ದ್ವಿತೀಯ ಪಿಯುಸಿ ಅಕೌಂಟೆನ್ಸಿ ಪ್ರಶ್ನೆ ಪತ್ರಿಕೆ ಲೀಕ್

By Suvarna Web DeskFirst Published Mar 15, 2018, 2:57 PM IST
Highlights

ಸಿಬಿಎಸ್ಇ 12ನೇ ತರಗತಿ ಅಕೌಂಟೆನ್ಸಿ ವಿಷಯದ ಪ್ರಶ್ನೆ  ಪತ್ರಿಕೆ ಸೋರಿಕೆಯಾಗಿದೆ.  ಪ್ರಶ್ನೆ ಪತ್ರಿಕೆ  ವಾಟ್ಸಾಪ್ ಮೂಲಕ ಹರಿದಾಡುತ್ತಿದೆ.

ನವದೆಹಲಿ : ಸಿಬಿಎಸ್ಇ 12ನೇ ತರಗತಿ ಅಕೌಂಟೆನ್ಸಿ ವಿಷಯದ ಪ್ರಶ್ನೆ  ಪತ್ರಿಕೆ ಸೋರಿಕೆಯಾಗಿದೆ.  ಪ್ರಶ್ನೆ ಪತ್ರಿಕೆ  ವಾಟ್ಸಾಪ್ ಮೂಲಕ ಹರಿದಾಡುತ್ತಿದೆ.

ಲೀಕ್ ಆಗಿರುವ ಪ್ರಶ್ನೆ ಪತ್ರಿಕೆ ಸಿಬಿಎಸ್’ಸಿಯ  12ನೇ ತರಗತಿಯ ಪ್ರಶ್ನೆ ಪತ್ರಿಕೆ ಎರಡನೇ ಸೆಟ್’ಗೆ ಹೋಲಿಕೆಯಾಗುತ್ತಿದೆ. ಈ ಸಂಬಂಧ ಇದೀಗ ತನಿಖೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು  ತಜ್ಞರ ಸಮಿತಿ ಹೇಳಿದೆ.

ದಿಲ್ಲಿಯ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯ ಟ್ವೀಟ್ ಮಾಡಿ ಈ ಸಂಬಂಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಿರ್ಲಕ್ಷ್ಯದಿಂದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ  ಎಂದು ಹೇಳಿದ್ದಾರೆ.

click me!