ತ.ನಾಡಲ್ಲಿ ಕೋಲಾ ಬಂದ್!- ವಿದೇಶಿ ಕಂಪನಿಗಳ ವಿರುದ್ಧ ವರ್ತಕರ ಸಮರ

Published : Mar 01, 2017, 06:21 PM ISTUpdated : Apr 11, 2018, 01:00 PM IST
ತ.ನಾಡಲ್ಲಿ ಕೋಲಾ ಬಂದ್!- ವಿದೇಶಿ ಕಂಪನಿಗಳ ವಿರುದ್ಧ ವರ್ತಕರ ಸಮರ

ಸಾರಾಂಶ

ಏನು ಕಾರಣ? 1. ರಾಜ್ಯದಲ್ಲಿ ಬರ ಇದೆ. ಬಹುರಾಷ್ಟ್ರೀಯ ಕಂಪನಿಗಳು ಕೋಲಾಕ್ಕಾಗಿ ನೀರು ದುರ್ಬಳಕೆ ಮಾಡಿಕೊಳ್ಳುತ್ತಿವೆ. 2. ಪೆಪ್ಸಿ, ಕೋಕಕೋಲಾದಿಂದ ದೇಶೀ ಕಂಪನಿಗಳು ನಾಶ. ಅವುಗಳ ಮಾರಾಟದಿಂದ ವರ್ತಕರಿಗೆ ಲಾಭವೂ ಕಡಿಮೆ 3. ಕೋಲಾಗಳಿಂದ ಆರೋಗ್ಯಕ್ಕೆ ಹಾನಿ. ದೇಶೀ ಪೇಯಗಳು ಅಗ್ಗ. ಅಲ್ಲದೆ, ಅವುಗಳಿಂದ ಆರೋಗ್ಯಕ್ಕೆ ಹಾನಿಯಿಲ್ಲ

ಚೆನ್ನೈ(ಮಾ.01): ವಿಶ್ವಪ್ರಸಿದ್ಧ ತಂಪುಪಾನೀಯ ಬ್ರ್ಯಾಂಡ್‌ಗಳಾದ ಪೆಪ್ಸಿ ಹಾಗೂ ಕೋಕಾ ಕೋಲಾಕ್ಕೆ ತಮಿಳುನಾಡಿನಾದ್ಯಂತ ಬುಧವಾರದಿಂದಲೇ ಬಹಿಷ್ಕಾರ ಆರಂಭವಾಗಿದೆ. ಇದರಿಂದಾಗಿ ಆ ಎರಡೂ ಕಂಪನಿಗಳಿಗೆ 1400 ಕೋಟಿ ರು. ನಷ್ಟದ ಭೀತಿ ಶುರುವಾಗಿದೆ.

ತಮಿಳುನಾಡಿನಾದ್ಯಂತ ಇರುವ ಸಣ್ಣ ಅಂಗಡಿ ಹಾಗೂ ಚಿಲ್ಲರೆ ಮಳಿಗೆಗಳು ಪೆಪ್ಸಿ, ಕೋಕ್‌ಗೆ ಬುಧವಾರದಿಂದ ಬಹಿಷ್ಕಾರ ಹಾಕಿವೆ ಎಂದು 6000 ಸಣ್ಣ-ಮಧ್ಯಮ ಉದ್ದಿಮೆಗಳು ಹಾಗೂ 15 ಲಕ್ಷ ಸದಸ್ಯರನ್ನು ಹೊಂದಿರುವ ತಮಿಳುನಾಡು ವನಿಗರ್ ಸಂಘಂ ತಿಳಿಸಿದೆ. ಜತೆಗೆ 5 ಸಾವಿರದಷ್ಟಿರುವ ಸೂಪರ್ ಮಾರ್ಕೆಟ್ ಹಾಗೂ ರೆಸ್ಟೋರೆಂಟ್‌ಗಳು ಬಹಿಷ್ಕಾರಕ್ಕೆ ಸಮಯಾವಕಾಶ ಕೇಳಿವೆ ಎಂದು ಹೇಳಿದ್ದಾರೆ.

ತಮಿಳುನಾಡು ಭೀಕರ ಬರಗಾಲಕ್ಕೆ ತುತ್ತಾಗಿದೆ. ಈ ಕಂಪನಿಗಳು ಸ್ಥಳೀಯ ನೀರನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಜತೆಗೆ ಪೆಪ್ಸಿ ಹಾಗೂ ಕೋಕ್‌ನಿಂದಾಗಿ ದೇಶೀಯ ಕಂಪನಿಗಳು ನಾಶಗೊಳ್ಳುತ್ತಿವೆ. ಆ ಪಾನೀಯಗಳನ್ನು ಮಾರಿದರೆ ಹೆಚ್ಚು ಹಣವೂ ಸಿಗುವುದಿಲ್ಲ. ಭಾರತೀಯ ಪಾನೀಯಗಳು ಅಗ್ಗದ ಬೆಲೆಗೆ ಸಿಗುವುದಲ್ಲದೆ, ಅವು ಆರೋಗ್ಯಕಾರಿಯಾಗಿವೆ ಎಂಬ ಕಾರಣವನ್ನು ವ್ಯಾಪಾರಿಗಳು ನೀಡಿದ್ದಾರೆ.

ಈ ಹಿಂದೆ ಜಲ್ಲಿಕಟ್ಟು ಪ್ರತಿಭಟನೆ ವೇಳೆಯೇ ಇಂಥದ್ದೊಂದು ಬೇಡಿಕೆ ಕೇಳಿಬಂದಿತ್ತು. ಅದೀಗ ಜಾರಿಯಾಗಿದೆ. ವಿದೇಶಿ ತಂಪುಪಾನೀಯ ಮೇಲೆ ಬಹಿಷ್ಕಾರದ ಜೊತೆಗೆ ದೇಶೀಯವಾಗಿ ಅದರಲ್ಲೂ ಸ್ಥಳೀಯವಾಗಿ ಉತ್ಪಾದನೆಯಾಗುವ ತಂಪುಪಾನೀಯ ಬಳಸುವಂತೆ ವರ್ತಕರ ಸಂಘ ಮನವಿ ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗಡೀಪಾರು ಸಂಕಷ್ಟದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ: ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹಾಲಿಂಗೇಶ್ವರ್ ದೇಗುಲದ್ಲಿ ಪ್ರಾರ್ಥನೆ
ಅಧಿವೇಶನದ ಮೊದಲ ದಿನವೇ ಕೇಬಲ್‌ ಆಪರೇಟರ್‌ಗಳಿಗೆ ಸಿಹಿಸುದ್ದಿ ನೀಡಿದ ಇಂಧನ ಸಚಿವ ಕೆಜೆ ಜಾರ್ಜ್‌!