ಜಕ್ಕೂರು ವಿಮಾನ ನಿಲ್ದಾಣದಲ್ಲಿ ಮೋಡ ಬಿತ್ತನೆಗೆ ಚಾಲನೆ

By Suvarna Web DeskFirst Published Aug 21, 2017, 7:21 PM IST
Highlights

. ಆದರೆ ಉದ್ಘಾಟನೆ ತಡವಾದ ಹಿನ್ನೆಲೆಯಲ್ಲಿ ಹಾರಾಟಕ್ಕೆ ಮರಳಿ ಅನುಮತಿ ಪಡೆಯಬೇಕಿದ್ದರಿಂದ 45 ನಿಮಿಷ ತಡವಾಗಿ ವಿಮಾನ ಹಾರಾಟ ಆರಂಭಿಸಿದ್ದು, ವಿಮಾನದೊಳಗೆ ಸಚಿವರು ಹೈರಾಣಾಗಿ ಕುಳಿತಿದ್ದ ಘಟನೆ ನಡೆದಿದೆ.

ಬೆಂಗಳೂರು(ಆ.21): ಬರದಿಂದ ಕಂಗೆಟ್ಟಿದ್ದ ನಾಡಿನ ಬರ ಪೀಡಿತ ಪ್ರದೇಶಗಳಿಗೆ ಮೋಡ ಬಿತ್ತನೆ ಮಾಡುವ ಮೂಲಕ ರೈತರ ಮೊಗದಲ್ಲಿ ಸಂತಸ ಮೂಡಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಇಂದು ಜಕ್ಕೂರು ವಿಮಾನ ನಿಲ್ದಾಣದಲ್ಲಿ ಮೋಡ ಬಿತ್ತನರ ಕಾರ್ಯಕ್ಕೆ ಸಚಿವ ಹೆಚ್​.ಕೆ. ಪಾಟೀಲ್ ಚಾಲನೆ ನೀಡಿದ್ದು, ಇವರಿಗೆ  ಕೃಷ್ಣ ಬೈರೇಗೌಡ, ಎಂ ಆರ್ ಸೀತಾರಾಂ ಸಾಥ್ ನೀಡಿದರು. ಆದರೆ ಉದ್ಘಾಟನೆ ತಡವಾದ ಹಿನ್ನೆಲೆಯಲ್ಲಿ ಹಾರಾಟಕ್ಕೆ ಮರಳಿ ಅನುಮತಿ ಪಡೆಯಬೇಕಿದ್ದರಿಂದ 45 ನಿಮಿಷ ತಡವಾಗಿ ವಿಮಾನ ಹಾರಾಟ ಆರಂಭಿಸಿದ್ದು, ವಿಮಾನದೊಳಗೆ ಸಚಿವರು ಹೈರಾಣಾಗಿ ಕುಳಿತಿದ್ದ ಘಟನೆ ನಡೆದಿದೆ.

ಇನ್ನೂ ಮೋಡಬಿತ್ತನೆಗಾಗಿ ಯಾದಗಿರಿ ಜಿಲ್ಲೆ ಸುರಪೂರ, ಗದಗ ಹಾಗೂ ಬೆಂಗಳೂರಿನಲ್ಲಿ 3-ರೆಡಾರ್'ಗಳನ್ನು ಸ್ಥಾಪಿಸಲಾಗಿದ್ದು, ಹುಬ್ಬಳ್ಳಿ ವಿಮಾನ ನಿಲ್ದಾಣ ಮತ್ತು ಬೆಂಗಳೂರು ಎಚ್.ಎ.ಎಲ್ ವಿಮಾನ ನಿಲ್ದಾಣ ಬಳಸಿಕೊಂಡು 2 ವಿಶೇಷ ವಿಮಾನಗಳಿಂದ ಮೋಡ ಬಿತ್ತನೆ ಮಾಡಲಾಗುವುದು.

click me!