
ಅಮ್ಮನ ಸಿಂಹಾಸನವನ್ನೇರಲು ಸಿದ್ಧವಾಗಿರುವ ಚಿನ್ನಮ್ಮ, ಅಮ್ಮನ ತದ್ರೂಪು ಅವತಾರದಲ್ಲೇ ಕಾಣಿಸಿಕೊಂಡಿದ್ದರು. ಜಯಲಲಿತಾರ ರೂಪ ಕಣ್ಮುಂದೆ ಬಂತೆಂದ್ರೆ ಹಸಿರು ಸೀರೆ, ಕಟ್ಟಿದ ಕೇಶ ರಾಶಿ, ಮಂದಹಾಸದ ಛಾಯೆ, ಸದಾ ಹಸನ್ಮುಖಿಯಾಗಿ ತನ್ನ ಜನರತ್ತ ಕೈ ಬೀಸುವ ರೀತಿ, ಅದರಲ್ಲೂ ಗೆಲುವು ಸೂಚನೆಯ ಚಿಹ್ನೆಯಾದ ಎರಡು ಬೆರಳುಗಳನ್ನು ಮೇಲಿತ್ತಿ ಅಮ್ಮ ಜನ್ರತ್ತ ಕೈ ಬೀಸುತ್ತಿದ್ದರು. ಇಂದು ಚಿನ್ನಮ್ಮ ಕೂಡ ಅಮ್ಮನ ಹಾದಿಯನ್ನೇ ತುಳಿದಿದ್ದಾರೆ. ಅಮ್ಮನ ರೀತಿಯಲ್ಲೇ ಹಸಿರು ಸೀರೆಯನ್ನುಟ್ಟ ಚಿನ್ನಮ್ಮ, ಅಮ್ಮನ ರೀತಿಯೇ ಕಟ್ಟಿದ ಕೇಶ, ಗೆಲವು ಸೂಚನೆಯ ಕೈ ಬೆರಳಿನ ಸಂಕೇತದೊಂದಿಗೆ ಜನರತ್ತ ಕೈ ಬೀಸಿದ್ದಾರೆ. ಜೊತೆಗೆ ಅಮ್ಮನ ರೀತಿಯಲ್ಲಿಯೇ ಕೈ ಮುಗಿಯುತ್ತ ಅಮ್ಮನ ಛಾಯೆಯಂತೆ ಭಾಸವಾಗ್ತಿದ್ದಾರೆ. ಅಷ್ಟೇ ಅಲ್ಲದೇ ಅಮ್ಮನ ಹಾದಿಯಲ್ಲೇ ನಾನು ಸಾಗುತ್ತ, ಅಮ್ಮನ ಕನಸನ್ನ ನನಸು ಮಾಡುತ್ತೇನೆಂದು ಶಶಿಕಲಾ ಹೇಳಿಕೆ ನೀಡಿದ್ದಾರೆ. ಅಮ್ಮನ ಯುಗಾಂತ್ಯದ ನಂತ್ರ ಅಮ್ಮನ ಪಟ್ಟಕ್ಕೆ ಚಿನ್ನಮ್ಮ ಲಗ್ಗೆ ಇಟ್ಟಿದ್ದಾರೆ.
ಜಯಲಲಿತಾ ನಿಧನರಾಗಿ 2 ತಿಂಗಳಿಗೆ ಸಿಎಂ ಪಟ್ಟಕ್ಕೇರಿದ ಶಶಿಕಲಾ
ಡಿಸೆಂಬರ್ 5 ರಂದು ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದ ಜಯಲಲಿತಾ
ಜಯಾ ಜತೆ ಕಳೆದ 30 ವರ್ಷಗಳಿಂದ ಜಯಲಲಿತಾ ಜತೆ ಗುರುತಿಸಿಕೊಂಡಿದ್ದ ಶಶಿಕಲಾ
- ಜನನ- ಜನವರಿ 29, 1956
- ಸ್ಥಳ- ತಮಿಳುನಾಡಿನ ತಿವರೂರ್ ನ ತಿರುತ್ತುರೈಪೋಂಡಿ ಬಳಿಕ ಮನ್ನಾರ್ ಗುಡಿಯಲ್ಲಿ ವಾಸ್ತವ್ಯ
- ತಂದೆ- ವಿವೇಕನಂದನ್
- ತಾಯಿ- ಕೃಷ್ಣವೇಣಿ
- ಶಿಕ್ಷಣ- ಪ್ರಾಥಮಿಕ ಶಿಕ್ಷಣದ ಬಳಿಕ ವಿದ್ಯಾಭ್ಯಾಸ ಮೊಟಕು
- ತಾತ್ಕಾಲಿಕ ಸರ್ಕಾರಿ ಸೇವೆಯಲ್ಲಿದ್ದ ನಟರಾಜನ್ ಎಂಬುವರ ಜೊತೆ ವಿವಾಹ
- 1976ರ ಎಮರ್ಜೆನ್ಸಿ ವೇಳೆ ಕೆಲಸ ಕಳೆದುಕೊಂಡ ಶಶಿಕಲಾ ಪತಿ ನಟರಾಜನ್
- 1980ರಲ್ಲಿ ನಟರಾಜನ್ ಕೆಲಸಕ್ಕೆ ಮರು ಸೇರ್ಪಡೆ
- ಕುಟುಂಬ ನಿರ್ವಹಣೆಗೆ ವಿಡಿಯೋ ಕ್ಯಾಮರಾ ರೆಂಟಿಂಗ್ ಹಾಗೂ ರೆಕಾರ್ಡಿಂಗ್ ಅಂಗಡಿ ತೆರೆದ ಶಶಿಕಲಾ
- ಶಶಿಕಲಾರಿಗೆ ಜಯಲಲಿತಾರನ್ನ ಪರಿಚಯಿಸುವಂತೆ ಕಡಲೂರು ಜಿಲ್ಲೆಯ ಡಿಸಿ ಚಂದ್ರಕಲಾಗೆ ಪತಿ ನಟರಾಜನ್ ಮನವಿ
