
ನವದೆಹಲಿ: ವಿವಾದಿತ ಡೋಕ್ಲಾಂ ಪ್ರದೇಶದಲ್ಲಿ ಚೀನಾ ತನ್ನ ಸೇನಾ ಜಮಾವಣೆ ಹೆಚ್ಚಿಸಿದ ಬೆನ್ನಲ್ಲೇ, ಭಾರತ ತನ್ನ ದೂತರನ್ನು ರಹಸ್ಯವಾಗಿ ಭೂತಾನ್‌ಗೆ ಕಳುಹಿಸಿ, ಆ ದೇಶದ ಜೊತೆ ಮಾತುಕತೆ ನಡೆಸಿದೆ.
ಮೂಲಗಳ ಪ್ರಕಾರ, ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಇತ್ತೀಚೆಗೆ ಭೂತಾನ್‌ಗೆ ತುರ್ತು ಮತ್ತು ಗೌಪ್ಯ ಭೇಟಿ ನೀಡಿ, ಅಲ್ಲಿನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.
ಗಡಿ ಪ್ರದೇಶಗಳಲ್ಲಿ ಚೀನಾದ ಸೇನೆ ಗಸ್ತು ಕಾರ್ಯಾಚರಿಸುತ್ತಿರುವ ಮತ್ತು ಡೋಕ್ಲಾಂನಲ್ಲಿ ಸೇನಾ ಜಮಾವಣೆ ಕುರಿತ ಮಾಹಿತಿ ದೊರಕಿರುವ ಹಿನ್ನೆಲೆಯಲ್ಲಿ ಈ ತಿಂಗಳ ಆರಂಭದಲ್ಲಿ ಪ್ರಮುಖ ಹಿರಿಯ ಅಧಿಕಾರಿಗಳು ಭೂತಾನ್ ನಾಯಕತ್ವದೊಂದಿಗೆ ಸಮಗ್ರ ಮಾತುಕತೆ ನಡೆಸಿದ್ದಾರೆ.
ಭೂತಾನ್‌ಗೆ ಸೇರಿದ ಲಾರಿಯಾಂಗ್, ಸರಿತಾಂಗ್, ಸಿಂಚುಲುಂಪಾ ಮತ್ತು ಪಾಂಗ್ಕಾ ಲಾ ಪ್ರದೇಶಗಳಲ್ಲಿ ಚೀನಾ ಸೇನೆ ಗಸ್ತು ತಿರುಗಿದ ಬಗ್ಗೆ ಮಾಹಿತಿಗಳಿವೆ. ಇನ್ನೊಂದೆಡೆಯಲ್ಲಿ ಡೋಕ್ಲಾಂನಲ್ಲಿ ಚೀನಾ ತನ್ನ ಸೇನೆ ಜಮಾಯಿಸುತ್ತಿದೆ ಎನ್ನಲಾಗಿದೆ. ಕಳೆದ ವರ್ಷ ಡೋಕ್ಲಾಂನಲ್ಲಿ ಈಗಾಗಲೇ ಚೀನಾದೊಂದಿಗೆ ಭಾರತೀಯ ಸೇನೆ 73 ದಿನಗಳ ಬಿಕ್ಕಟ್ಟು ಎದುರಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.