ಗಿನ್ನಿಸ್ ದಾಖಲೆಯತ್ತ ‘ಮುಖ್ಯಮಂತ್ರಿ’!

By Suvarna Web DeskFirst Published Dec 13, 2016, 4:02 PM IST
Highlights

1980 ರಿಂದ 2016ರವರೆಗೂಇಂಥಪ್ರಯೋಗವನ್ನುವಿಶ್ವದಯಾವುದೇ

ಬೆಂಗಳೂರು(ಡಿ.13): ಈತನಕ 600 ಪ್ರದರ್ಶನಗಳನ್ನು ಯಶಸ್ವಿಯಾಗಿ ಪೂರೈಸಿರುವ ರಾಜಾರಾಂ ನಿರ್ದೇಶನ ಹಾಗೂ ಮುಖ್ಯಮಂತ್ರಿ ಚಂದ್ರು ಪ್ರಧಾನ ಪಾತ್ರದ ‘ಮುಖ್ಯಮಂತ್ರಿ’ ನಾಟಕ ಗಿನ್ನಿಸ್ ದಾಖಲೆ ಮಾಡುವತ್ತ ಸಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ‘‘36 ವರ್ಷಗಳಿಂದ ಒಂದೇ ಪಾತ್ರವನ್ನು ನಿರ್ವಹಿಸುವುದು ತುಂಬಾ ಕಷ್ಟ. ಅಂತಹ ಸವಾಲನ್ನು ಕಲಾ ಗಂಗೋತ್ರಿ ಹವ್ಯಾಸಿ ರಂಗ ತಂಡದ ಮೂಲಕ ಯಶಸ್ವಿಯಾಗಿ ಎದುರಿಸಿ 600 ಪ್ರದರ್ಶನಗಳನ್ನು ಪೂರೈಸಿದ್ದೇವೆ. 1980 ರಿಂದ 2016ರವರೆಗೂ ಇಂಥ ಪ್ರಯೋಗವನ್ನು ವಿಶ್ವದ ಯಾವುದೇ ರಂಗ ತಂಡ ಮಾಡದ ಕಾರಣ ‘ಮುಖ್ಯಮಂತ್ರಿ’ ನಾಟಕ ಗಿನ್ನೀಸ್ ಪುಟಕ್ಕೆ ಸೇರ್ಪಡೆಯಾಗುತ್ತಿದೆ,’’ ಎಂದು ಹೇಳಿದರು.

‘‘27 ವರ್ಷದವನಿದ್ದಾಗ ಮುಖ್ಯಮಂತ್ರಿ ನಾಟಕದಲ್ಲಿ 60 ವರ್ಷದವನ ಪಾತ್ರ ಮಾಡಿದ್ದೆ. ಇಂದಿಗೂ ಆ ಪಾತ್ರ ನನ್ನ ವ್ಯಕ್ತಿತ್ವಕ್ಕೆ ಹೊಂದಿಕೆಯಾಗುತ್ತಿದೆ. ಅದೇ ಕಾರಣಕ್ಕೆ ಇಷ್ಟೊಂದು ಪ್ರದರ್ಶನಗಳನ್ನು ಏಕಾಂಕಿಯಾಗಿ ನೀಡಲು ಸಾಧ್ಯವಾಗಿದೆ. ಇಡೀ ನಾಟಕದಲ್ಲಿ 16,18 ಪಾತ್ರಗಳಿವೆ. ಈ ಪಾತ್ರಗಳನ್ನು ಮೊದಲು ನಿರ್ವಹಿಸಿದ್ದವ ಹಲವರು ಇಂದು ಇಲ್ಲ. ಅವರ ಬದಲಾಗಿ ಅವರ ಕುಟುಂಬದ ಸದಸ್ಯರು ನಾಟಕದಲ್ಲಿ ಪಾತ್ರ ನಿರ್ವಹಿಸುತ್ತಿದ್ದು, 2,3 ತಲೆಮಾರಿನೊಂದಿಗೆ ನಾಟಕ ತಂಡದ ನಂಟು ಬೆಳೆದುಕೊಂಡಿದೆ,’’ ಎಂದು ವಿವರಿಸಿದರು.

ಡಿ.16 ರಿಂದ ಕಲಾಗಂಗೋತ್ರಿ ‘ರಂಗೋತ್ಸವ

ರಂಗಕರ್ಮಿ ಪ್ರೊ.ಬಿ.ಚಂದ್ರಶೇಖರ್ ಅವರ ಜನ್ಮ ಶತಮಾನೋತ್ಸವ ಹಾಗೂ ಕಲಾ ಗಂಗೋತ್ರಿ ರಂಗ ತಂಡ 45 ವರ್ಷಗಳನ್ನು ಪೂರೈಸಿರುವ ಸ್ಮರಣಾರ್ಥ ಡಿ.16,17,18 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ರಂಗೋತ್ಸವ ಹಮ್ಮಿಕೊಳ್ಳಲಾಗಿದೆ. ನಾಟಕ, ಸುಗಮ ಸಂಗೀತ ಹಾಗೂ ಜನಪದ ಕಾರ್ಯಕ್ರಮಗಳು ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳು ಉತ್ಸವದ ಭಾಗವಾಗಿರುತ್ತವೆ ಎಂದು ಹೇಳಿದರು. ನಿರ್ದೇಶಕ ಡಾ.ಬಿ.ವಿ.ರಾಜಾರಾಂ ಉಪಸ್ಥಿತರಿದ್ದರು.

click me!