
ನವದೆಹಲಿ (ಡಿ.30): ನೋಟು ಅಮಾನ್ಯ ಕ್ರಮ ಘೋಷಿಸುವಾಗ ಪ್ರಧಾನಿ ಮೋದಿ ಹೇಳಿದ್ದ 50 ದಿನಗಳ ಗಡುವು ಇಂದು ಮುಗಿಯುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಪ್ರಧಾನಿ ಮೋದಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದು, ಕೂಡಲೇ ದೇಶದ ಜನತೆಗೆ ಉತ್ತರಿಸುವಂತೆ ಆಗ್ರಹಿಸಿದೆ.
50 ದಿನಗಳಲ್ಲಿ ಎಲ್ಲವೂ ಸಹಜ ಸ್ಥಿತಿಗೆ ಬರುವುದೆಂದು ಪ್ರಧಾನಿ ಮೋದಿ ಘೋಷಿಸಿದ್ದರು. ನಾಳೆಯಿಂದ ಜನರು ಎಂದಿನಂತೆ ಬ್ಯಾಂಕುಗಳಿಂದ ಹಣವನ್ನು ಡ್ರಾ ಮಾಡಬಹುದೆ? ಎಲ್ಲಾ ಏಟಿಎಮ್ ಯಂತ್ರಗಳು ನಾಳೆಯಿಂದ ಕೆಲಸ ಮಾಡಲಾರಂಭಿಸುತ್ತವೆಯೋ? ನೋಟು ಅಮಾನ್ಯ ಕ್ರಮದಿಂದ ಆಗಿರುವ ನಷ್ಟವನ್ನು ಸರ್ಕಾರ ಭರಿಸಲಿದೆಯೋ? ಎಂದು ಪಕ್ಷದ ಹಿರಿಯ ನಾಯಕ ರಣದೀಪ್ ಸಿಂಗ್ ಸುರ್ಜೆವಾಲ್ ಕೇಳಿದ್ದಾರೆ.
ನೋಟು ಅಮಾನ್ಯ ಕ್ರಮದಿಂದ ತೀರಾ ಸಂಕಷ್ಟಕ್ಕೊಳಗಾಗಿರುವ ರೈತರಿಗೆ ಕೃಷಿ ಉತ್ಪನ್ನಗಳ ಬೆಂಬಲ ಬೆಲೆಯನ್ನು ಶೇ.20 ರಷ್ಟು ಹೆಚ್ಚಿಸುವಿರಾ? ಸಣ್ಣ ವರ್ತಕರಿಗೆ ಶೇ.50 ರಷ್ಟು ತೆರಿಗೆ ವಿನಾಯಿತಿ ಸಿಗುವುದೇ? ಎಂದು ಸುರ್ಜೆವಾಲಾ ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.