ಲೋಕಸಭಾ ಚುನಾವಣಾ ಕಣಕ್ಕೆ ಟಾಲಿವುಡ್ ಪವರ್ ಸ್ಟಾರ್ : ಮೈತ್ರಿಯೊಂದಿಗೆ ಸ್ಪರ್ಧೆ

Published : Jan 25, 2019, 11:25 AM ISTUpdated : Jan 25, 2019, 11:34 AM IST
ಲೋಕಸಭಾ ಚುನಾವಣಾ ಕಣಕ್ಕೆ ಟಾಲಿವುಡ್ ಪವರ್ ಸ್ಟಾರ್ : ಮೈತ್ರಿಯೊಂದಿಗೆ ಸ್ಪರ್ಧೆ

ಸಾರಾಂಶ

ಈಗಾಗಲೇ ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಇದೇ ವೇಳೆ ವಿವಿಧ ಪಕ್ಷಗಳು ಸಾಕಷ್ಟು ತಯಾರಿಯಲ್ಲಿ ತೊಡಗಿಕೊಂಡಿದ್ದು, ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಪವನ್ ಕಲ್ಯಾಣ್ ಜನಸೇನಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ. 

ಅಮರಾವತಿ : ಈಗಾಗಲೇ ಮಹಾಘಟಬಂಧನ್ ದಿಂದ ದೂರ ಸರಿದು ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಆಂಧ್ರ ಪ್ರದೇಶದಲ್ಲಿ ಸ್ಪರ್ಧೆ ಚಂದ್ರಬಾಬು ನಾಯ್ಡು ತೀರ್ಮಾನಿಸಿದ್ದಾರೆ. 

ಆದರೆ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ, ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ. 

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಇದೇ ವೇಳೆ ಟಿಡಿಪಿಗೆ ವೈಎಸ್ ಆರ್ ಕಾಂಗ್ರೆಸ್ ನ್ನು ಸೋಲಿಸುವುದು ರಾಜ್ಯದಲ್ಲಿ ದೊಡ್ಡ ಚಾಲೆಂಜ್ ಆಗಿದ್ದು, ಈ ನಿಟ್ಟಿನಲ್ಲಿ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. 

ಈ ಹಿಂದೆಯೇ  ಚಂದ್ರಬಾಬು ನಾಯ್ಡು ಸುಳಿವೊಂದನ್ನು ನೀಡಿದ್ದು ಮಾರ್ಚ್ ವೇಳೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಸ್ಪಷ್ಟ  ನಿರ್ಧಾರ ಹೊರ ಬೀಳಲಿದೆ. 

ಕಾಂಗ್ರೆಸ್ ಗೆ ಹಿನ್ನಡೆ : ಮೈತ್ರಿಯಿಂದ ಮತ್ತೊಂದು ಪಕ್ಷ ಹಿಂದಕ್ಕೆ

2014ರಲ್ಲಿ ಚಂದ್ರಬಾಬು ನಾಯ್ಡು ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಹಾಗೂ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಬಳಿಕ ಈ ಮೈತ್ರಿ ಮುರಿದು ಬಿದ್ದಿತ್ತು. 

ಕಳೆದ ವರ್ಷ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಅಸಮಾಧಾನಗೊಂಡ  ನಾಯ್ಡು NDA ಮೈತ್ರಿಯಿಂದ ದೂರ ಸರಿದಿದ್ದರು. ಇದೀಗ ಮತ್ತೊಂದು ಮೈತ್ರಿಯೊಂದಿಗೆ ಲೋಕಸಭಾ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ. 

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!