ಅಮ್ಮನ ಅಘೋಷಿತ ಆಜ್ಞೆಗೆ ಆರಂಭದಲ್ಲೇ ವಿಘ್ನ !

By Suvarna Web DeskFirst Published Feb 20, 2017, 1:51 PM IST
Highlights

ಜಯಾ ಅವರು ಅನಾರೋಗ್ಯಕ್ಕೀಡಾಗಿ ಕಳೆದ ವರ್ಷ ಸೆಪ್ಟೆಂಬರ್'ನಿಂದಡಿಸೆಂಬರ್ 5 ರಂದು ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದರು

ಚೆನ್ನೈ(ಫೆ.20): ತಮಿಳುನಾಡಿನ ನೂತನ ಮುಖ್ಯಮಂತ್ರಿ ಇ.ಪಳಿನಿಸ್ವಾಮಿ ಅಮ್ಮನ ಆಜ್ಞೆಯನ್ನು ಆರಂಭದಲ್ಲೇ ಮುರಿದಿದ್ದಾರೆ. ಪಳಿನಿಸ್ವಾಮಿ ಮುರಿದಿರುವುದು ಮುಖ್ಯಮಂತ್ರಿ ಹುದ್ದೆ ದಯಪಾಲಿಸಿದ ಚಿನ್ನಮ್ಮನ ಆಜ್ಞೆಯಲ್ಲ ಬದಲಿಗೆ ದಶಕಗಳ ಕಾಲ ತಮಿಳುನಾಡನ್ನು ಆಳಿದ ದಿ. ಜಯಲಲಿತಾ ಅವರ ಅಘೋಷಿತ ಅಪ್ಪಣೆಯನ್ನು.

ಹಿಂದೆ ಅಕ್ರಮ ಆಸ್ತಿ ಪ್ರಕರಣದ ಸಲುವಾಗಿ ಜಯಾಲಲಿತಾ ಅವರು ಅಧಿಕಾರ ಕಳೆದುಕೊಂಡು ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಓ. ಪನ್ನೀರ್ ಸೆಲ್ವಂ ಅವರು ಜಯ ಅವರಿದ್ದ ಮುಖ್ಯಮಂತ್ರಿ ಕಚೇರಿಯನ್ನು ಒಮ್ಮೆಯು ಬಳಸಿರಲಿಲ್ಲ. ತಾವು ಸಚಿವರಾಗಿದ್ದ ಕಚೇರಿಯಲ್ಲಿಯೇ ಸಿಎಂ ಆಡಳಿತವನ್ನು ನಿರ್ವಹಿಸಿ ಸ್ವಾಮಿ ನಿಷ್ಠರಾಗಿದ್ದರು

ಆದರೆ ಪಳಿನಿಸ್ವಾಮಿ ಮುಖ್ಯಮಂತ್ರಿಯಾದ ಕೆಲವೇ ದಿನಗಳಲ್ಲಿ ಜಯಲಲಿತಾ ಅವರು ಬಳಸುತ್ತಿದ್ದ ಕಚೇರಿಯನ್ನು ಅಧಿಕೃತ ಕಚೇರಿಯನ್ನಾಗಿಸಿಕೊಂಡು ಅವರು ಕುಳಿತಿದ್ದ ಕುರ್ಚಿಯಿಂದಲೇ ಆಡಳಿತ ಶುರು ಮಾಡಿದ್ದಾರೆ. ಜಯಾ ಅವರು ಅನಾರೋಗ್ಯಕ್ಕೀಡಾಗಿ ಕಳೆದ ವರ್ಷ ಸೆಪ್ಟೆಂಬರ್'ನಿಂದ  ಡಿಸೆಂಬರ್ 5 ರಂದು ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದರು. ನಂತರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ತಮ್ಮ ಸಚಿವ ಸ್ಥಾನದ ಕಚೇರಿಯಿಂದಲೇ ಆಡಳಿತ ನಡೆಸುತ್ತಿದ್ದರು.

ತಮಿಳುನಾಡಿನಲ್ಲಿ ಈಗ ಹಲವು ಅನಿರಿಕ್ಷಿತ ರಾಜಕೀಯ ಬೆಳವಣಿಗೆಗಳು ನಡೆದು ಚಿನ್ನಮ್ಮ ಜೈಲಿಗೋಗಿ, ಪನ್ನೀರ್ ಅಧಿಕಾರ ಕಳೆದುಕೊಂಡು ಪಳಿನಿಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಅಲ್ಲದೆ ತಾವು ಜಯಲಲಿಯಾ ಅವರು ಆರಂಭಿಸಿದ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದ್ದಾರೆ.

click me!