ತಾಯಿ ಫೋಟೋ ತೋರಿಸಿ ಹಣ ಕೀಳುವ ಸ್ಯಾಂಡಲ್‌'ವುಡ್ ನಟಿ ವಿರುದ್ಧ ಕಂಪ್ಲೇಟ್: ವಾಪಸ್ ಕೇಳಿದರೆ ಎಮೋಷನಲ್‌ ಬ್ಲ್ಯಾಕ್‌'ಮೇಲ್

Published : Jun 25, 2017, 08:35 AM ISTUpdated : Apr 11, 2018, 12:47 PM IST
ತಾಯಿ ಫೋಟೋ ತೋರಿಸಿ ಹಣ ಕೀಳುವ ಸ್ಯಾಂಡಲ್‌'ವುಡ್ ನಟಿ ವಿರುದ್ಧ  ಕಂಪ್ಲೇಟ್: ವಾಪಸ್ ಕೇಳಿದರೆ ಎಮೋಷನಲ್‌ ಬ್ಲ್ಯಾಕ್‌'ಮೇಲ್

ಸಾರಾಂಶ

ಆಕೆ  ತನ್ನ ತಾಯಿಯ ಫೋಟೋ ತೋರಿಸಿ  ಲಕ್ಷಾಂತರ ರೂಪಾಯಿ ತೆಗೆದುಕೊಳ್ಳುತ್ತಾಳೆ. ಕೊಟ್ಟ ದುಡ್ಡನ್ನು ವಾಪಸ್ ಕೇಳಿದರೆ ಫೇಸ್‌'ಬುಕ್‌'ನಲ್ಲಿ ಎಮೋಷನಲ್ ಬ್ಲಾಕ್‌'ಮೇಲ್ ಮಾಡುತ್ತಾಳೆ. ಅಷ್ಟಕ್ಕೂ ನೀನ್ಯಾರು ಅಂತಾ ಕೇಳಿದರೆ ನಾನು ಸ್ಯಾಂಡಲ್‌'ವುಡ್ ಅಪ್ ಕಮಿಂಗ್ ಹಿರೋಯಿನ್ ಎನ್ನುತ್ತಾಳೆ. ಅಷ್ಟಕ್ಕೂ ಆ ನಟಿ ಯಾರು? ಅವಳು ಮಾಡಿರುವ ಮೋಸವಾದರೂ ಏನು? ಇಲ್ಲಿದೆ ವಿವರ.

ಬೆಂಗಳೂರು(ಜೂ.25): ಆಕೆ  ತನ್ನ ತಾಯಿಯ ಫೋಟೋ ತೋರಿಸಿ  ಲಕ್ಷಾಂತರ ರೂಪಾಯಿ ತೆಗೆದುಕೊಳ್ಳುತ್ತಾಳೆ. ಕೊಟ್ಟ ದುಡ್ಡನ್ನು ವಾಪಸ್ ಕೇಳಿದರೆ ಫೇಸ್‌'ಬುಕ್‌'ನಲ್ಲಿ ಎಮೋಷನಲ್ ಬ್ಲಾಕ್‌'ಮೇಲ್ ಮಾಡುತ್ತಾಳೆ. ಅಷ್ಟಕ್ಕೂ ನೀನ್ಯಾರು ಅಂತಾ ಕೇಳಿದರೆ ನಾನು ಸ್ಯಾಂಡಲ್‌'ವುಡ್ ಅಪ್ ಕಮಿಂಗ್ ಹಿರೋಯಿನ್ ಎನ್ನುತ್ತಾಳೆ. ಅಷ್ಟಕ್ಕೂ ಆ ನಟಿ ಯಾರು? ಅವಳು ಮಾಡಿರುವ ಮೋಸವಾದರೂ ಏನು? ಇಲ್ಲಿದೆ ವಿವರ.

