ಮೋದಿ ಭಾಷಣ ಕೇಳುವ ಅಗತ್ಯವಿಲ್ಲವೆಂದ ಸಿಎಂ ಸಿದ್ದರಾಮಯ್ಯ

By Suvarna Web DeskFirst Published Sep 11, 2017, 10:48 AM IST
Highlights

"ದೀನ್ ದಯಾಳ್ ಜನ್ಮಶತಾಬ್ಧಿ ಭಾಷಣವಾದ್ರೆ ಅದು ಹಿಂದುತ್ವದ ಭಾಷಣವಾಗಿಯೇ ಇರುತ್ತದೆ. ಹಾಗಾಗಿ ಅಂತಹ ಭಾಷಣ ಕೇಳುವ ಅಗತ್ಯವಿಲ್ಲ" ಎಂದು ಹೇಳಿದ್ದಾರೆ.

ಮೈಸೂರು(ಸೆ.11): ಸ್ವಾಮಿ ವಿವೇಕನಂದರು ಚಿಕಾಗೋ ಭಾಷಣಕ್ಕೆ 125ನೇ ವರ್ಷ ತುಂಬಿದ ಹಿನ್ನಲೆಯಲ್ಲಿ ಹಾಗೂ ದೀನ್ ದಯಾಳ್ ಉಪಾಧ್ಯಾಯ ಅವರ 100ನೇ ವರ್ಷಾಚರಣೆ ಹಿನ್ನಲೆಯಲ್ಲಿ, ಇಂದು ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡುತ್ತಿದ್ದು, ವಿವಿ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಕಡ್ಡಾಯವಾಗಿ ಕೇಳಬೇಕೆಂದು ಯುಜಿಸಿ ಆದೇಶ ಹೊರಡಿಸಿದೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, "ದೀನ್ ದಯಾಳ್ ಜನ್ಮಶತಾಬ್ಧಿ ಭಾಷಣವಾದ್ರೆ ಅದು ಹಿಂದುತ್ವದ ಭಾಷಣವಾಗಿಯೇ ಇರುತ್ತದೆ. ಹಾಗಾಗಿ ಅಂತಹ ಭಾಷಣ ಕೇಳುವ ಅಗತ್ಯವಿಲ್ಲ" ಎಂದು ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಂದಷ್ಟೇ ತಿಳಿದು ಬಂದಿದ್ದು, ನನಗೆ ಅಷ್ಟಾಗಿ ಸಂಪೂರ್ಣ ಮಾಹಿತಿಯಿಲ್ಲ. ಈ ಬಗ್ಗೆ ವಿವಿ ಜೊತೆ ಮಾತನಾಡುವೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಮೈಸೂರು ವಿವಿಯಿಂದ ಮೋದಿ ಭಾಷಣ ಕೇಳುವಂತೆ ಸುತ್ತೋಲೆ ಹೊರಡಿಸಲಾಗಿತ್ತು, ಪ್ರಧಾನಿ ಮೋದಿ ಭಾಷಣ ವೀಕ್ಷಣೆಗೆ ಪರದೆ ವ್ಯವಸ್ಥೆ ಅಲ್ಲದೇ ಒಂದು ಸಾವಿರಕ್ಕೂ ಹೆಚ್ಚು ಮಂದಿ ಕೂರಲು ಅವಕಾಶ ಕಲ್ಪಿಸಲಾಗಿದೆ.

click me!