ಸಾರ್ವಜನಿಕರ ಸಮ್ಮುಖದಲ್ಲಿ ಹೊಡೆದಾಡಿಕೊಂಡ ಪೊಲೀಸರು ಮತ್ತು ಕಾಂಗ್ರೆಸ್ ಕಾರ್ಯಕರ್ತರು!

Published : Nov 12, 2016, 11:30 AM ISTUpdated : Apr 11, 2018, 12:50 PM IST
ಸಾರ್ವಜನಿಕರ ಸಮ್ಮುಖದಲ್ಲಿ ಹೊಡೆದಾಡಿಕೊಂಡ ಪೊಲೀಸರು ಮತ್ತು ಕಾಂಗ್ರೆಸ್ ಕಾರ್ಯಕರ್ತರು!

ಸಾರಾಂಶ

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಶಿಂಗಟಾಲೂರು ಬಳಿ ಈ ಘಟನೆ ನಡೆದಿದ್ದು  ಇಂದು ಶಿಂಗಟಾಲೂರ ಏತನೀರಾವರಿ ಕಾಲುವೆ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆ ಅವರ ಸ್ವಾಗತಕ್ಕಾಗಿ ಗದಗ ಗ್ರಾಮೀಣ ಸಿಪಿಐ ಸೋಮಶೇಖರ ಜುಟ್ಟಲ್ ಹಾಗೂ ಶಿರಹಟ್ಟಿ ಕ್ಷೇತ್ರದ ಶಾಸಕ ರಾಮಕೃಷ್ಣ ದೊಡ್ಡಮನಿ ಅಳಿಯಾ, ಕಾಂಗ್ರೆಸ್​ ಕಾರ್ಯಕರ್ತರು ಹಾಗೂ ಭದ್ರತೆಗಾಗಿ ಪೊಲೀಸ್ ಅಧಿಕಾರಿಗಳು ಸೇರಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ  ಇವರ ನಡುವೆ ಮಾತಿನ ಚಕಮಕಿ ನಡೆದು ಒಬ್ಬರನ್ನೊಬ್ಬರು ತಳ್ಳಾಡಿಕೊಂಡಿದ್ದಾರೆ.

ಗದಗ(ನ.11): ಎಸ್.ಪಿ ಸಂತೋಷಬಾಬು ಸಮ್ಮುಖದಲ್ಲೇ ಕಾಂಗ್ರೆಸ್​ ಕಾರ್ಯಕರ್ತರು ಹಾಗೂ ಪೊಲೀಸ್​ ಅಧಿಕಾರಿಗಳ ನಡುವೆ ಜಟಾಪಟಿ ನಡೆದಿದೆ.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಶಿಂಗಟಾಲೂರು ಬಳಿ ಈ ಘಟನೆ ನಡೆದಿದ್ದು  ಇಂದು ಶಿಂಗಟಾಲೂರ ಏತನೀರಾವರಿ ಕಾಲುವೆ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆ ಅವರ ಸ್ವಾಗತಕ್ಕಾಗಿ ಗದಗ ಗ್ರಾಮೀಣ ಸಿಪಿಐ ಸೋಮಶೇಖರ ಜುಟ್ಟಲ್ ಹಾಗೂ ಶಿರಹಟ್ಟಿ ಕ್ಷೇತ್ರದ ಶಾಸಕ ರಾಮಕೃಷ್ಣ ದೊಡ್ಡಮನಿ ಅಳಿಯಾ, ಕಾಂಗ್ರೆಸ್​ ಕಾರ್ಯಕರ್ತರು ಹಾಗೂ ಭದ್ರತೆಗಾಗಿ ಪೊಲೀಸ್ ಅಧಿಕಾರಿಗಳು ಸೇರಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ  ಇವರ ನಡುವೆ ಮಾತಿನ ಚಕಮಕಿ ನಡೆದು ಒಬ್ಬರನ್ನೊಬ್ಬರು ತಳ್ಳಾಡಿಕೊಂಡಿದ್ದಾರೆ.

ಆದರೂ ಎಸ್​ಪಿ ಸಂತೋಷ್ ಬಾಬು ತಮ್ಮ ಸಿಬ್ಬಂದಿಗೆ ತಿಳಿಹೇಳುವುದನ್ನು ಬಿಟ್ಟು ಶಾಸಕ ರಾಮಕೃಷ್ಣ ದೊಡ್ಡಮನಿ  ಅವರ ಅಳಿಯನ ಮನವೊಲಿಸುವಲ್ಲಿ ಮುಂದಾದ ದೃಶ್ಯ ಕಂಡು ಬಂತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೂಡಿಗೆರೆ: ಮನೆ ಭೋಗ್ಯ ವಿಚಾರಕ್ಕೆ ಜಗಳ, ಮಹಿಳೆಯ ಜಡೆ ಹಿಡಿದು ಎಳೆದು ಬಿಸಾಡಿ ಹಲ್ಲೆ.!
Bengaluru: ಹಾರ್ಟ್‌ ಅಟ್ಯಾಕ್‌ ಆಗಿ ರಸ್ತೆಯಲ್ಲಿ ಬಿದ್ದ ವ್ಯಕ್ತಿ, ಪತ್ನಿಯ ಗೋಳಾಟ ಕೇಳಿಯೂ ನೆರವಿಗೆ ಬಾರದ ಜನ!