- 1980ರಲ್ಲಿ ಎಡಿಎಂಕೆ ಪಕ್ಷದ ಕಾರ್ಯದರ್ಶಿಯಾಗಿದ್ದ ಜಯಲಲಿತಾ
- ಪಕ್ಷದ ಸಭೆಗಳ ವಿಡಿಯೋ ರೆಕಾರ್ಡಿಂಗ್ ಆರ್ಡರ್ ನೀಡುವಂತೆ ಜಯಲಲಿತಾಗೆ ಶಶಿಕಲಾ ಮನವಿ
- 1980ರ ಬಳಿಕ ಗಟ್ಟಿಯಾದ ಶಶಿಕಲಾ, ಜಯಲಲಿತಾ ಸ್ನೇಹ
- 1987ರಲ್ಲಿ ಎಂಜಿಆರ್ ಸಾವಿನ ಬಳಿಕ ಜಯಾ ಬೆಂಬಲಕ್ಕೆ ನಿಂತ ಶಶಿಕಲಾ
-1989ರಲ್ಲಿ ಜಯಲಲಿತಾರ ನಿವಾಸ ಪೋಯಸ್ ಗಾರ್ಡನ್ ನಲ್ಲಿ ವಾಸ್ತವ್ಯ, 40 ಕೆಲಸದಾಳುಗಳನ್ನ ಊರಿನಿಂದ ಕರೆತಂದ ಶಶಿಕಲಾ
- 1991ರಲ್ಲಿ ಜಯಲಲಿತಾ ಮೊದಲ ಬಾರಿ ಸಿಎಂ, ಹೆಚ್ಚಿದ ಶಶಿಕಲಾ ಬಲ
- 1995ರಲ್ಲಿ ಜಯಲಲಿತಾರ ದತ್ತು ಪುತ್ರ, ಶಶಿಕಲಾ ಸಂಬಂಧಿ ಸುಧಾಕರನ್ ಅದ್ಧೂರಿ ವಿವಾಹ ಸಮಾರಂಭ
- ಭಾರೀ ಚರ್ಚೆಗೆ ಗ್ರಾಸವಾಗಿದ್ದ ವಿವಾಹ ಸಮಾರಂಭ
- ಡಿಸೆಂಬರ್ 7, 1996ರಲ್ಲಿ ಕಲರ್ ಟಿ.ವಿ.ಸ್ಕ್ಯಾಮ್ ನಲ್ಲಿ ಜಯಲಲಿತಾ ಜೊತೆ ಶಶಿಕಲಾ ಬಂಧನ
- 1996ರಲ್ಲಿ ಜಯಲಲಿತಾ, ಶಶಿಕಲಾ ವಿರುದ್ಧ ತಂಸಿ ಭೂ ಅತಿಕ್ರಮಣ ಪ್ರಕರಣ ದಾಖಲು
- 2000ನೇ ಇಸವಿಯಲ್ಲಿ ತಂಸಿ ಪ್ರಕರಣ ಸಂಬಂಧ ಕೆಳ ನ್ಯಾಯಾಲಯದಿಂದ ಶಿಕ್ಷೆ ಪ್ರಕಟ
- ಜಯಲಲಿತಾ, ಶಶಿಕಲಾಗೆ 2 ವರ್ಷ ಸಜೆ, 50 ಸಾವಿರ ದಂಡ ವಿಧಿಸಿದ ಕೋರ್ಟ್
- 2001 ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸಲು ಜಯಲಲಿತಾಗೆ ಕೋರ್ಟ್
- 2011ರಲ್ಲಿ ಜಯಲಲಿತಾ ಹತ್ಯೆಗೆ ಶಶಿಕಲಾ ಪ್ಲಾನ್ ಕುರಿತು ಸ್ಫೋಟಕ ಮಾಹಿತಿ ಬಹಿರಂಗ
- 2011ರಲ್ಲಿ ಶಶಿಕಲಾ ಹಾಗೂ ಇತರೆ 12 ಮಂದಿಯನ್ನ ತಮ್ಮ ನಿವಾಸದಿಂದ ಹೊರಕಳಿಸಿದ ಜಯಲಲಿತಾ,
- ಎಐಎಡಿಎಂಕೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೂ ಶಶಿಕಲಾ ವಜಾ ವಜಾ
- 2014 ಸೆಪ್ಟೆಂಬರ್ 27ರಂದು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾ ಹಾಗೂ ಜಯಲಲಿತಾಗೆ ಶಿಕ್ಷೆ ಪ್ರಕಟ
- 4 ವರ್ಷ ಸಜೆ, ಶಶಿಕಲಾಗೆ 10 ಕೋಟಿ, ಜಯಲಲಿತಾಗೆ 100 ಕೋಟಿ ದಂಡ ಪಾವತಿಸಲು ವಿಶೇಷ ಕೋರ್ಟ್ ಆದೇಶ
- 2016, ಡಿಸೆಂಬರ್ 29- ಜಯಲಲಿತಾ ಸಾವಿನ ಬಳಿಕ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ
2017-ಫೆಬ್ರವರಿ 5- ತಮಿಳುನಾಡಿನ ಸಿಎಂ ಆಗಿ ಆಯ್ಕೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.