
ಚಿಕ್ಕಮಗಳೂರು(ಜೂ.17): ಮನೆಯ ಮುಂದೆ ಒಂದು ಬೈಕ್ ಅಥವಾ ಕಾರು ಇದ್ದರೆ ಸಾಕು ಅವರನ್ನು ನಾವು ಶ್ರೀಮಂತರು ಎಂದು ಹೇಳುತ್ತೇವೆ, ಆದರೆ ಇಲ್ಲಿ ಮನೆಗೊಂದು ಲಾರೀ ಇದ್ದರೂ ಕೂಡಾ ಅಕ್ಷರಹ ಬೀದಿಗೆ ಬಿದ್ದಿದ್ದಾರೆ. ತಿನ್ನಲು ಒಂದು ಹೊತ್ತಿನ ಅನ್ನಕೂಡಾ ಇಲ್ಲದೇ ಸಕಂಟಪಡುತ್ತಿದ್ದಾರೆ.
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಳೆದ 2 ವರ್ಷಗಳಿಂದ ಲಾರಿ ಡ್ರೈವರ್'ಗಳ ಸಮಸ್ಯೆ ಹೇಳತೀರದಾಗಿದೆ. ಲಾರಿಯನ್ನೆ ನಂಬಿ ಜೀವನ ಸಾಗುಸುತ್ತಿರುವ ಕುಟುಂಬಗಳು ಇಂದು ಬೀದಿಗೆ ಬಂದಿವೆ. ಲಾರಿಯನ್ನು ಬಾಡಿಗೆಗೆ ಓಡಿಸಿ ಬದಕು ಸಾಗಿಸುತ್ತಿದ್ದ ಕುಟುಂಬಗಳು ಬಾಡಿಗೆ ಸಿಗದೇ ತುತ್ತು ಅನ್ನಕ್ಕೆ ಕೂಲಿಯೂ ಸಿಗದೆ ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 2 ಸಾವಿರಕ್ಕೂ ಅಧಿಕ ಲಾರಿಗಳಿವೆ. ಆದರೆ, ಯಾರಿಗೂ ಸರಿಯಾದ ಬಾಡಿಗೆ ಸಿಕ್ತಿಲ್ಲ. ಸಿಗೋ ಬಾಡಿಗೆಯಲ್ಲಿ ಲಾರಿ, ಸಂಸಾರ, ಲೋನ್, ಟ್ಯಾಕ್ಸ್ ಯಾವುದನ್ನು ನಿರ್ವಹಿಸಲು ಸಾಧ್ಯವಾಗದೆ ಸಂಕಷ್ಟದಲ್ಲಿದ್ದಾರೆ.
\ಲಾರಿ ಡ್ರೈವರ್ ಅಥವಾ ಅವರ ಸಂಬಂಧಿಗಳು ಸತ್ತರೆ ಅಂತ್ಯ ಸಂಸ್ಕಾರಕ್ಕೂ ಹಣವಿಲ್ಲದೆ ಲಾರಿ ಚಾಲಕರ ಸಂಘ ಚಂದಾ ಎತ್ತಿ ಅಂತ್ಯ ಸಂಸ್ಕಾರ ಮಾಡುತ್ತಿದ್ದಾರೆ. ಮಾಲೀಕರು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲೂ ಆಗದ ಸ್ಥಿತಿಯಲ್ಲಿದ್ದು, ಕೆಲವರು ಸಾಲದ ಸಮಸ್ಯಯಿಂದ ಆತ್ಮಹತ್ಯೆಗೆ ಸಹ ಮುಂದಾಗಿದ್ದಾರೆ.
ಇನ್ನು ಚಿಕ್ಕಮಗಳೂರಿನ ಲಾರಿಗಳಿಗೆ ರೈತರೇ ಅನ್ನದಾತರು. ಆಮದು-ರಫ್ತು ಬಿಟ್ಟರೆ ಇತರೇ ಬಾಡಿಗೆ ಸಿಗೋದು ತೀರಾ ಕಡಿಮೆ. ೧೦-೨೦ ಲಾರಿ ಇಟ್ಕೊಂಡಿರೋರು, ರಾಜಕಾರಣಿಗಳ ಬೆಂಬಲಿಗರು ಮಧ್ಯವರ್ತಿಯಾಗಿರುವುದರಿಂದ ಒಂದು-ಎರಡು ಲಾರಿ ಇಟ್ಟುಕೊಂಡಿರುವುದು ಬದುಕಿದ್ದು ಸತ್ತಂತಾಗಿದೆ.
ಇನ್ನು ಯಾವುದೇ ಸರ್ಕಾರಿ ಕೆಲಸಗಳಿಗೆ ಲಾರಿಗಳನ್ನ ಸರದಿಯಂತೆ ಕಳಿಸಬೇಕು, ಆದರೆ ಜಿಲ್ಲಾಡಳಿತ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ. ಎಂಬ ಧೊರಣೆ ಹೊಂದಿದ್ದು, ತಿಂಗಳಿಗೆ ಒಂದು-ಎರಡು ಬಾಡಿಗೆ ಸಿಕ್ತಿಗುತ್ತಿರುವ ಲಾರಿಗಳ ಚಾಲಕರು, ಮಾಲೀಕರು ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.