ಟೆಂಡರ್‌ ಕರೆಯದೇ ಪೂಜೆ ಮಾಡಿದ ಆರೋಪ: ಸಚಿವ ಎಂ.ಬಿ.ಪಾಟೀಲ್‌ವಿರುದ್ಧ ಎಸಿಬಿಗೆ ದೂರು

Published : Jun 03, 2017, 11:00 AM ISTUpdated : Apr 11, 2018, 12:58 PM IST
ಟೆಂಡರ್‌ ಕರೆಯದೇ ಪೂಜೆ ಮಾಡಿದ ಆರೋಪ: ಸಚಿವ ಎಂ.ಬಿ.ಪಾಟೀಲ್‌ವಿರುದ್ಧ ಎಸಿಬಿಗೆ ದೂರು

ಸಾರಾಂಶ

ಪೂಜೆಗೆ ರೂ.20 ಲಕ್ಷ ಮೀಸಲಿರಿಸಿರುವ ಬಗ್ಗೆ ಸಚಿವರು ಒಪ್ಪಿಕೊಂಡಿದ್ದಾರೆ. ಇದಕ್ಕಾಗಿ ಯಾವುದೇ ಟೆಂಡರ್‌ ಕರೆದಿಲ್ಲ. ಟೆಂಡರ್‌ ಕರೆಯದೆ ಪೂಜಾ ಯೋಜನೆ ಕೈಗೊಂಡಿರುವುದು ಬರದ ನೆಪದಲ್ಲಿ ಭ್ರಷ್ಟಾಚಾರ ಮಾಡುವ ಉದ್ದೇಶದಿಂದ ಎಂಬುದು ಸ್ಪಷ್ಟವಾಗುತ್ತದೆ ಎಂದು ದೂರುದಾರರು ಆರೋಪಿಸಿದ್ದಾರೆ.

ಬೆಂಗಳೂರು: ಬೊಕ್ಕಸದಿಂದ ರೂ.20 ಲಕ್ಷ ವೆಚ್ಚ ಮಾಡಿ ಪರ್ಜನ್ಯ ಹೋಮ ಮಾಡಿಸುವ ಮೂಲಕ ಹಣದ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್‌ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಲ್ಲಿ (ಎಸಿಬಿ) ದೂರು ದಾಖಲಾಗಿದೆ.

ರಾಘವೇಂದ್ರ ಎಂಬುವವರು ಶುಕ್ರವಾರ ಎಸಿಬಿಗೆ ದೂರು ನೀಡಿದ್ದಾರೆ. ಎಂ.ಬಿ.ಪಾಟೀಲ್‌ ಅವರ ಸೂಚನೆಯಂತೆ ಕರ್ನಾಟಕ ನೀರಾವರಿ ನಿಗಮವು ಪರ್ಜನ್ಯ ಹೋಮ ಆಯೋಜಿಸಿದೆ. ಮಳೆಗಾಗಿ ಬೊಕ್ಕಸದಿಂದ ರೂ.20 ಲಕ್ಷ ವೆಚ್ಚ ಮಾಡಿ ಕೇರಳದ ಮಂತ್ರವಾದಿಗಳಿಂದ ಭಾಗಮಂಡಲ ಮತ್ತು ಮಹಾಬಲೇಶ್ವರದಲ್ಲಿ ಹೋಮ ಮಾಡಿಸಲು ಕ್ರಮ ಕೈಗೊಂಡಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಭ್ರಷ್ಟಾಚಾರ ಎಸಗಿದ್ದಾರೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪೂಜೆಗೆ ರೂ.20 ಲಕ್ಷ ಮೀಸಲಿರಿಸಿರುವ ಬಗ್ಗೆ ಸಚಿವರು ಒಪ್ಪಿಕೊಂಡಿದ್ದಾರೆ. ಇದಕ್ಕಾಗಿ ಯಾವುದೇ ಟೆಂಡರ್‌ ಕರೆದಿಲ್ಲ. ಟೆಂಡರ್‌ ಕರೆಯದೆ ಪೂಜಾ ಯೋಜನೆ ಕೈಗೊಂಡಿರುವುದು ಬರದ ನೆಪದಲ್ಲಿ ಭ್ರಷ್ಟಾಚಾರ ಮಾಡುವ ಉದ್ದೇಶದಿಂದ ಎಂಬುದು ಸ್ಪಷ್ಟವಾಗುತ್ತದೆ. ಮಾಧ್ಯಮಗಳಲ್ಲಿ ವರದಿ ಬಂದ ಬಳಿಕ ತಮ್ಮ ಮತ್ತು ಗೆಳೆಯರ ಹಣದಲ್ಲಿ ಪೂಜೆ ನಡೆಸಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ಇದರಿಂದ ಗೊಂದಲ ನಿರ್ಮಾಣವಾಗಿದೆ ಎಂದಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಾರಾಷ್ಟ್ರದಲ್ಲಿ ಬಿಜೆಪಿ ಗೆದ್ದರೂ ಸೂರ್ಯವಂಶಿ ಕುಟುಂಬಕ್ಕೆ ಅಘಾತ, ಆರಕ್ಕೆ 6 ಸದಸ್ಯರಿಗೆ ಸೋಲು
ಬಿಡದಿ ಟೌನ್ ಶಿಪ್ ಜಿದ್ದಿನಿಂದ ಅನುಷ್ಠಾನ ಮಾಡುತ್ತಿಲ್ಲ: ಶಾಸಕ ಎಚ್.ಸಿ.ಬಾಲಕೃಷ್ಣ