ್ತರಿಸುತ್ತಲೇ ಇದ್ದಾರೆ.  ಸಾವಿರಾರು ಕೋಟಿ ನಷ್ಟ ಉಂಟಾಗಿದ್ದು, ಇಷ್ಟಾದರೂ ಕೇಂದ್ರ ಸರ್ಕಾರದಿಂದ ರಾಜ್ಯದತ್ತ ನಿರ್ಲಕ್ಷ್ಯ ದೋರಣೆ ಕಂಡು ಬರುತ್ತಿದೆ. ಕೇಂದ್ರವು ರಾಜ್ಯದ ಸಮಸ್ಯೆಯತ್ತ ತಿರುಗಿ ಕೂಡ ನೋಡುತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಬಗ್ಗೆ ಟ್ವೀಟ್ ಮಾಡಿದ ಅವರು ನೆರೆ ಇಲ್ಲವೇ ಬರ ಪರಿಸ್ಥಿತಿ ಎದುರಿಸಿದ ಸಂದರ್ಭದಲ್ಲಿ ವಾಜಪೇಯಿ ಸರ್ಕಾರವೂ ಸೇರಿದಂತೆ ಹಿಂದಿನ ಯಾವ ಕೇಂದ್ರ ಸರ್ಕಾರವೂ  ಯಾವ ಪ್ರಧಾನಿಯೂ ಕರ್ನಾಟಕ ರಾಜ್ಯವನ್ನು ಈ ರೀತಿ ನಿರ್ಲಕ್ಷ್ಯ ಮಾಡಿರಲಿಲ್ಲ.  ಮುಖ್ಯಮಂತ್ರಿಗಳನ್ನು ಈ ರೀತಿ ಅವಮಾನಿಸಿಲ್ಲ.  ಸ್ವಾಭಿಮಾನಿ, ಸ್ವಾವಲಂಬಿ  ಕರ್ನಾಟಕ  ಇದನ್ನು ಸಹಿಸದು  ಎಂದಿದ್ದಾರೆ. 

 ಲಕ್ಷಾಂತರ ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆ ನೀರು ಪಾಲಾಗಿದೆ. ನೆರೆ ಸಂತ್ರಸ್ತರು ಮತ್ತೆ ತಮ್ಮ ಜೀವನ ರೂಪಿಸಿಕೊಳ್ಳಲು ವರ್ಷಗಟ್ಟಲೇ ಸಮಯಾವಕಾಶದ ಅಗತ್ಯವಿದೆ.  ಆದರೆ ರಾಜ್ಯದಿಂದ ಮಾಡಿದ ಯಾವ ಮನವಿಗೂ ಕೇಂದ್ರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಕೇಂದ್ರದ ನಿರ್ಲಕ್ಷ್ಯ ದೋರಣೆ, ಮುಖ್ಯಮಂತ್ರಿಗಳ ಮನವಿಗೂ ಸ್ಪಂದಿಸದ ಕೇಂದ್ರದ ನಿಲುವು ಸಹಿಸಲು ಅಸಾಧ್ಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.  

 

ನೆರೆ ಇಲ್ಲವೆ ಬರ ಪರಿಸ್ಥಿತಿ ಎದುರಿಸಿದ ಸಂದರ್ಭಗಳಲ್ಲಿ , ವಾಜಪೇಯಿ ಸರ್ಕಾರವೂ ಸೇರಿದಂತೆ ಹಿಂದಿನ ಯಾವ ಕೇಂದ್ರ ಸರ್ಕಾರವೂ,
ಯಾವ ಪ್ರಧಾನಿಯೂ ಕರ್ನಾಟಕ ರಾಜ್ಯವನ್ನು ಈ ರೀತಿ ನಿರ್ಲಕ್ಷಿಸಿಲ್ಲ, ಮುಖ್ಯಮಂತ್ರಿಗಳನ್ನು ಈ ರೀತಿ ಅವಮಾನಿಸಿಲ್ಲ.
ಸ್ವಾಭಿಮಾನಿ,
ಸ್ವಾವಲಂಬಿ ಕರ್ನಾಟಕ ಇದನ್ನು ಸಹಿಸದು.

— Siddaramaiah (@siddaramaiah)
click me!