Digvijay Singh big attack on BJP-RSS : ಗೋಮಾಂಸ ಸೇವನೆ ಬಗ್ಗೆ ಸಾವರ್ಕರ್ ಗೆ ಯಾವುದೇ ಸಮಸ್ಯೆ ಇರಲಿಲ್ಲ!

By Suvarna NewsFirst Published Dec 25, 2021, 7:15 PM IST
Highlights

ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ವಿವಾದಿತ ಹೇಳಿಕೆ
ಸಾವರ್ಕರ್ ಗೋವನ್ನು ಎಂದಿಗೂ ತಾಯಿ ಎಂದಿರಲಿಲ್ಲ
ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡೋದು ಖಚಿತ

ಭೋಪಾಲ್ (ಡಿ.25): ತಮ್ಮ ವಿವಾದಿತ ಹೇಳಿಕೆಗಳಿಂದಲೇ ಪಕ್ಷಕ್ಕೆ ಮುಜುಗರ ತರುವ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ (Congress leader) ದಿಗ್ವಿಜಯ್ ಸಿಂಗ್ (Digvijaya Singh ), ಶನಿವಾರ ಇಲ್ಲಿನ ನರ್ಮದಾ ಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ತರಬೇತಿ ಕಾರ್ಯಕ್ರಮ ಜನ ಜಾಗರಣ್ ಅಭಿಯಾನದ (Jan Jagran Abhiyan)ವೇಳೆ ಮತ್ತೊಂದು ವಿವಾದಿತ ಹೇಳಿಕೆ ನೀಡಿದ್ದಾರೆ. ಬಿಜೆಪಿ (BJP), ಆರ್ ಎಸ್ಎಸ್ (RSS) ಹಾಗೂ ವೀರ್ ಸಾವರ್ಕರ್ (Veer Savarkar) ಅವರ ಕುರಿತಾಗಿ ಮಾತನಾಡಿರುವ ರಾಜಸ್ಯಭಾ ಸಂಸದ ದಿಗ್ವಿಜಯ್ ಸಿಂಗ್, ಗೋಮಾಂಸ (Beef) ಸೇವನೆ ಕುರಿತಾಗಿ ಸಾವರ್ಕರ್ ಗೆ ಯಾವುದೇ ಸಮಸ್ಯೆ ಇದ್ದಿರಲಿಲ್ಲ. ಈ ಕುರಿತಾಗಿ ಅವರೇ ತಮ್ಮ ಪುಸ್ತಕದಲ್ಲಿ ಬರೆದಿದ್ದು, ಹಿಂದೂ ಧರ್ಮಕ್ಕೂ ಹಿಂದುತ್ವಕ್ಕೂ ಯಾವುದೇ ಸಂಬಂಧವೂ ಇಲ್ಲ ಎಂದು ಹೇಳಿದ್ದಾರೆ.

ಬಿಜೆಪಿ ಹಾಗೂ ಆರ್ ಎಸ್ಎಸ್ ತಮ್ಮ ಪ್ರಮುಖ ಆದರ್ಶ ಎಂದು ಹೇಳುವ ವೀರ್ ಸಾವರ್ಕರ್ ಅವರೇ ತಮ್ಮ ಪುಸ್ತಕದಲ್ಲಿ ಇದನ್ನು ಬರೆದಿದ್ದಾರೆ ಎಂದು ದಿಗ್ವಿಜಯ್ ಸಿಂಗ್ ತಿಳಿಸಿದ್ದಾರೆ. "ಅವರು (ವೀರ ಸಾವರ್ಕರ್) ತಮ್ಮ ಪುಸ್ತಕದಲ್ಲಿ ಗೋವು (Cow) ನಮ್ಮ ತಾಯಿಯಾಗಲು ಸಾಧ್ಯವಿಲ್ಲ ಮತ್ತು ಗೋಮಾಂಸವನ್ನು ತಿನ್ನುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟವಾಗಿ ಬರೆದಿದ್ದಾರೆ' ಎಂದು ಹೇಳಿರುವ ವಿಡಿಯೋವನ್ನು ಸುದ್ದಿಸಂಸ್ಥೆಗಳು ಟ್ವಟರ್ ನಲ್ಲಿ ಪ್ರಕಟಿಸಿವೆ.

ಗೋಮಾಂಸ ತಿನ್ನುವ ಹಿಂದೂಗಳೂ ಇದ್ದಾರೆ ಎಂದು ಹೇಳಿದ ಅವರು, ಗೋಮಾಂಸ ತಿನ್ನುವುದನ್ನು ಎಂದೂ ನಿಷೇಧಿಸಲಾಗಿಲ್ಲ ಎಂದು ಒತ್ತಿ ಹೇಳಿದರು. ಆದರೆ, ಇಂದು ಗೋ ಹತ್ಯೆ ಹಾಗೂ ಗೋಮಾಂಸ ತಿನ್ನುವುದನ್ನು ವಿರೋಧಿಸುವ ಹಿಂದೂಗಳು ನಮ್ಮಲ್ಲಿದ್ದಾರೆ.  ಸ್ವತಃ ಸಾವರ್ಕರ್ ಅವರೇ ದನದ ಮಾಂಸವನ್ನು ತಿನ್ನುವುದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಬರೆದಿದ್ದಾರೆ ಎಂದು ಹೇಳಿದರು.

| Veer Savarkar in his book has written that the Hindu religion doesn't have any relation with Hindutva. He also wrote that cow... can't be our mother and there is no problem in eating cow beef: Congress leader Digvijaya Singh in Madhya Pradesh's Bhopal pic.twitter.com/wYsk4YXmDJ

