
ಬೆಂಗಳೂರು(ಡಿ.02): ಮನೆಯಲ್ಲಿ ಅಕ್ರಮವಾಗಿ ಕೋಟಿ ಕೋಟಿ ರೂಪಾಯಿ ಹೊಸ ನೋಟುಗಳ ಕಂತೆಯನ್ನ ಇಟ್ಟುಕೊಂಡಿದ್ದ ಸರ್ಕಾರಿ ಅದಿಕಾರಿಗಳಾದ ಚಿಕ್ಕರಾಯಪ್ಪ ಮತ್ತು ಜಯಚಂದ್ರ ಅವರ ಹಗರಣ ಬಗೆದಷ್ಟೂ ದೊಡ್ಡದಾಗುತ್ತಿದೆ. ದಿನಕ್ಕೆ 2 ಸಾವಿರ ಮಾತ್ರ ಪಡೆಯಬಹುದಾದ ಈ ಸಂದರ್ಭದಲ್ಲಿ 4.7 ಕೋಟಿಯಷ್ಟು 2000 ರು. ನೋಟು ಎಲ್ಲಿಂದ ಬಂತು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಚಿಕ್ಕರಾಯಪ್ಪ, ಜಯಚಂದ್ರ ಪರ ಗುತ್ತಿಗೆದಾರರು ಕಮಿಷನ್ ದಂಧೆ ನಡೆಸಿರುವುದು ಐಟಿ ಅಧಿಕಾರಿಗಳ ವಿಚಾರಣೆ ವೇಳೆ ಸ್ಫೋಟಕ ಸಂಗತಿ ಬಹಿರಂಗವಾಗಿದೆ. ಈ ಇಬ್ಬರೂ ಅಧಿಕಾರಿಗಳ ಪರ ಗುತ್ತಿಗೆದಾರರಾದ ಚಂದ್ರಕಾಂತ್, ಚಕ್ರವರ್ತಿ, ನಜೀರ್ ಎಂಬುವರು ಮಧ್ಯಸ್ಥಿಕೆ ವಹಿಸ ಹಣ ವರ್ಗಾವಣೆ ಮಾಡಿದ್ದರು. ತಮಿಳುನಾಡಿನ 4 ಬ್ಯಾಂಕ್ಗಳಿಂದ ಕಪ್ಪು ಹಣ ಬದಲಾವಣೆಯಾಗಿದೆ. 16 ಕೋಟಿ ಕಪ್ಪು ಹಣಕ್ಕೆ ಗುತ್ತಿಗೆದಾರರು ಹೊಸ ನೋಟು ಪಡೆದಿದ್ದರು. ತಮಿಳುನಾಡಿನ ಈರೋಡ್, ಸೇಲಂ, ಮಧುರೈನ 4 ಬ್ಯಾಂಕ್`ಗಳಿಂದ ಹಣ ಬದಲಾವಣೆ ಮಾಡಲಾಗಿದೆ. ಬ್ಯಾಂಕ್ ಅಧಿಕಾರಿಗಳಿಗೆ ಕಮಿಷನ್ ಹಣ ನೀಡಿ ಹಣ ಬದಲಾವಣೆಯಾಗಿದೆ.
ಜಯಚಂದ್ರ, ಚಿಕ್ಕರಾಯಪ್ಪ ಪರವಾಗಿ ಈ ಗುತ್ತಿಗೆದಾರರು ಬ್ಲಾಕ್ & ವೈಟ್ ವ್ಯವಹಾರ ನಡೆಸಿದ್ದರು ಎಂಬುದು ಐಟಿ ಅಧಿಕಾರಿಗಳ ವಿಚಾರಣೆ ವೇಳೆ ಹೊರಬಿದ್ದಿದೆ. ಈ ಬಗ್ಗೆ ಬ್ಯಾಂಕ್ ವಹಿವಾಟಿನ ವಿವರ ನೀಡುವಂತೆ ಸಿಬಿಐ, ಜಾರಿ ನಿರ್ದೇಶನಾಲಯದಿಂದ ಬ್ಯಾಂಕ್`ಗಳಿಗೆ ನೋಟಿಸ್ ನೀಡಲಾಗಿದೆ.
ಈ ಮಧ್ಯೆ, ದೇಶಾದ್ಯಂತ ಕರ್ತವ್ಯಲೋಪ ಎಸಗಿದ 6 ಬ್ಯಾಂಕಿನ 27 ಬ್ಯಾಂಕ್ ಅಧಿಕಾರಿಗಳನ್ನ ಅಮಾನತು ಮಾಡಿ, ಕೇಂದ್ರ ಹಣಕಾಸು ಸಚಿವಾಲಯದಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.