ವೋಟಿಗಾಗಿ ನೋಟು ಹಿನ್ನೆಲೆಯಲ್ಲಿ ಚೆನ್ನೈನ ಆರ್.ಕೆ.ನಗರ ಕ್ಷೇತ್ರದ ಉಪಚುನಾವಣೆ ರದ್ದು

Published : Apr 10, 2017, 04:29 AM ISTUpdated : Apr 11, 2018, 01:09 PM IST
ವೋಟಿಗಾಗಿ ನೋಟು ಹಿನ್ನೆಲೆಯಲ್ಲಿ ಚೆನ್ನೈನ ಆರ್.ಕೆ.ನಗರ ಕ್ಷೇತ್ರದ ಉಪಚುನಾವಣೆ ರದ್ದು

ಸಾರಾಂಶ

ಮಾಜಿ ಸಿಎಂ ಜಯಲಲಿತಾ ಸಾವಿನಿಂದ ತೆರವಾಗಿದ್ದ ಚೆನ್ನೈನ ಆರ್.ಕೆ.ನಗರ ಕ್ಷೇತ್ರದಲ್ಲಿ  ಏಪ್ರಿಲ್​ 12ರದ್ದು ಉಪಚುನಾವಣೆ ನಡೆಸಲು ಚುನಾವಣೆ ಪ್ಲಾನ್​ ಮಾಡಿಕೊಂಡಿತ್ತು. ಆದರೆ ಈ ಕ್ಷೇತ್ರವನ್ನು ಹೇಗಾದರೂ ಮಾಡಿ ಗೆಲ್ಲಲೇಬೇಕು ಎಂದು AIADMK ಶಶಿಕಲಾ ಬಣ ಹಣದ ಹೊಳೆಹರಿಸಿತ್ತು. ಹಣ ಹಂಚಿರುವುದು ಸಾಭೀತಾಗಿರುವ ಹಿನ್ನೆಲೆ ಈಗ ಚುನಾವಣೆಯೇ ರದ್ದಾಗಿದೆ.

ಚೆನ್ನೈ(ಎ.10): ಮಾಜಿ ಸಿಎಂ ಜಯಲಲಿತಾ ಸಾವಿನಿಂದ ತೆರವಾಗಿದ್ದ ಚೆನ್ನೈನ ಆರ್.ಕೆ.ನಗರ ಕ್ಷೇತ್ರದಲ್ಲಿ  ಏಪ್ರಿಲ್​ 12ರದ್ದು ಉಪಚುನಾವಣೆ ನಡೆಸಲು ಚುನಾವಣೆ ಪ್ಲಾನ್​ ಮಾಡಿಕೊಂಡಿತ್ತು. ಆದರೆ ಈ ಕ್ಷೇತ್ರವನ್ನು ಹೇಗಾದರೂ ಮಾಡಿ ಗೆಲ್ಲಲೇಬೇಕು ಎಂದು AIADMK ಶಶಿಕಲಾ ಬಣ ಹಣದ ಹೊಳೆಹರಿಸಿತ್ತು. ಹಣ ಹಂಚಿರುವುದು ಸಾಭೀತಾಗಿರುವ ಹಿನ್ನೆಲೆ ಈಗ ಚುನಾವಣೆಯೇ ರದ್ದಾಗಿದೆ.

ಚೆನ್ನೈನ ಆರ್​.ಕೆ.ನಗರ ಕ್ಷೇತ್ರದ ಉಪಚುನಾವಣೆ ರದ್ದು : ಏ.12ರಂದು ನಡೆಯಬೇಕಿದ್ದ ಉಪಚುನಾವಣೆ

ಆಡಳಿತಾರೂಢ AIADMK ಶಶಿಕಲಾ ಬಣದಿಂದ ಮತದಾರರಿಗೆ 89ಕೋಟಿ ರೂ.ಗಳನ್ನು ಹಂಚಲಾಗಿದೆ ಎಂಬ ಸಂಗತಿಯನ್ನು ಐಟಿ ಅಧಿಕಾರಿಗಳು ಖಚಿತಪಡಿಸಿದ ಬೆನ್ನಲ್ಲೇ ಏ.12ರಂದು ನಡೆಯಬೇಕಿದ್ದ ಆರ್.ಕೆ.ನಗರ ಉಪಚುನಾವಣೆಯನ್ನು ರದ್ದಾಗಿದೆ.

ಖಚಿತ ದಾಖಲೆ ಸಿಕ್ಕಿದ್ದರಿಂದ ಚುನಾವಣೆ ರದ್ದುಗೊಳಿಸಿದ ಆಯೋಗ

ಇನ್ನು ಆದಾಯ ತೆರಿಗೆ ಅಧಿಕಾರಿಗಳು ಶಶಿಕಲಾರ ಪರಮಾಪ್ತ ಮತ್ತು ಆರೋಗ್ಯ ಸಚಿವ ಡಾ.ಸಿ.ವಿಜಯಭಾಸ್ಕರ್ ಮನೆ, ಕಚೇರಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಭಾರೀ ಅಕ್ರಮವನ್ನು ಪತ್ತೆ ಮಾಡಿದ್ದರು. ಆರ್.ಕೆ.ನಗರ ಉಪಚುನಾವಣೆಗಾಗಿ AIADMK ಅಭ್ಯರ್ಥಿ ಟಿ.ಟಿ.ವಿ.ದಿನಕರ್ ಪರವಾಗಿ ಮತ ಚಲಾಯಿಸಲು ಪಕ್ಷದ ಕಾರ್ಯಕರ್ತರು ಮತದಾರಿಗೆ ತಲಾ 4000 ರೂಪಾಯಿಗಳಂತೆ 89 ಕೋಟಿ ರೂಪಾಯಿಗಳನ್ನು ಹಂಚಿರುವುದು ದೃಢಪಟ್ಟಿತ್ತು. ವೋಟಿಗಾಗಿ ನೋಟಿನ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಆರ್​.ಕೆ.ನಗರ ಕ್ಷೇತ್ರದ ಉಪಚುನಾವಣೆ ರದ್ದುಗೊಳಿಸಿದೆ.

ಒಟ್ಟಿನಲ್ಲಿ ಏಪ್ರಿಲ್​ 12ರಂದು ನಡೆಯಬೇಕಿದ್ದ ಚೆನ್ನೈನ ಆರ್​.ಕೆ.ನಗರ ಬೈ ಎಲೆಕ್ಷನ್​ ರದ್ದಾಗಿದೆ. ಇದರಿಂದ ಹಣ ಹಂಚಿದ ಪಕ್ಷಗಳು ಹಣ ಕಳೆದುಕೊಂಡು ಕಂಗಾಲಾಗಿವೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐದು ವರ್ಷ ಬಳಿಕ ಖುಲಾಯಿಸಿದ ಅದೃಷ್ಠ, 24 ಲಕ್ಷ ರೂ ದುಬೈ ಲಾಟರಿ ಗೆದ್ದ ಭಾರತ ಮೂಲದ ನರ್ಸ್‌
ಕೆಎಚ್‌ಬಿ ಬಡಾವಣೆ ನಿರ್ಮಾಣದಲ್ಲಿ ಭಾರೀ ಭ್ರಷ್ಟಾಚಾರ, ದಾಖಲೆಗಳಲ್ಲಿ ಒಂದು, ವಾಸ್ತವದಲ್ಲಿ ಇನ್ನೊಂದು!