
ಬೆಂಗಳೂರು: ಸಂಪುಟ ವಿಸ್ತರಣೆ ಮುಗಿದು 2 ದಿನ ಆದರೂ ಖಾತೆಗಳ ಹಂಚಿಕೆಗೆ ಹಗ್ಗಜಗ್ಗಾಟ ಮುಂದು ವರೆದಿದೆ. ಉಭಯ ಪಕ್ಷಗಳ ನಡುವೆ ಖಾತೆಗಳ ಹಂಚಿಕೆ ಆಗಿದ್ದರೂ ಆಯಾ ಪಕ್ಷದ ಸಚಿವರು ಪ್ರಮುಖ ಖಾತೆಗಳೇ ಬೇಕು ಎಂಬ ಪಟ್ಟು ಹಿಡಿದಿರು ವುದರಿಂದ ಕಗ್ಗಂಟಾಗಿದೆ ಎಂದು ತಿಳಿದು ಬಂದಿದೆ.
ಶುಕ್ರವಾರ ಯಾವ ಸಚಿವರಿಗೆ ಯಾವ ಖಾತೆ ಎಂಬುದರ ಕಡತವನ್ನು ರಾಜಭವನಕ್ಕೆ ಕಳುಹಿಸಲಾಗುವುದು ಎಂಬ ಮಾಹಿತಿ ಸಿಎಂ ಕಚೇರಿ ಮೂಲಗಳು ನೀಡಿವೆಯಾದರೂ ಅದು ಖಚಿತವಾಗಿಲ ಜೆಡಿಎಸ್‌ನಿಂದ ಮುಖ್ಯಮಂತ್ರಿ ಸೇರಿದಂತೆ 11 ಮಂದಿಗೆ ಖಾತೆ ಹಂಚಿಕೆ ಮಾಡಬೇಕಾಗಿದ್ದರೂ ಹಲವು ಸಚಿವರು ತಮಗೆ ಇಂಥದ್ದೇ ಖಾತೆಗಳನ್ನು ನೀಡಿ ಎಂಬ ಬೇಡಿಕೆ ಮುಂದಿಡುತ್ತಿರುವುದರಿಂದ ಪಕ್ಷದ ವರಿಷ್ಠ ಎಚ್.ಡಿ. ದೇವೇ ಗೌಡರು ಖಾತೆಗಳ ಹಂಚಿಕೆ ಅಂತಿಮಗೊಳಿಸುವ ಕೆಲಸದಲ್ಲಿ ನಿರತರಾಗಿದ್ದಾರೆ ಎನ್ನಲಾಗಿದೆ.
ಈ ನಡುವೆ ಇಂಧನ ಖಾತೆಯನ್ನು ಬಿಟ್ಟುಕೊಡಲು ಜೆಡಿಎಸ್ ಒಪ್ಪಿ ಕೊಂಡಿದ್ದರೂ ಕಾಂಗ್ರೆಸ್ ಪಕ್ಷದಿಂದ ಇನ್ನೂ ಅಧಿಕೃತವಾಗಿ ಒಪ್ಪಿಗೆ ದೊರೆತಿಲ್ಲ ಎನ್ನಲಾಗುತ್ತಿದೆ. ಇಂಧನಕ್ಕೆ ಪ್ರತಿಯಾಗಿ ಕಂದಾಯ ಅಥವಾ ಬೆಂಗಳೂರು ನಗರಾಭಿವೃದ್ಧಿ ಖಾತೆಗಳ ಪೈಕಿ ಒಂದನ್ನು ನೀಡುವಂತೆ ಜೆಡಿಎಸ್ ಸಲಹೆ ನೀಡಿದೆ. ಈ ಬೇಡಿಕೆಗೆ ಕಾಂಗ್ರೆಸ್ ಒಪ್ಪುವಂತೆ ಕಾಣುತ್ತಿಲ್ಲ. ಶುಕ್ರವಾರ ಸ್ಪಷ್ಟ ಚಿತ್ರಣ ಹೊರಬೀಳುವ ನಿರೀಕ್ಷೆಯಿದೆ. ಇನ್ನು ಕಾಂಗ್ರೆ ಸ್ಸಿನಲ್ಲಿ ಸಚಿವ ಸ್ಥಾನ ಸಿಗದೇ ಇದ್ದುದರಿಂದ ಭುಗಿಲೆದ್ದಿರುವ ಅಸಮಾಧಾನ ಶಮನಗೊಳಿಸುವತ್ತಲೇ ಗಮನಹರಿಸಿರುವ ಆ ಪಕ್ಷದ ವರಿಷ್ಠರು ಖಾತೆಗಳ ಹಂಚಿಕೆ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳಲು ಸಮಯ ಸಿಕ್ಕಂತಿಲ್ಲ.
ಆದರೆ, ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥರಾಗಿರುವ ಉಪ ಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್ ಕಚೇರಿ ಮೂಲಗಳ ಪ್ರಕಾರ ಖಾತೆಗಳ ಹಂಚಿಕೆ ಸಮಸ್ಯೆಯೇ ಆಗಿಲ್ಲ. ಎಲ್ಲವೂ ನಿರ್ಧ ರಿತವಾಗಿದೆ. ಆದರೆ, ಕಾಂಗ್ರೆಸ್ಸಿನಲ್ಲಿಯೇ ಖಾತೆಗಳ ಹಂಚಿಕೆ ಪೂರ್ಣ ವಾಗುವುದಕ್ಕೆ ಕಾಯಲಾಗುತ್ತಿದೆ. ಆ ಪಕ್ಷದ ಸಚಿವರ ಪಟ್ಟಿ ಅಂತಿಮಗೊಂಡ ತಕ್ಷಣ ನಮ್ಮದನ್ನೂ ಸೇರಿಸಿ ರಾಜಭವನಕ್ಕೆ ಕಳುಹಿಸಲಾಗುವುದು ಎನ್ನುವುದು ಜೆಡಿಎಸ್ ಮೂಲಗಳ ವಾದ. ಇದೇ ವೇಳೆ ರಾಜ್ಯಪಾಲರಾದ ವಜುಭಾಯಿ ವಾಲಾ ಅವರು ುಜರಾತ್ ಪ್ರವಾಸಕ್ಕೆ ತೆರಳಿದ್ದಾರೆ ಎನ್ನಲಾಗಿದ್ದು, ಅವರು ಬರುವುದು ವಿಳಂಬವಾದಷ್ಟೂ ಖಾತೆಗಳ ಹಂಚಿಕೆ ವಿಳಂಬವಾಗ ಬಹುದು ಎಂಬ ಮಾತು ಕೇಳಿಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.