ಹೇಗೆಲ್ಲಾ  ಅಮಾಯಕರನ್ನು ವಂಚಿಸಬುದು ಎಂಬುದಕ್ಕೆ ಬೆಸ್ಟ್ ಎಕ್ಸಾಂಪಲ್ ಈಕೆಯೇ. ಅಂದಹಾಗೆ ಈಕೆ ಸ್ಯಾಂಡಲ್‌'ವುಡ್‍ನ ಜೂನಿಯರ್ ಆರ್ಟಿಸ್ಟ್ ಅಂತೆ. ಸುಖಾನ್ಯ, ಕನ್ಯಾಸುಖ, 'ಸು' ಕನ್ಯಾ ಅಂತೆಲ್ಲ  ಹೆಸರುಗಳನ್ನ ಇಟ್ಟುಕೊಂಡು ಅಮಾಯಕ ಜನರಿಗೆ ಲಕ್ಷಾಂತರ ರೂಪಾಯಿಯನ್ನು ವಂಚಿಸಿದ್ದಾಳೆ. ಈಕೆಯಿಂದ ಮೋಸ ಹೋದವರು ಈಗ ಕಣ್ಣು ಬಾಯಿ ಬಿಟ್ಕೊಂಡು ಕೊಟ್ಟ ಸಾಲವನ್ನು ಮತ್ತೆ ಪಡೆದುಕೊಳ್ಳಕ್ಕೆ ಆಕೆಯನ್ನು ಗೋಗರೆಯುತ್ತಿದ್ದಾರೆ.

ಸ್ಯಾಂಡಲ್'​​​ವುಡ್​​ನಲ್ಲಿ ಜುನಿಯರ್​​ ಆರ್ಟಿಸ್ಟ್​​​ ಆಗಿರುವ ಈಕೆ  ಫೇಸ್​​ಬುಕ್ನಲ್ಲಿ 5 ವರ್ಷಗಳ ಹಿಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತನ್ನ ತಾಯಿಯ  ಪೋಟೋವೊಂದನ್ನ ಆಫ್​​'ಲೋಡ್​​ ಮಾಡುತ್ತಾಳೆ. ಆಪ್ಲೋಡ್ ಮಾಡಿದ ನಂತರ ತನ್ನ ತಾಯಿಗೆ ಆಫರೇಷನ್​​, ಡಿಸ್ಟಾರ್ಜ್​​​, ಅಂತೆಲ್ಲಾ ನಾಟಕಗಳ ಮಾತನಾಡಿ ಅಮಾಯಕರ ಬಳಿ 5 ಸಾವಿರದಿಂದ ಲಕ್ಷಾಂತರ ರೂಪಾಯಿ ಸಾಲ ​​​ಪಡೆಯುತ್ತಾಳೆ. ಸಾಲ ಕೊಟ್ಟವರು ವಾಪಸ್ಸು  ಹಣವನ್ನು ಕೇಳಿದರೆ ಆತ್ಮಹತ್ಯೆ ನಾಟಕವನ್ನಾಡಿ ಅಮಾಯಕರನ್ನು ಎಮೋಷನಲ್​​ ಬ್ಲಾಕ್​​ಮೇಲ್​​ ಮಾಡುತ್ತಾಳೆರ. ಹೀಗೆ ಈಕೆಯಿಂದ ಮೋಸ ಹೋದವರು ನಗರದ ಹಲವು ಪೊಲೀಸ್​​ ಠಾಣೆಗಳಲ್ಲಿ  ದೂರು ದಾಖಲಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಿಲ್ಲ.

ಇನ್ನು  ಈಕೆಯಿಂದ ಮೋಸಹೋದವರ ಸಾಲು ಸಾಲು ದಂಡೇ ಇದೆ. ಕೊಟ್ಟ ದುಡ್ಡನ್ನು ಈಕೆಯಿಂದ ವಾಪಸ್ಸು ಪಡೆಯಲೂ ಆಗದೆ, ಮೋಸಹೋದ ಕಥೆಯನ್ನ ತಮ್ಮ ಮನೆಯವರಿಗೂ ಹೇಳಲೂ ಆಗದೇ ಇಕ್ಕಟ್ಟಿನ  ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಿತ್ತೂರು ಕರ್ನಾಟಕಕ್ಕೆ 5 ಸಾವಿರ ಕೋಟಿ ನೀಡಿ, ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ: ಶಾಸಕ ರಾಜು ಕಾಗೆ
ಪುರುಷರಿಗೆ ಮಾತ್ರವಲ್ಲ ಮೊಬೈಲ್‌ ಸೇಫ್ಟಿಗೆ ಬಂದಿದೆ ಕಾಂಡೋಮ್‌, ಏನಿದು USB ಕಾಂಡೋಮ್‌?