ಕೇರಳದಲ್ಲಿ ಕಮ್ಯೂನಿಸ್ಟರಿಂದ ತಾಲಿಬಾನ್ ಮಾದರಿ ಹಿಂಸೆ

Published : Oct 17, 2016, 04:57 AM ISTUpdated : Apr 11, 2018, 12:35 PM IST
ಕೇರಳದಲ್ಲಿ ಕಮ್ಯೂನಿಸ್ಟರಿಂದ ತಾಲಿಬಾನ್ ಮಾದರಿ ಹಿಂಸೆ

ಸಾರಾಂಶ

"ಕಮ್ಯುನಿಸ್ಟ್ ಕುಟುಂಬದ ಹಿನ್ನೆಲೆಯುಳ್ಳ ನನ್ನನ್ನು ಸಂಘ ಪರಿವಾರ ಸೇರಿದಾಗ ಮನಸ್ಸು ಬದಲಿಸುವಂತೆ ಕಮ್ಯುನಿಸ್ಟರು ಕೋರಿದರು. ಆದರೆ ಸಂಘ ಪರಿವಾರದ ಮಾನವೀಯ ಮುಖ, ಕಮ್ಯೂನಿಸ್ಟರ ಫ್ಯಾಸಿಸ್ಟ್ ಧೋರಣೆಯ ಅರಿವಿದ್ದ ನಾನು ನಿರ್ಧಾರ ಬದಲಿಸಲಿಲ್ಲ. ಕೊನೆಗೆ ನನ್ನ ಕಾಲುಗಳೆರಡನ್ನೂ ಕತ್ತರಿಸಿದರು. ಕಾಲು ಮತ್ತೆ ಜೋಡಿಸಬಾರದೆಂಬ ಕಾರಣಕ್ಕೆ ಕಾಲುಗಳನ್ನು ತೆಗೆದುಕೊಂಡು ಹೋಗಿ ಹೂತು ಹಾಕಿದರು."

ಬೆಂಗಳೂರು(ಅ. 17): ಕೇರಳ ಮತ್ತು ಪಶ್ಚಿಮ ಬಂಗಾಳ ನಮ್ಮ ದೇಶದ ರಾಜ್ಯಗಳೇ ಎಂದು ಸಂಶಯಪಡುವಷ್ಟು ಅಮಾನವೀಯವಾದ ತಾಲಿಬಾನ್ ಮಾದರಿಯ ಹಿಂಸಾಚಾರ ಅಲ್ಲಿ ತಾಂಡವವಾಗುತ್ತಿದೆ. ಮಕ್ಕಳ ಎದುರಲ್ಲೇ ಶಿಕ್ಷಕರ ರುಂಡ ಕತ್ತರಿಸುತ್ತಾರೆ. ಇಂತಹ ಕಮ್ಯೂನಿಸ್ಟ್ ಭಯೋತ್ಪಾದಕ ಕೃತ್ಯಗಳ ಬಗ್ಗೆ ಮಾಧ್ಯಮಗಳೇಕೆ ಮೌನವಾಗಿವೆ ಎಂದು ಸಂಸದೆ ಮೀನಾಕ್ಷಿ ಲೇಖಿ ಪ್ರಶ್ನಿಸಿದರು.

ಜಯನಗರದ ಆರ್.ವಿ.ಶಿಕ್ಷಕರ ಕಾಲೇಜು ಸಭಾಂಗಣದಲ್ಲಿ ಮಂಥನ ಬೆಂಗಳೂರು ಭಾನುವಾರ ಆಯೋಜಿಸಿದ್ದ "ಕೊನೆಗೊಳ್ಳಲಿ ಕಮ್ಯೂನಿಸ್ಟ್ ಹಿಂಸಾಚಾರ" ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು ಪಶ್ಚಿಮ ಬಂಗಾಳದಲ್ಲೂ ಇದೇ ಪರಿಸ್ಥಿತಿ ಇದೆ. 4 ಗಂಟೆ 50ನಿಮಿಷಕ್ಕೆ ಒಬ್ಬರ ಹತ್ಯೆಯಾಗುತ್ತಿದ್ದು ಕಮ್ಯೂನಿಸ್ಟರು ಅತ್ಯಂತ ಅಸಹನೀಯರು ಎಂದರು.

ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮಾತನಾಡಿ, ರಾಜಕೀಯ ಹಿಂಸಾಚಾರ, ಬೆದರಿಕೆ ರಾಜಕಾರಣ ಕೇರಳ ರಾಜಕೀಯದ ಎರಡು ಮುಖಗಳಾಗಿವೆ. ಜನರು ಬಹುತೇಕ ಈ ಕ್ರೂರ ಘಟನಾವಳಿಗಳನ್ನು ಮರೆಯುತ್ತಾರೆ. ಆದರೆ ಈ ಕುರಿತು ಎಚ್ಚರಿಸುವ ಜನರನ್ನು ಜಾಗೃತರನ್ನಾಗಿಸುವುದು ಅಗತ್ಯವಾಗಿದೆ ಎಂದರು.