— ANI (@ANI)


ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸಲಿದೆ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಅಧಿಕಾರಕ್ಕೆ ಬಂದರೆ, ಖಂಡಿತವಾಗಿಯೂ ಸಂವಿಧಾನವನ್ನು ಬದಲಿಸಿದ್ದಾರೆ (BJP will change the Constitution ) ಅದರೊಂದಿಗೆ ಜಾತಿ ಮೀಸಲಾತಿಯನ್ನೂ ತೆಗೆದುಹಾಕಲಿದೆ ಎಂದು ಎಚ್ಚರಿಕೆ ನಿಡಿದ್ದಾರೆ. ದೇಶವನ್ನು ಆಡಲು ಬಿಜೆಪಿ ಚೀನಾ ಹಾಗೂ ರಷ್ಯಾದ ಮಾದರಿಯನ್ನು ಅನುಕರಣೆ ಮಾಡುತ್ತಿದೆ. ಸಂವಿಧಾನವನ್ನು ಬದಲಾಯಿಸುವುದರೊಂದಿಗೆ ಜಾತಿ ಮೀಸಲಾತಿಯನ್ನು ತೆಗೆದುಹಾಕುವ (end the reservation system) ನಿಟ್ಟಿನಲ್ಲಿ ಅವರು ಪ್ರಯತ್ನ ಪಡುತ್ತಿದ್ದಾರೆ ಹಾಗಾಗಿ ನಮ್ಮ ಯುದ್ಧವೇನಿದ್ದರೂ ಆರ್ ಎಸ್ಎಸ್ ನ ಸಿದ್ಧಾಂತಗಳ ವಿರುದ್ಧ ಎಂದು ತಿಳಿಸಿದರು. ದೇಶದ ಆರ್ಥಿಕತೆಯಯನ್ನು ಕೇಂದ್ರ ಸರ್ಕಾರ ಯಾವ ರೀತಿಯಲ್ಲಿ ಹಾಳು ಮಾಡಿದೆ ಎನ್ನುವುದನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ನವೆಂಬರ್ 14 ರಿಂದ ಜನ್ ಜಾಗರಣ ಅಭಿಯಾನವನ್ನು ದೇಶಾದ್ಯಂತ ಆರಂಭಿಸಿದೆ. ಈ ಕಾರ್ಯಕ್ರಮದಲ್ಲಿಯೇ ದಿಗ್ವಿಜಯ್ ಸಿಂಗ್ ಈ ಮಾತುಗಳನ್ನು ಹೇಳಿದ್ದಾರೆ.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ಆರ್ಟಿಕಲ್ 370 ಮರು ಜಾರಿ: ಸಿಂಗ್ ಹೇಳಿಕೆಗೆ ಬಿಜೆಪಿ ಕಿಡಿ!
ಬಿಜೆಪಿ ತಿರುಗೇಟು: ದಿಗ್ವಿಜಯ್ ಸಿಂಗ್ ಅವರ ಹೇಳಿಕೆಯ ಬಗ್ಗೆ ಬಿಜೆಪಿ ಶಾಸಕ ರಾಮೇಶ್ವರ್ ಶರ್ಮ (BJP MLA Rameshwar Sharma) ಪ್ರತಿಕ್ರಿಯೆ ನೀಡಿದ್ದು, ಅವರು ಮಹಾಪುರುಷರು. ಹಿಂದೂಗಳ ವಿರುದ್ಧವೇ ಬಿರುಕು ಮೂಡಿಸಲು ಏನು ಬೇಕೋ ಅದೆಲ್ಲವನ್ನೂ ಅವರು ಮಾಡುತ್ತಾರೆ. ಒಮ್ಮೊಮ್ಮೆ ಸಾವರ್ಕರ್ ಹೇಳಿದ್ದಾರೆ ಎನ್ನುವ ಮಾತುಗಳನ್ನು ಅವರೇ ಹೇಳುತ್ತಾರೆ. ಇನ್ನೊಮ್ಮೆ ಇತರ ಮಹಾ ವ್ಯಕ್ತಿಗಳ ಹೆಸರಿನಲ್ಲಿ ತಮ್ಮದೇ ಹೇಳಿಕೆಗಳನ್ನು ಹೇಳುತ್ತಾರೆ. ಮುಸ್ಲಿಂ ಸಮುದಾಯವನ್ನು ನಮ್ಮ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡುತ್ತಾರೆ. ಇವರ ಮಾತುಗಳಿಂದ ಪ್ರೇರಿತರಾಗುವ ಮುಸ್ಲಿಂ ಜನರು ಇನ್ನಷ್ಟು ಗೋವುಗಳ ಹತ್ಯೆ ಮಾಡುತ್ತಾರೆ. ಇದರಿಂದ ಹಿಂದೂ-ಮುಸ್ಲಿಂ ಗಲಾಟೆಗಳು ಆಗುತ್ತವೆ. ದ್ವಿಗಿಜಯ್ ಸಿಂಗ್ ಬಯಸೋದು ಕೂಡ ಇದೆ. ಅವರ ಏನೇ ಹೇಳಿದರೂ ಹಿಂದೂ ಧರ್ಮದವರು ಹಸುವನ್ನು ಮಾತೆಯ ರೀತಿಯಲ್ಲಿಯೇ ಪೂಜಿಸುತ್ತಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. 

 

click me!