ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂಭಾವನೆ ಎಷ್ಟು ಗೊತ್ತಾ?

Published : Nov 19, 2017, 09:05 PM ISTUpdated : Apr 11, 2018, 12:40 PM IST
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂಭಾವನೆ ಎಷ್ಟು ಗೊತ್ತಾ?

ಸಾರಾಂಶ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಯಾಂಡಲ್'ವುಡ್ ನಲ್ಲಿ ಬಾಕ್ಸ್ ಅಫೀಸ್ ಸುಲ್ತಾನ್ ಅಂತ ಬ್ರಾಂಡ್ ಆಗಿರೋ ನಟ. ಸದ್ಯಕ್ಕೆ ತಾರಕ್ ಸಿನಿಮಾದ ಯಶಸ್ಸಿನ ಅಲೆಯಲ್ಲಿರೋ ಸಾರಥಿಯ ಸಂಭಾವನೆ ಮತ್ತೆ ಗಗನಕ್ಕೆ ಏರಿದೆ. ಅಷ್ಟಕ್ಕೂ ಚಾಲೆಂಜಿಂಗ್ ಸ್ಟಾರ್ ಸಂಭಾವನೆ ಕೇಳಿದ್ರೆ ಫ್ಯಾನ್ಸ್  ಥ್ರಿಲ್ ಆಗೋದು ಗ್ಯಾರಂಟಿ. ಆದರೆ ದರ್ಶನ್ ಇವತ್ತು ಕೋಟಿ ಕೋಟಿ ಸಂಭಾವನೆ ತೆಗೆದುಕೊಳ್ಳುವುದರ ಹಿಂದೆ ಗೆಲ್ಲುವ ಹಠ, ಒಂದಿಷ್ಟು ಹಸಿವು ಹಾಗೂ ಅವಮಾನಗಳು, ಒಬ್ಬ ಲೈಟ್ ಬಾಯ್'ನ ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಡಿದೆ.

ಬೆಂಗಳೂರು (ನ.19): ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಯಾಂಡಲ್'ವುಡ್ ನಲ್ಲಿ ಬಾಕ್ಸ್ ಅಫೀಸ್ ಸುಲ್ತಾನ್ ಅಂತ ಬ್ರಾಂಡ್ ಆಗಿರೋ ನಟ. ಸದ್ಯಕ್ಕೆ ತಾರಕ್ ಸಿನಿಮಾದ ಯಶಸ್ಸಿನ ಅಲೆಯಲ್ಲಿರೋ ಸಾರಥಿಯ ಸಂಭಾವನೆ ಮತ್ತೆ ಗಗನಕ್ಕೆ ಏರಿದೆ. ಅಷ್ಟಕ್ಕೂ ಚಾಲೆಂಜಿಂಗ್ ಸ್ಟಾರ್ ಸಂಭಾವನೆ ಕೇಳಿದ್ರೆ ಫ್ಯಾನ್ಸ್  ಥ್ರಿಲ್ ಆಗೋದು ಗ್ಯಾರಂಟಿ. ಆದರೆ ದರ್ಶನ್ ಇವತ್ತು ಕೋಟಿ ಕೋಟಿ ಸಂಭಾವನೆ ತೆಗೆದುಕೊಳ್ಳುವುದರ ಹಿಂದೆ ಗೆಲ್ಲುವ ಹಠ, ಒಂದಿಷ್ಟು ಹಸಿವು ಹಾಗೂ ಅವಮಾನಗಳು, ಒಬ್ಬ ಲೈಟ್ ಬಾಯ್'ನ ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಡಿದೆ.