ಪಾಕಿಸ್ತಾನದಲ್ಲಿರುವ ಸರ್ಕಾರಿ ಪ್ರಾಯೋಜಿತ ಭಯೋತ್ಪಾದಕರಂತೆ ಕೇರಳದ ಕಮ್ಯುನಿಸ್ಟ್ ಪ್ರಾಯೋಜಿತ ಹಿಂಸಾಚಾರವನ್ನು ಹೋಲಿಕೆ ಮಾಡಬಹುದಾಗಿದ್ದು, ರಾಜಕೀಯ ಹಿಂಸಾಚಾರದ ಹೆಜ್ಜೆ ಗುರುತಿನ ಹೊರತಾಗಿ ಎಡಪಕ್ಷವೇ ಇಲ್ಲ ಎನ್ನುವಷ್ಟು ಇಲ್ಲಿ ಹಿಂಸೆ ತಾಂಡವವಾಡುತ್ತಿದೆ ಎಂದರು.

ಹಿಂಸಾಚಾರಕ್ಕೆ ಎರಡು ಕಾಲುಗಳನ್ನು ಕಳೆದುಕೊಂಡು ಕೃತಕ ಕಾಲುಗಳ ಮೇಲೆ ನಿಂತು ಮಾತನಾಡಿದ ಸದಾನಂದನ್ ಮಾಸ್ಟರ್, ನಾನು ಫ್ಯಾಸಿಸಟ್ ಮನೋಭಾವವನ್ನು ತೊಲಗಿಸಲು ನಡೆಯುತ್ತಿರುವ ಹೋರಾಟದ ಸೈನಿಕನೇ ಹೊರತು ಹಿಂಸಾಚಾರದ ಬಲಿಪಶುವಲ್ಲ. ಕಮ್ಯೂನಿಸ್ಟ್ ಹಿನ್ನೆಲೆಯಿಂದ ಬಂದು ಆರೆಸ್ಸೆಸ್, ಬಿಜೆಪಿ ಸೇರ್ಪಡೆಗೊಂಡವರನ್ನು ಗುರಿ ಮಾಡಲಾಗುತ್ತಿದೆ ಎಂದರು.

"ಕಾಲು ಕತ್ತರಿಸಿ ಸೆಗಣಿ ಹಚ್ಚಿದರು"
ಕಮ್ಯುನಿಸ್ಟ್ ಕುಟುಂಬದ ಹಿನ್ನೆಲೆಯುಳ್ಳ ನನ್ನನ್ನು ಸಂಘ ಪರಿವಾರ ಸೇರಿದಾಗ ಮನಸ್ಸು ಬದಲಿಸುವಂತೆ ಕಮ್ಯುನಿಸ್ಟರು ಕೋರಿದರು. ಆದರೆ ಸಂಘ ಪರಿವಾರದ ಮಾನವೀಯ ಮುಖ, ಕಮ್ಯೂನಿಸ್ಟರ ಫ್ಯಾಸಿಸ್ಟ್ ಧೋರಣೆಯ ಅರಿವಿದ್ದ ನಾನು ನಿರ್ಧಾರ ಬದಲಿಸಲಿಲ್ಲ. ಕೊನೆಗೆ ನನ್ನ ಕಾಲುಗಳೆರಡನ್ನೂ ಕತ್ತರಿಸಿದರು. ಕಾಲು ಮತ್ತೆ ಜೋಡಿಸಬಾರದೆಂಬ ಕಾರಣಕ್ಕೆ ಕಾಲುಗಳನ್ನು ತೆಗೆದುಕೊಂಡು ಹೋಗಿ ಹೂತು ಹಾಕಿದರು. ಗಾಯ ವಾಸಿಯಾಗದಂತೆ ಸೆಗಣಿ ಹಚ್ಚಿದರು. ಶಸ್ತ್ರ ಚಿಕಿತ್ಸೆಗಿಂತ ಹಚ್ಚಿದ್ದ ಸೆಗಣಿ ಸ್ವಚ್ಛಗೊಳಿಸಲು ವೈದ್ಯರು ಬಹುಹೊತ್ತು ಶ್ರಮಿಸಬೇಕಾಯಿತು ಎಂದು ಸದಾನಂದನ್ ಮಾಸ್ಟರ್ ತಮ್ಮ ಕರಾಳ ಅನುಭವವನ್ನು ಬಿಚ್ಚಿಟ್ಟರು.

(ಕನ್ನಡಪ್ರಭ ವಾರ್ತೆ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

19ರ ನಂತರ ಬಂತು 40 ನಿಮಿಷದ ವಿಡಿಯೋ; ಟ್ರೆಂಡಿಂಗ್ ವೈರಲ್ ಕ್ಲಿಪ್‌ಗಾಗಿ ತೀವ್ರ ಹುಡುಕಾಟ!
ಭಾರತೀಯ ಸ್ಲೀಪರ್ ಕೋಚ್‌ ಬಸ್‌ನ ಐಷಾರಾಮಿ ಸವಲತ್ತಿಗೆ ಫಿದಾ ಆದ ವಿದೇಶಿಗ: ವೀಡಿಯೋ ವೈರಲ್