ಮೃತ ದೇಹದಿಂದ ಗೊಬ್ಬರ ತಯಾರಿಸಲು ಅನುಮತಿ!

Published : Jun 16, 2019, 09:31 AM IST
ಮೃತ ದೇಹದಿಂದ ಗೊಬ್ಬರ ತಯಾರಿಸಲು ಅನುಮತಿ!

ಸಾರಾಂಶ

ಮೃತ ದೇಹದಿಂದ ಗೊಬ್ಬರ ತಯಾರಿಸಲು ಅನುಮತಿ| ಮನುಷ್ಯ ದೇಹವವನ್ನು ಹೂಳುವ ಇಲ್ಲವೇ ಸುಡುವ ಬದಲು ಅದನ್ನು ನೈಸರ್ಗಿಕ ಗೊಬ್ಬರವನ್ನಾಗಿ ಪರಿವರ್ತಿಸಲು ಅವಕಾಶ 

ವಾಷಿಂಗ್ಟನ್[ಜೂ.16]: ಮನುಷ್ಯರು ನಿಧನ ಹೊಂದಿದಾಗ ವಿಧಿವತ್ತಾಗಿ ಅಂತ್ಯಸಂಸ್ಕಾರ ನೆರವೇರಿಸುವುದು ವಿಶ್ವದೆಲ್ಲೆಡೆ ಇರುವ ವಾಡಿಕೆ. ಆದರೆ, ವಾಷಿಂಗ್ಟನ್‌ನಲ್ಲಿ ಮನುಷ್ಯ ದೇಹವವನ್ನು ಹೂಳುವ ಇಲ್ಲವೇ ಸುಡುವ ಬದಲು ಅದನ್ನು ನೈಸರ್ಗಿಕ ಗೊಬ್ಬರವನ್ನಾಗಿ ಪರಿವರ್ತಿಸಲು ಅವಕಾಶ ಕಲ್ಪಿಸಲಾಗಿದೆ.

ಜಾನುವಾರುಗಳು ಸತ್ತಾಗ ರೈತರು ಅವುಗಳನ್ನು ಹೊಲದಲ್ಲಿ ಹೂಳಿ ಗೊಬ್ಬರವಾಗಿ ಪರಿವರ್ತಿಸುತ್ತಾರೆ. ಅದೇ ರೀತಿ, ಮನುಷ್ಯರ ದೇಹವನ್ನು ಕಟ್ಟಿಗೆ, ಹುಲ್ಲು, ಮಣ್ಣಿನ ಜೊತೆ ಬೆರೆಸಿ ಗೊಬ್ಬರವನ್ನಾಗಿ ಪರಿವರ್ತಿಸುವುದಕ್ಕೆ ಅವಕಾಶ ನೀಡುವ ಕಾನೂನಿಗೆ ವಾಷಿಂಗ್ಟನ್‌ ಗವರ್ನರ್‌ ಸಹಿ ಹಾಕಿದ್ದಾರೆ.

ಈ ಮೂಲಕ ವಾಷಿಂಗ್ಟನ್‌ ಇಂಥದ್ದೊಂದು ಕಾನೂನು ರೂಪಿಸಿದ ಅಮೆರಿಕದ ಮೊದಲ ರಾಜ್ಯ ಎನಿಸಿಕೊಂಡಿದೆ. ಇದರ ಲಾಭ ಪಡೆಯುವ ನಿಟ್ಟಿನಿಂದ ಕತ್ರೀನಾ ಸ್ಪೇಡ್‌ ಎಂಬಾತ ರಿಕಂಪೋಸ್‌ ಲೈಫ್‌ ಎಂಬ ಕಂಪನಿಯನ್ನು ಆರಂಭಿಸಿದ್ದಾನಂತೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲೋಕಾಯುಕ್ತ ಬಲೆಗೆ ಬಿದ್ದ ಶಿವಮೊಗ್ಗದ ಭ್ರಷ್ಟ ತಿಮಿಂಗಲ; ಕೈತುಂಬಾ ಚಿನ್ನ, ಕೋಟಿ ಕೋಟಿ ಅಕ್ರಮ ಆಸ್ತಿ ಪತ್ತೆ
ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡದ ಪ್ರತಿ ಸದಸ್ಯರಿಗೆ ಸಿಯೆರಾ ಕಾರು ಗಿಫ್ಟ್ ಕೊಟ್ಟ ಟಾಟಾ