ತವರಿನಲ್ಲೇ ಸಿಎಂಗೆ ಮುಖಭಂಗ; ಸಿಎಂ ಆಹ್ವಾನವನ್ನು ತಿರಸ್ಕರಿಸಿದ ಜೆಡಿಎಸ್ ಮುಖಂಡ

Published : Apr 01, 2018, 06:06 PM ISTUpdated : Apr 14, 2018, 01:13 PM IST
ತವರಿನಲ್ಲೇ ಸಿಎಂಗೆ ಮುಖಭಂಗ; ಸಿಎಂ ಆಹ್ವಾನವನ್ನು ತಿರಸ್ಕರಿಸಿದ ಜೆಡಿಎಸ್ ಮುಖಂಡ

ಸಾರಾಂಶ

ಚಾಮುಂಡೇಶ್ವರಿ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯಗೆ  ತವರಿನಲ್ಲಿಯೇ ಮತ್ತೆ ಮುಖಭಂಗವಾಗಿದೆ.  ಜೆಡಿಎಸ್ ಮುಖಂಡನನ್ನು ಕಾಂಗ್ರೆಸ್’ಗೆ ಸೆಳೆಯುವ ಪ್ರಯತ್ನ ವಿಫಲವಾಗಿದೆ. 

ಮೈಸೂರು (ಏ. 01): ಚಾಮುಂಡೇಶ್ವರಿ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯಗೆ  ತವರಿನಲ್ಲಿಯೇ ಮತ್ತೆ ಮುಖಭಂಗವಾಗಿದೆ.  ಜೆಡಿಎಸ್ ಮುಖಂಡನನ್ನು ಕಾಂಗ್ರೆಸ್’ಗೆ ಸೆಳೆಯುವ ಪ್ರಯತ್ನ ವಿಫಲವಾಗಿದೆ. 

ಬೆಳವಾಡಿಯ ಗ್ರಾ.ಪಂ. ಸದಸ್ಯ ಮೋಹನ್ ಮನೆಗೆ ಭೇಟಿ ನೀಡಿ ಕಾಂಗ್ರೆಸ್’ಗೆ ಬರುವಂತೆ ಸಿಎಂ ಆಹ್ವಾನ ನೀಡಿದ್ದಾರೆ. ಸಿಎಂ ಆಹ್ವಾನವನ್ನು ಮೋಹನ್  ತಿರಸ್ಕರಿಸಿದ್ದಾರೆ.  ನಾನು ಮತ್ತು‌ ನನ್ನ ತಂದೆ ಕಾಂಗ್ರೆಸ್ ಪಕ್ಷಕ್ಕಾಗಿ‌ ದುಡಿದಿದ್ದೆವು.  ಸಿದ್ದರಾಮಯ್ಯನವರ ಉದಾಸೀನದಿಂದಾಗಿಯೇ ನಾವು ಜೆಡಿಎಸ್ ಪಕ್ಷ ಸೇರಿದ್ದೇವೆ.  ಯಾವ ಕಾರಣಕ್ಕೂ ಕಾಂಗ್ರೆಸ್’ಗೆ ಮರಳುವುದಿಲ್ಲ.  ಚಾಮುಂಡೇಶ್ವರಿಯಲ್ಲಿ ಶಾಸಕ‌ ಜಿ.ಟಿ. ದೇವೇಗೌಡ ರ ಪರ ಕೆಲಸ ಮಾಡುತ್ತೇವೆ.  ಎಚ್.ಡಿ. ಕುಮಾರಸ್ವಾಮಿ ಅವರನ್ನು ಸಿಎಂ ಮಡುವುದೇ ನನ್ನ ಗುರಿ ಎಂದು  ಗ್ರಾ.ಪಂ.‌ಸದಸ್ಯ ಮೋಹನ್ ಪ್ರತಿಕ್ರಿಯೆ ನೀಡಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಾಸನದ ತಿರುಪತಿಹಳ್ಳಿ ಬೆಟ್ಟದ ಮೇಲೆ 50ಕ್ಕೂ ಅಧಿಕ ಉಲ್ಕೆಗಳ ಸುರಿಮಳೆ!
India Latest News Live: ಪಹಲ್ಗಾಂ ಉಗ್ರ ದಾಳಿ: ಕೋರ್ಟ್‌ಗೆ 1597 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