
ಹಾಸನ (ಫೆ.16): ಕರ್ನಾಟದಲ್ಲಿ ವಿಶ್ವಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಚೆನ್ನಕೇಶವ ದೇಗುಲವೂ ಒಂದು. ದೇಶ ವಿದೇಶದಿಂದಲೂ ಪ್ರವಾಸಿಗರು ಬರ್ತಾರೆ. ಆದರೀಗ ಐತಿಹಾಸಿಕ ದೇಗುಲವನ್ನು ರಕ್ಷಣೆ ಮಾಡಬೇಕಿದ್ದ ಅಧಿಕಾರಿಗಳೇ ಅದಕ್ಕೆ ಧಕ್ಕೆ ತರುತ್ತಿದ್ದಾರೆ. ಯಾರಿಗೋ ಲಾಭ ತಂದುಕೊಡಲು ಭಕ್ತರ ಭಾವನೆಗಳಿಗೇ ಬೆಂಕಿ ಹಚ್ಚಿದ್ದಾರೆ. ಇಂಥದ್ದೊಂದು ಆತಂಕಕಾರಿಯ BIG EXCLUSIVE ರಿಪೋರ್ಟ್ ಇಲ್ಲಿದೆ.
ಬೇಲೂರಿನ ವಿಶ್ವಪ್ರಸಿದ್ಧ ಐತಿಹಾಸಿಕ ಚನ್ನಕೇಶವ ದೇಗುಲಕ್ಕೆ ನಿತ್ಯವೂ ಸಾವಿರಾರು ಪ್ರವಾಸಿಗರು ಭೇಟಿ ಕೊಟ್ಟು ಕಣ್ತುಂಬಿಕೊಂಡು ಹೋಗ್ತಾರೆ. ಆದರೆ ಈಗ ಪ್ರವಾಸಿಗರಿಗೆ ತಾತ್ಕಾಲಿಕ ನಿರ್ಬಂಧ ಹೇರಿದ್ದಾರೆ; ಕಾರಣ ತೆಲುಗು ಸಿನಿಮಾ ಚಿತ್ರೀಕರಣ!
ಚನ್ನಕೇಶವನ ಸನ್ನಿಧಿಯಲ್ಲಿ ಅಲ್ಲು ಅರ್ಜುನ್ ನಟನೆಯ ತೆಲುಗಿನ ಡಿಜೆ ಸಿನಿಮಾ ಶೂಟಿಂಗ್ ಭರದಿಂದ ನಡಿತಿದೆ. ಆದರೆ ಚಿತ್ರ ತಂಡ ದೇಗುಲದ ಚಿತ್ರಣವನ್ನೇ ಬದಲಿಸಿಬಿಟ್ಟಿದೆ. ಭಕ್ತರ ಭಾವನೆಗಳನ್ನೂ ಪರಿಗಣಿಸದೇ ವೈಷ್ಣವ ದೇಗುಲದಲ್ಲಿ ಶಿವನ ಮೂರ್ತಿ ಪ್ರತಿಷ್ಠಾಪಿಸಿ. ಅಸಮಾಧಾನದ ಕಿಚ್ಚು ಹಚ್ಚಿದ್ದಾರೆ.
ಇಷ್ಟು ಮಾತ್ರವಲ್ಲ ಚಿತ್ರೀಕರಣ ವೇಳೆ ದೇಗುಲದ ದ್ವಾರ ಬಂದ್ ಮಾಡಿ ಪ್ರವಾಸಿಗರಿಗೆ ನಿರ್ಬಂಧ ಹೇರಿದ್ದಾರೆ. ದೇಶ-ವಿದೇಶದಿಂದ ವಿಶ್ವ ಪ್ರಸಿದ್ದ ದೇಗುಲ ಕಣ್ತುಂಬಿ ಕೊಂಡು ಹೋಗಲು ಬಂದವರೆಲ್ಲ ನಿರಾಸೆಯಿಂದ ವಾಪಾಸಾಗುವಂತಾಗಿದೆ.
ಒಂದೂವರೆ ಲಕ್ಷ ಹಣ ಪಾವತಿಸಿ ಕೇಂದ್ರ ಪುರಾತತ್ವ ಇಲಾಖೆಯಿಂದ ಚಿತ್ರೀಕರಣಕ್ಕೆ ಅನುಮತಿ ಪಡ್ಕೊಂಡಿದ್ದಾರೆ ನಿಜ. ಹಾಗಂತ ಮನಸೋ ಇಚ್ಛೆ ಚಿತ್ರೀಕರಿಸೋದು ಸರಿಯೇ ಎಂಬ ಪ್ರಶ್ನೆ ಎದ್ದಿದೆ. ಈ ಹಿಂದೆ ಭಯೋತ್ಪಾದಕರ ಟಾರ್ಗೆಟ್ ಲಿಸ್ಟ್'ನಲ್ಲಿ ಚನ್ನಕೇಶವ ದೇಗುಲವೂ ಇತ್ತೆಂಬ ಗುಪ್ತಚರ ಮಾಹಿತಿ ನಂತರ ದೇಗುಲಕ್ಕೆ ಭದ್ರತೆ ಹೆಚ್ಚಿಸಲಾಗಿತ್ತು. ಈಗ ಚಿತ್ರತಂಡ ಡ್ರೋನ್ ಕ್ಯಾಮರಾದಲ್ಲಿ ದೇಗುಲದ ಇಂಚಿಂಚೂ ಸೆರೆಹಿಡಿಯುತ್ತಿದೆ. ಇದು ಭದ್ರತೆಗೆ ಧಕ್ಕೆಯಾಗಲ್ವಾ?
ಭಕ್ತರ ಭಾವನೆಗಳಿಗೂ ಬೆಲೆ ಕೊಡದೇ ಕೇವಲ ಅಲ್ಲು ಅರ್ಜುನ್ಗಾಗಿ ವೈಷ್ಣ ಪದ್ಧತಿಯನ್ನೇ ತಿದ್ದಿದ್ದು.. ಪ್ರವಾಸಿಗರಿಗೆ ನಿರ್ಬಂಧ ಹಾಕುವ ಅಧಿಕಾರಿಗಳ ಸರ್ವಾಧಿಕಾರಿ ಧೋರಣೆ ಎಷ್ಟು ಸರಿ. ಯಾರಿಗೋ ಲಾಭ ತಂದುಕೊಡಲು ವಿಶ್ವಪ್ರಸಿದ್ಧ ದೇಗುಲದ ಭದ್ರತೆಗೆ ಧಕ್ಕೆ ತರುವುದು ಸರೀನಾ? ಅಧಿಕಾರಿಗಳೇ ಉತ್ತರಿಸಿ..
ವರದಿ: ಹರೀಶ್ ಹಾಸನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.