ಒಂದೇ ವಿಮಾನದಲ್ಲಿ ಕಾಪುವಿಗೆ ತೆರಳಿದ HDK ಮತ್ತು HDD

By Web Desk  |  First Published Apr 28, 2019, 10:58 PM IST

ತಂದೆ ಮತ್ತು ಮಗ ಒಟ್ಟಾಗಿ ವಿಮಾನದಲ್ಲಿ ಉಡುಪಿಗೆ ತೆರಳಿದ್ದಾರೆ. ಪ್ರಕೃತಿ ಚಿಕಿತ್ಸೆ ಪಡೆದುಕೊಳ್ಳಲು ಕುಮಾರಸ್ವಾಮಿ ಕಾಪುವಿಗೆ ತೆರಳಿದ್ದಾರೆ.


ಬೆಂಗಳೂರು[ಏ.28]  ಸಿಎಂ ಕುಮಾರಸ್ವಾಮಿ ಮತ್ತು ತಂದೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಜತೆಯಾಗಿ ಉಡುಪಿಗೆ ಪ್ರಯಾಣ ಬೆಳೆಸಿದ್ದಾರೆ. ವಿಶೇಷ ವಿಮಾನದಲ್ಲಿ ಉಡುಪಿಗೆ ಪ್ರಯಾಣ ಬೆಳೆಸಿದ್ದು ಉಡುಪಿಯ ಕಾಪುವಿಗೆ ಪ್ರಕೃತಿ ಚಿಕಿತ್ಸೆ ಪಡೆದುಕೊಳ್ಳಲಿದ್ದಾರೆ.

ಲೋಕಸಭಾ ಚುನಾವಣೆ ನಂತರ ಕುಮಾರಸ್ವಾಮಿ ಕಾಪುವಿನಲ್ಲಿ ಪ್ರಾಕೃತಿಕ ಚಿಕಿತ್ಸೆ ಪಡೆಯುತ್ತಿದ್ದರು.  ಶ್ರೀಲಂಕಾದಲ್ಲಿ ಸಂಭವಿಸಿದ ಅವಘಡದಲ್ಲಿ ಜೆಡಿಎಸ್ ಕಾರ್ಯಕರ್ತರು ಸಾವನ್ನಪ್ಪಿದ ಕಾರಣಕ್ಕೆ ದಿಢೀರ್ ಚಿಕಿತ್ಸೆ ಮೊಟಕುಗೊಳಿಸಿ ಬೆಂಗಳೂರಿಗೆ ಸಿಎಂ ವಾಪಸ್ಸಾಗಿದ್ದರು.

Tap to resize

Latest Videos

ಇದೀಗ ಮತ್ತೆ ದೇವೇಗೌಡರ ಜೊತೆಗೆ ಸಿಎಂ ಚಿಕಿತ್ಸೆಗಾಗಿ ಕಾಪುವಿಗೆ ತೆರಳಿದ್ದಾರೆ. 

click me!