ದಲಾಯಿ ಲಾಮಾ ಅರುಣಾಚಲ ಭೇಟಿಗೆ ಚೀನಾ ವಿರೋಧ

Published : Apr 01, 2017, 08:27 AM ISTUpdated : Apr 11, 2018, 12:44 PM IST
ದಲಾಯಿ ಲಾಮಾ ಅರುಣಾಚಲ ಭೇಟಿಗೆ ಚೀನಾ ವಿರೋಧ

ಸಾರಾಂಶ

ಚೀನಾಗೆ ಸಂಬಂಧಪಟ್ಟ ಭೂಪ್ರದೇಶಕ್ಕೆ ದಲಾಯಿ ಲಾಮಾ ಭೇಟಿ ನೀಡುವುದನ್ನು ನಾವು ವಿರೋಧಿಸುತ್ತೇವೆ. ನಾವು ನಮ್ಮ ಅಭಿಪ್ರಾಯವನ್ನು ಭಾರತಕ್ಕೆ ತಿಳಿಸಿದ್ದೇವೆ ಎಂದು ಚೀನಾ ಹೇಳಿದೆ.

ಬೀಜಿಂಗ್ (ಏ.01): ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಲು ಟಿಬೆಟಿಯನ್ ಧರ್ಮಗುರು ದಲಾಯಿ ಲಾಮಾ ಅವರಿಗೆ ಅನುಮತಿ ನೀಡಿರುವುದನ್ನು ಆಕ್ಷೇಪಿಸಿರುವ ಚೀನಾವು, ಭಾರತವು ಪ್ರಮಾದವೆಸಗುತ್ತಿದೆಯೆಂದು ಹೇಳಿದೆ.

ಭಾರತದ  ಕ್ರಮವು ದ್ವಿಪಕ್ಷೀಯ ಸಂಬಂದಗಳ ಮೇಲೆ ಗಂಭೀರ ದುಷ್ಪರಿಣಾಮಗಳನ್ನು ಬೀರಲಿದೆ ಎಂದು ಚೀನಾ  ವಿದೇಶಾಂಗ ಇಲಾಖೆ ವಕ್ತಾರ ಲು ಕಾಂಗ್ ಹೇಳಿದ್ದಾರೆ.

ಚೀನಾಗೆ ಸಂಬಂಧಪಟ್ಟ ಭೂಪ್ರದೇಶಕ್ಕೆ ದಲಾಯಿ ಲಾಮಾ ಭೇಟಿ ನೀಡುವುದನ್ನು ನಾವು ವಿರೋಧಿಸುತ್ತೇವೆ. ನಾವು ನಮ್ಮ ಅಭಿಪ್ರಾಯವನ್ನು ಭಾರತಕ್ಕೆ ತಿಳಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ಭಾರತವು ಚೀನಾದ ಆರೊಗಳನ್ನು ಅಲ್ಲಗಳೆದಿದೆ ಹಾಗೂ ದಲಾಯಿ ಲಾಮಾ ಭೇಟಿಯು ಧಾರ್ಮಿಕ ಸ್ವರೂಪದ್ದು ಎಂದು ಹೇಳಿದೆ.

ಎ.4 ರಿಂದ ಒಂದು ವಾರಗಳ ಕಾಲ ದಲಾಯಿ ಲಾಮಾ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಈ ನಡುವೆ ಅವರು ಟಿಬೆಟಿಯನ್ ಬೌದ್ಧರ 6ನೇ ಧರ್ಮಗುರು  ಸ್ಯಾಂಗ್ಯಾಂಗ್ ಗ್ಯಾಸ್ಟೋ ಅವರ ಜನ್ಮಸ್ಥಳವಾದ ತವಾಂಗ್’ಗೂ ಭೇಟಿ ನೀಡಲಿದ್ದಾರೆ.

ಟಿಬೆಟಿಯನ್ ಬೌದ್ಧರ 14ನೇ ಧರ್ಮಗುರು (ದಲಾಯಿ ಲಾಮಾ) ವಾಗಿರುವ  ತೆಂಝಿನ್ ಗ್ಯಾಸ್ಟೋ ಅವರನ್ನು ಚೀನಾವು ಪ್ರತ್ಯೇಕವಾದಿಯಾಗಿ ಕಾಣುತ್ತದೆ ಹಾಗೂ ಅರುಣಾಚಲ ಪ್ರದೇಶ ತನಗೆ ಸೇರಿದ್ದು ಎಂದು ಕ್ಯಾತೆ ತೆಗೆಯುತ್ತಾ ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗಂಭೀರತೆ ಪಡೆದ ಕಲ್ಲಿದ್ದಲು ಕಳ್ಳತನ ಪ್ರಕರಣ, ಪವರ್ ಮೇಕ್ ಸಂಸ್ಥೆಯ ಇಬ್ಬರ ವಿರುದ್ಧ ಎಫ್‌ಐಆರ್‌ ದಾಖಲು
ಪಂದ್ಯದ ವೇಳೆ ಕಬಡ್ಡಿ ಪಟು ಹತ್ಯೆ ಪ್ರಕರಣ, ಆರೋಪಿಯನ್ನು ಎನ್‌ಕೌಂಟರ್ ಮಾಡಿ ಮುಗಿಸಿದ ಪೊಲೀಸ್