ಮಾಜಿ ಸಚಿವ ಅಂಬರೀಶ್'ಗೆ ತವರು ಜಿಲ್ಲೆ ಮಂಡ್ಯದಲ್ಲೇ ಮುಖಭಂಗ!

Published : Jul 05, 2017, 12:26 PM ISTUpdated : Apr 11, 2018, 12:38 PM IST
ಮಾಜಿ ಸಚಿವ ಅಂಬರೀಶ್'ಗೆ ತವರು ಜಿಲ್ಲೆ ಮಂಡ್ಯದಲ್ಲೇ ಮುಖಭಂಗ!

ಸಾರಾಂಶ

ಮಂಡ್ಯ ನಗರಸಭೆ 28ನೇ ವಾರ್ಡ್ ಉಪ ಚುನಾವಣೆಯಲ್ಲಿ  ಜೆಡಿಎಸ್ ಅಭ್ಯರ್ಥಿ ಗೆಲುವು ಪಡೆದಿದ್ದಾರೆ. ಈ ಮೂಲಕ ಮಾಜಿ ಸಚಿವ ಅಂಬರೀಶ್'ಗೆ ತಮ್ಮ ತವರು ನಾಡು ಮಂಡ್ಯದಲ್ಲೇ ಭಾರೀ ಮುಖಭಂಗವಾಗಿದೆ.

ಮಂಡ್ಯ(ಜು.05): ಮಂಡ್ಯ ನಗರಸಭೆ 28ನೇ ವಾರ್ಡ್ ಉಪ ಚುನಾವಣೆಯಲ್ಲಿ  ಜೆಡಿಎಸ್ ಅಭ್ಯರ್ಥಿ ಗೆಲುವು ಪಡೆದಿದ್ದಾರೆ. ಈ ಮೂಲಕ ಮಾಜಿ ಸಚಿವ ಅಂಬರೀಶ್'ಗೆ ತಮ್ಮ ತವರು ನಾಡು ಮಂಡ್ಯದಲ್ಲೇ ಭಾರೀ ಮುಖಭಂಗವಾಗಿದೆ.

ಮಂಡ್ಯ ನಗರಸಭೆ 28ನೇ ವಾರ್ಡ್ 'ನಲ್ಲಿ ಪಕ್ಷೇತರ ಸದಸ್ಯ ಬಿ.ಸಿದ್ದರಾಜು ರಾಜೀನಾಮೆಯಿಂದ ಸ್ಥಾನ ತೆರವಾಗಿತ್ತು. ಇದಕ್ಕಾಗಿ ನಡೆದ ಉಪ ಚುನಾವಣೆಯಲ್ಲಿ ರಾಜು ಎಂಬವರು ಜೆಡಿಎಸ್ ಪಕ್ಷದಿಂದ ಕಣಕ್ಕಿಳಿದಿದ್ದರು. ಈ ಉಪ ಚುನಾವಣೆಯಲ್ಲಿ 1153ಮತ ಪಡೆದ ರಾಜು ಅವರು ಕಾಂಗ್ರೆಸ್ ಅಭ್ಯರ್ಥಿ ಉರುಫ್ ದೇವಯ್ಯರನ್ನು 207 ಮತಗಳಿಂದ ಸೋಲಿಸಿದ್ದಾರೆ.

ಜುಲೈ ಎರಡರಂದು ನಡೆದಿದ್ದ ಉಪ ಚುನಾವಣೆಯಲ್ಲಿ ಒಟ್ಟು 2200ಮಂದಿ ಮತದಾನ ಮಾಡಿದ್ದರು. ಇದರಲ್ಲಿ ಕಾಂಗ್ರೆಸ್ ಉರುಫ್ ದೇವಯ್ಯಗೆ 946, ಬಿಜೆಪಿ ಅಭ್ಯರ್ಥಿ ತಾಯಮ್ಮಗೆ 79 ಮತಗಳು ಸಿಕ್ಕಿದ್ದು, ರಾಜು 1153 ಪಡೆದಿದ್ದರು. ಇನ್ನು ಕಾಂಗ್ರೆಸ್ ಅಭ್ಯರ್ಥಿ ಪರ ಖುದ್ದು ಶಾಸಕ ಅಂಬರೀಶ್, ಸಚಿವ ಕೃಷ್ಣಪ್ಪ ಬಿರುಸಿನ ಪ್ರಚಾರ ನಡೆಸಿದ್ದರು. ಆದರೆ ಜೆಡಿಎಸ್ ಅಭ್ಯರ್ಥಿಯ ಗೆಲುವಿನಿಂದ ಕಾಂಗ್ರೆಸ್ ನಾಯಕರಿಗೆ ಭಾರೀ ಮುಖಭಂಗವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಮಾನದಲ್ಲೇ CPR ನೀಡಿ ಅಮೆರಿಕ ಯುವತಿಯ ಪ್ರಾಣ ಉಳಿಸಿದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್
ಪ್ರಧಾನಿ ಮಾಡಿದ್ದೆಲ್ಲಾ ತಪ್ಪು ಅನ್ನೋದು ತಪ್ಪು: ಕೈಗೆ ಮಾಜಿ ಕಾಂಗ್ರೆಸ್ಸಿಗನ ಸಲಹೆ