
ಅಮರಾವತಿ : ಆಂಧ್ರ ಪ್ರದೇಶದ ತೆಲುಗು ದೇಶಂ ಪಕ್ಷದ ಮುಖಂಡ ಚಂದ್ರಬಾಬು ನಾಯ್ಡು ಅವರು ತಮ್ಮ ಆಸ್ತಿ ವಿವರವನ್ನು ಘೋಷಿಸಿಕೊಂಡಿದ್ದಾರೆ.
ಆಸ್ತಿ ಘೋಷಣೆಯ ಪ್ರಕಾರ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಬಳಿ 2.99 ಕೋಟಿ ಮೊತ್ತದ ಆಸ್ತಿ ಇದ್ದು, ಅವರ ಮೂರು ವರ್ಷದ ಮೊಮ್ಮಗ ನರ ದೇವಾನ್ಶ್ ಅವರು 18.71 ಕೋಟಿ ಮೊತ್ತದ ಆಸ್ತಿ ಒಡೆಯರಾಗಿದ್ದಾರೆ. ತಾತನಿಗಿಂತ ಮೊಮ್ಮಗನ ಆಸ್ತಿ 6 ಪಟ್ಟು ಹೆಚ್ಚಿನ ಪ್ರಮಾಣದಲ್ಲಿದೆ.
ಚಂದ್ರಬಾಬು ನಾಯ್ಡು ಅವರ ಆಸ್ತಿ ಕಳೆದ ವರ್ಷಕ್ಕಿಂತ ಈ ವರ್ಷ 46 ಲಕ್ಷದಷ್ಟು ಏರಿಕೆಯಾಗಿದೆ.
ಚಂದ್ರಬಾಬು ನಾಯ್ಡು ಅವರ ಪುತ್ರ ಲೋಕೇಶ್ ಅವರ ಪುತ್ರ ದೇವಾನ್ಶ್, ಅಪ್ಪ ಹಾಗೂ ತಾತನಿಗಿಂತಲೂ ಶ್ರೀಮಂತರಾಗಿದ್ದಾರೆ.
ಇನ್ನು ಚಂದ್ರಬಾಬು ನಾಯ್ಡು ಅವರ ಪತ್ನಿ ಭುವನೇಶ್ವರಿ ದೇವಿ ಕುಟುಂಬದಲ್ಲಿ ಎಲ್ಲರಿಗಿಂತಲೂ ಶ್ರೀಮಂತೆಯಾಗಿದ್ದು ಅವರ ಆಸ್ತಿ ಮೊತ್ತ 31 ಕೋಟಿಯಷ್ಟಿದೆ.