ಪೆಟ್ರೋಲ್’ಗಳಿಗಿಂತ ಕಾಸ್ಟ್ಲಿಯಾಗಿದೆ 'ಎಣ್ಣೆ’..!

First Published Jun 23, 2018, 10:39 PM IST
Highlights

ಪೆಟ್ರೋಲ್ ಬೆಲೆ ಏರಿಕೆಯಿಂದ ಹೈರಾಣಾಗಿದ್ದ ಮಂದಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಇದೀಗ ಅಡುಗೆ ಎಣ್ಣೆಯ ದರ ನೂರರ ಗಡಿ ದಾಟುವ ಮೂಲಕ ಪೆಟ್ರೋಲ್’ಗಿಂತ ಅಡುಗೆ ಎಣ್ಣೆ ದುಬಾರಿ ಎನಿಸಿದೆ.

ಬೆಂಗಳೂರು[ಜೂ.23]: ಪೆಟ್ರೋಲ್ ಬೆಲೆ ಏರಿಕೆಯಿಂದ ಹೈರಾಣಾಗಿದ್ದ ಮಂದಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಇದೀಗ ಅಡುಗೆ ಎಣ್ಣೆಯ ದರ ನೂರರ ಗಡಿ ದಾಟುವ ಮೂಲಕ ಪೆಟ್ರೋಲ್’ಗಿಂತ ಅಡುಗೆ ಎಣ್ಣೆ ದುಬಾರಿ ಎನಿಸಿದೆ.

ಅಡುಗೆ ಎಣ್ಣೆಯು ಪ್ರತಿ ಲೀಟರ್’ಗೆ 10 ರೂಪಾಯಿಯಷ್ಟು ಏರಿಕೆ ಕಂಡಿದ್ದು, ಕಡ್ಲೇಕಾಯಿ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಎಳ್ಳೆಣ್ಣೆಯ ದರಗಳಲ್ಲಿ ಸಿಕ್ಕಾಪಟ್ಟೆ ಏರಿಕೆಯಾಗಿದೆ. ಕೇಂದ್ರ ಸರ್ಕಾರದ ಆಮದು ಸುಂಕ ಹೆಚ್ಚಳ ಮಾಡಿರುವ ಕಾರಣ ಅಡುಗೆ ಎಣ್ಣೆ ದರದಲ್ಲಿ ಹೆಚ್ಚಳವಾಗಿದೆ.

ಆಮದು ಸುಂಕ 10% ಹೆಚ್ಚಳವಾಗಿರೋದ್ರಿಂದ ಎಣ್ಣೆ ದರ ಹೆಚ್ಚಳವಾಗಿದ್ದು, ಸನ್ ಪ್ಯೂರ್ ಲೀಟರ್’ಗೆ 86 ರೂಪಾಯಿಯಿಂದ 100 ರೂಪಾಯಿಗೆ ಏರಿಕೆಯಾಗಿದ್ದರೆ, ಗೋಲ್ಡ್ ವಿನ್ನರ್ ಲೀಟರ್’ಗೆ 90 ರೂಪಾಯಿ ಯಿಂದ 100 ರೂಪಾಯಿ, ಫಾರ್ಚೂನರ್ ಲೀಟರ್’ಗೆ 95 ರೂಪಾಯಿಯಿಂದ 105 ರೂಪಾಯಿ, ಕಡಲೇಕಾಯಿ ಎಣ್ಣೆ 82 ರೂಪಾಯಿ 90 ರೂಪಾಯಿಗೆ ಏರಿಕೆ ಎಳ್ಳೆಣ್ಣೆ 85 ರೂಪಾಯಿಯಿಂದ 100 ರೂಪಾಯಿಗೆ ಏರಿಕೆಯಾಗದೆ. ಸೋಮವಾರದ ಬಳಿಕ ಮತ್ತಷ್ಟು ದರ ಹೆಚ್ಚಳವಾಗೋ ಸಾಧ್ಯತೆ ಎನ್ನಲಾಗುತ್ತಿದೆ

click me!