ಕರಿಯ ಸಿನಿಮಾದಿಂದ ಹಿಡಿದು ಕುರುಕ್ಷೇತ್ರ  ಸಿನಿಮಾವರೆಗೂ ದರ್ಶನ್ ಲಕ್ಷ ಹಾಗೂ ಕೋಟಿ ಕೋಟಿ ಸಂಭಾವನೆ ಪಡೆದಿದ್ದಾರೆ. ಅದರಲ್ಲಿ ಬಾಕ್ಸ್  ಆಫೀಸ್ ಹಿಟ್ ಆದ ಸಿನಿಮಾ ಕಲಾಸಿಪಾಳ್ಯ. ಈ ಸಿನಿಮಾಕ್ಕೆ ದರ್ಶನ್ 72 ಲಕ್ಷ ಸಂಭಾವನೆಯನ್ನ ಪಡೆದಿದ್ದರು. ದರ್ಶನ್ ಖಾಕಿ ತೊಟ್ಟು ಫಸ್ಟ್ ಟೈಮ್ ಖಡಕ್ ಪೊಲೀಸ್  ಆಗಿ ಕಾಣಿಸಿಕೊಂಡ ಸಿನಿಮಾ ಅಯ್ಯ. ಈ ಸಿನಿಮಾಕ್ಕೆ  ಬರೋಬ್ಬರಿ 75 ಲಕ್ಷ ಸಂಭಾವನೆ ಪಡೆದಿದ್ದರು.  2008ರಲ್ಲಿ ದರ್ಶನ್'ಗೆ ಬಿಗ್ ಹಿಟ್ ಕೊಟ್ಟ ಸಿನಿಮಾ ಗಜ. ಮಾಸ್ ಅಂಡ್ ಕ್ಲಾಸ್ ಅವತಾರದಲ್ಲಿ ಕಾಣಿಸಿಕೊಂಡು ದರ್ಶನ್ ಈ ಚಿತ್ರಕ್ಕಾಗಿ ಪಡೆದ ಸಂಭಾವನೆ  80 ಲಕ್ಷ.  ಮಾಸ್ ಹೀರೋ ಅಂತ ಬ್ರಾಂಡ್ ಆಗಿದ್ದ ದರ್ಶನ್ ಫಸ್ಟ್ ಟೈಮ್ ಐತಿಹಾಸಿಕ ಸಿನಿಮಾ ಮಾಡಿ ಬೆಳ್ಳಿ ತೆರೆ ಮೇಲೆ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನಾಗಿ ಮಿಂಚಿದರು. ನಿರ್ಮಾಪಕ ಆನಂದ್ ಅಪ್ಪುಗೊಳ್ ದರ್ಶನ್ ಕೊಟ್ಟ ಸಂಭಾವನೆ ಕೇಳಿದ್ರೆ ಆಶ್ಚರ್ಯಪಡೋದು ಗ್ಯಾರಂಟಿ.  ಲಕ್ಷ , ಒಂದು ಕೋಟಿ ಅಂತಾ ಇದ್ದ ದರ್ಶನ್ ಸಂಭಾವನೆ ಹೆಚ್ಚಾಗಿದ್ದು ಇಲ್ಲಿದಂಲೇ. ಈ ಸಿನಿಮಾಕ್ಕಾಗಿ ದರ್ಶನ್  ಬರೋಬ್ಬರಿ 4 ಕೋಟಿ.

ದರ್ಶನ್ ಪ್ರೀತಿಸುವ ಹುಡ್ಗನಾಗಿ ಕಾಣಿಸಿಕೊಂಡ ಸಿನಿಮಾ ಬುಲ್ ಬುಲ್. ಈ ಸಿನಿಮಾಕ್ಕೆ ದರ್ಶನ್ ಪಡೆದ ಸಂಭಾವನೆ ನಾಲ್ಕುವರೆ ಕೋಟಿ. ಡಾನ್ ಪಾತ್ರದಲ್ಲಿ  ಜಗ್ಗುದಾದನಾಗಿ ದರ್ಶನ್ ಮಿಂಚಿದ ಸಿನಿಮಾ ಜಗ್ಗುದಾದ. ಈ ಚಿತ್ರಕ್ಕಾಗಿ ದರ್ಶನ್ ಬರೋಬ್ಬರಿ ಐದೂವರೆ ಕೋಟಿ ತೆಗೆದುಕೊಂಡಿದ್ದರು. ಈ ಸಿನಿಮಾ ನಂತರ ದರ್ಶನ್ ಸಂಭಾವನೆ ಏಕಾಏಕಿ  ಆಕಾಶದ ಎತ್ತರಕ್ಕೆ ಏರಿತ್ತು.  ದರ್ಶನ್ ಸಿನಿಮಾ ಕರಿಯರ್'ನ್ನ 50 ನೇ ಸಿನಿಮಾವಾಗಿರೋ ಕುರುಕ್ಷೇತ್ರ ಸಿನಿಮಾಕ್ಕೆ ದರ್ಶನ್ ಬಾರಿ ಮೊತ್ತದ ಸಂಭಾವನೆ ಪಡೆದಿದ್ದಾರೆ. ನಿರ್ಮಾಪಕ ಮುನಿರತ್ನ ಆಪ್ತರ ಪ್ರಕಾರ ದರ್ಶನ್ 7 ಕೋಟಿ ಸಂಭಾವನೆ ಪಡೆದಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಗ್ರಾಹಕರಿಗೆ ಬಂಪರ್‌ ಪ್ಲ್ಯಾನ್‌ ಘೋಷಿಸಿದ Vi: 61 ರೂಪಾಯಿಯ ಮೊಬೈಲ್‌ ರಿಚಾರ್ಜ್‌ಗೆ 25 ಸಾವಿರದ ಬೆನಿಫಿಟ್‌!